ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಕೃಷಿ ಶಿಬಿರ

0
118

ಕಲಬುರಗಿ: “ಕಲಿಕೆಯೊಂದಿಗೆ ಕೌಶಲ್ಯ” ಧ್ಯೇಯದೊಂದಿಗೆ ನಗರದಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕೋಟನೂರ(ಡಿ) ಯಲ್ಲಿ ಭಾಷಾ ನಿಕಾಯ ಹಾಗೂ ಸಮಾಜ ವಿಜ್ಞಾನಗಳ ವಿದ್ಯಾರ್ಥಿನಿಯರಿಗೆ ಒಂದು ದಿನದ ಕೃಷಿ ಪ್ರಾಯೋಗಿಕ ಶಿಬಿರ ಆಯೋಜಿಸಲಾಗಿತ್ತು ಶಿಬಿರದಲ್ಲಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರಾದ ಶ್ರೀ ಅನೀಲ ರಾಠೋಡ್ ಅವರು ಕಲಿಕೆ ಯೊಂದಿಗೆ ಕೌಶಲ್ಯದ ಅಡಿಯಲ್ಲಿ ಇಂತಹ ವಿನೂತನ ಶಿಬಿರ ಹಮ್ಮಿಕೊಂಡಿರುವುದು ಬಹಳ ಶ್ಲಾಘನೀಯ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು ಇಂದು ಕೃಷಿಯ ಬಗ್ಗೆ ಅದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವುದು ಅವಶ್ಯವಾಗಿದೆ .ಇಂದು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ,ಸೌಲಭ್ಯ ಹೆಚ್ಚಾದಷ್ಟು ಕಷ್ಟ ಕಡಿಮೆಯಾಗುತ್ತಿದೆ ಎಂದು ಹೇಳಿದರು.ಕೃಷಿಯ ಬಗ್ಗೆ ಸಂಪೂರ್ಣ ಜ್ಞಾನವನ್ನು ಪಡೆದುಕೊಂಡು ಇಂದು ಯುವಜನಾಂಗ ಸಮಯವ ವ್ಯರ್ಥ ಮಾಡದೆ ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬನೆಯ ಬದುಕನ್ನು ಬಾಳುವಂತವರಾಗಿ ದೇಶದ ಅಭಿವೃದ್ಧಿಗೆ ತಮ್ಮ ಕೈಲಾದ ಸೇವೆ ಮಾಡಬೇಕೆಂದು ಕರೆನಿಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಅವರು ಮಾತನಾಡುತ್ತಾ ಮುಂಬರುವ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜನ್ಸಿ ಬಂದಮೇಲೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗಬಹುದು ಆ ಸಂದರ್ಭದಲ್ಲಿ ಪ್ರತಿಯೊಬ್ಬರು ಕೃಷಿಯ ಕಡೆ ಮುಖ ಮಾಡುವದು ಅನಿವಾರ್ಯವಾಗಬಹುದು ಎಂದರು ವಹಿಸಿಕೊಂಡಿದ್ದರು.

ಶಿಬಿರದಲ್ಲಿ ‌ಮಹಾವಿದ್ಯಾಲಯದ ಸಮಾಜಶಾಸ್ತ್ರ,ಹಿಂದಿ ,ಇತಿಹಾಸ,ಡಾ.ಕನ್ನಡ,ರಾಜ್ಯಶಾಸ್ತ್ರ,ಅರ್ಥಶಾಸ್ತ್ರ ಶಿಕ್ಷಣ ಶಾಸ್ತ್ರ,ವಿಭಾಗದ ಡಾ.ಮಹೇಶ ಗಂವ್ಹಾರ,ಡಾ.ಪ್ರೇಮಚಂದ್ ಚವ್ಹಾಣ, ಡಾ.ಸುಭಾಷ್ ದೊಡ್ಡಮನಿ, ಡಾ.ವಿಶ್ವನಾಥ ದೇವರಮನಿ,ಪ್ರೊ.ಶಿವಲಿಲಾ ಧೋತ್ರೆ,ಪ್ರೊ.ಕವಿತಾ.ಎಮ್.ಪ್ರೊ.ಕವಿತಾ ಠಾಕೂರ,ಪ್ರೊ.ಗೀತಾ ಪಾಟೀಲ,ಪ್ರೋ .ರೀಟಾ ಕುಲಕರ್ಣ,ಡಾ ನಾಗರತ್ನ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಡಾ.ಮಹೇಶ ಗಂವ್ಹಾರ ನಿರೂಪಿಸಿದರು,ಡಾ.ಪ್ರೇಮಚಂದ್ ಚವ್ಹಾಣ ವಂದಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here