ಗಣೇಶ ಉತ್ಸವದ ಸಮಾರಂಭದಲ್ಲಿ ಕನ್ನಡ ಬಳಕೆಗೆ ಕರವೇ ಒತ್ತಾಯ

0
81

ಶಹಾಬಾದ: ಮುಂಬರುವ ತಿಂಗಳಿನಲ್ಲಿ ಬರುವ ಗಣೇಶ ಉತ್ಸವದ ಸಮಾರಂಭದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯನ್ನು ಬಳಸಬೇಕೆಂದು ಒತ್ತಾಯಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ) ವತಿಯಿಂದ ನಗರಸಭೆಯ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ವಿಶ್ವರಾಜ ಫಿರೋಜಾಬಾದ, ಈಗಾಗಲೇ ಕರ್ನಾಟಕ ಸರಕಾರ ಕನ್ನಡ ಬರಹ ಮೂಲಕ ನಾಮಫಲಕಗಳು ಮುದ್ರಣಗೊಳ್ಳಬೇಕೆಂದು ಆದೇಶ ಮಾಡಿರುತ್ತಾರೆ.ಅದರಂತೆ ಬರುವ ಗಣೇಶ ಉತ್ಸವದ ಆಚರಿಸುವ ತಾಲೂಕಿನ ಎಲ್ಲಾ ಕಮಿಟಿಯವರು ನಾಮಫಲಕ, ಬ್ಯಾನರ್,ಧ್ವಜಗಳನ್ನು ಕನ್ನಡದಲ್ಲಿಯೇ ಮುದ್ರಣಗೊಳ್ಳುವಂತೆ ಕ್ರಮವಹಿಸಬೇಕು.ಯಾವುದೇ ಕಾರಣಕ್ಕೂ ಬೇರೆ ಭಾಷೆಯ ನಾಮಫಲಕಗಳನ್ನು ಅಳವಡಿಸದ ಹಾಗೇ ನೋಡಿಕೊಳ್ಳಬೇಕು.ಕನ್ನಡ ನಾಡಿನ ಬದುಕುವ ನಾವು ಕನ್ನಡ ನಾಮಫಲಕ ಅಳವಡಿಕೆಗೆ ಕಡೆಗಣನೆ ತೋರಲಾಗುತ್ತಿದೆ.ಆದ್ದರಿಂದ ಕೂಡಲೇ ಕನ್ನಡ ಅಳವಡಿಕೆಗೆ ಕ್ರಮಕೈಗೊಳ್ಳಬೇಕು.ಇಲ್ಲದಿದ್ದರೇ ಹೋರಾಟ ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷ ರಾಜಶೇಖರ.ಕೆ.ಕೆ, ಶರಣು ತಳವಾರ, ನಿಂಗರಾಜ ಕಮರಡಗಿ,ದೇವರಾಜ ಬಾಳಕ್,ಅಜಯಕುಮಾರ, ದತ್ತು ಹೀರಾಪೂರ, ವಸಂತ, ರಾಜು, ಬಾಬು, ಶಂಭುಲಿಂಗ, ಸೈಯ್ಯದ್ ಸಮದ್ , ವಿಶ್ವನಾಥ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here