ಸೇ 01 ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

0
34

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದ ಒಂದು ವರ್ಷ ಪೂರ್ತಿಗೊಂಡಿರುವ ನಿಮಿತ್ತ ಸೇ 01 ರಂದು ನಗರದ ತಾಜನಗರ ಮುಸ್ಲಿಂ ಸಂಘ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಯುನೈಟೆಡ ಆಸ್ಪತ್ರೆ ಹಾಗೂ ಅಲ್-ಖಮರ ಎಜುಕೇಶನಲ್ ಮತ್ತು ಚಾರಿಟೇಬಲ ಟ್ರಸ್ಟ  ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಬಿಪಿ, ಇಸಿಜಿ, ರಕ್ತ ತಪಾಸಣೆ ಹಾಗೂ ಸುಗರ ಪರೀಕ್ಷೆ, ಕಣ್ಣು ತಪಾಸಣೆ ಸಾಮಾನ್ಯ ರೋಗ ಮಧು ಮೇಹ, ಶ್ವಾಸ ಕೋಶ, ಹೃದಯ ಸಂಬಂಧಿತ ರೋಗ ಇವುಗಳಿಗೆ ಉಚಿತ ತಪಾಸಣೆ ಮಾಡಲಾಗುವುದು.

Contact Your\'s Advertisement; 9902492681

ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ತಪಾಸಣೆಯೊಂದಿಗೆ ಉಚಿತ ಔಷದೋಪಚಾರ ನೀಡಲಾಗುವುದು ಯಾವುದೇ ರೋಗಕ್ಕೆ ಸಂಬಂಧಿಸಿದಂತೆ ರೋಗಿಗೆ ಹೆಚ್ಚಿನ ಔಷದ ಹಾಗೂ ಗುಳಿಗೆಗಳು ಬೇಕಾದಲ್ಲಿ ನಮ್ಮ ಶಿಬಿರದಲ್ಲಿ ತಪಾಸಣೆ ಮಾಡಿಕೊಂಡ ಬಗ್ಗೆ ದಾಖಲಾತಿ ತೋರಿಸಿದ್ದಲ್ಲಿ ಯುನೈಟೆಡ್ ಆಸ್ಪತ್ರೆ ಕಲಬುರಗಿರವರು 20% ದರದಲ್ಲಿ ಕಡಿಮೆ ಮಾಡಿ ಔಷಧಗಳು ಂ ನೀಡುವರು. ಕಣ್ಣಿನ ಆಪ್ರೆಷನ್, ಎಕ್ಸರೆ, ಸಿಟಿ ಸ್ಕ್ಯಾನ್, ಮಾಡಿಸಬೇಕಾದಲ್ಲಿ ಅದಕ್ಕೆ ಕೂಡ ಯುನೈಟೆಡ್ ಆಸ್ಪತ್ರೆಯವರು ನಿಗದಿತ ದರದಲ್ಲಿ 50% ಕಡಿಮೆ ಮಾಡಿ ಕ್ರಮ ಕೈಗೊಳ್ಳುವರು.

ಕಲಬುರಗಿ ನಗರದ ಸಮಸ್ತ ಸಾರ್ವಜನಿಕರು ಸದರಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಹಾಜರಾಗಿ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ಸೈಯ್ಯದ ನಜೀರೊದ್ದಿನ್ ಮುತ್ತವಲ್ಲಿ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಗಿರದಾರ ಜಂಟಿಯಾಗಿ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here