ದೇವರು ಸೃಷ್ಟಿಸಿದ ಜಗತ್ತು ಪ್ರೀತಿಸಬೇಕು

0
20

ಭಾಲ್ಕಿ; ಪಟ್ಟಣದ ಶ್ರೀ ಚನ್ನಬಸವಾಶ್ರಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳು ಪರ್ಯಂತ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರಿಂದ ನಡೆದಬಂದ ಅಲ್ಲಮಪ್ರಭುದೇವರ ವಚನ ದರ್ಶನ ಪ್ರವಚನ ಮಂಗಲ ಸಮಾರಂಭದ ನಡೆಯಿತು.

ಸಮಾರಂಭದ ಸಾನಿಧ್ಯ ವಹಿಸಿ, ದೇವರು ಈ ಸೃಷ್ಟಿಯನ್ನು ನಿರ್ಮಿಸಿದ್ದಾನೆ. ಅವನ ಲೀಲಾವಿನೋದದಿಂದ ಈ ಅದ್ಭುತವಾದ ಸೃಷ್ಟಿ ನಿರ್ಮಾಣಗೊಂಡಿವೆ. ನಾವು ದೇವರನ್ನು ಪ್ರೀತಿಸಲು ಕಲಿಯಬೇಕಾದರೆ ದೇವರು ಸೃಷ್ಟಿಸಿದ ಜಗತ್ತನ್ನು ಪ್ರೀತಿಸುವುದು ಕಲಿಯಬೇಕು. ಜಗತ್ತು ಪ್ರೀತಿಸಿದಾಗಲೇ ದೇವರನ್ನು ಪ್ರೀತಿಸಲು ಸಾಧ್ಯ. ಕಾರಣ ದೇವರು ಕಾಣುವುದಿಲ್ಲ. ದೇವರ ಸೃಷ್ಟಿಯಾದ ಜಗತ್ತು ಕಾಣಿಸುತ್ತದೆ. ಅದಕ್ಕಾಗಿ ಕಾಣಿಸುವುದನ್ನು ಪ್ರೀತಿಸುವ ಮೂಲಕ ಕಾಣಲಾರದ ಪರಮಾತ್ಮನನ್ನು ಪ್ರೀತಿಸಲು ಸಾಧ್ಯವಿದೆ.

Contact Your\'s Advertisement; 9902492681

ಅಂತಹ ಅನುಭವ ಬರಬೇಕಾದರೆ ನಾವು ನಿತ್ಯ ನಿತ್ಯ ಅರ್ಚನೆ, ಅರ್ಪಣೆ, ಅನುಭಾವ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಸಾನಿಧ್ಯ ವಹಿಸಿ, ಒಬ್ಬ ಮಠಾಧೀಶರಾಗಿ, ಕಳೆದ 40 ವರ್ಷಗಳಿಂದ ಶ್ರೀಮಠದಲ್ಲಿ ಪ್ರವಚನ ನೀಡುತ್ತಿರುವ ನಮ್ಮ ಪೂಜ್ಯರು ಏಕೈಕ ಮಠಾಧೀಶರೆಂದು ಹೇಳಲು ಸಂತೋಷವಾಗುತ್ತದೆ.

ಪೂಜ್ಯರ ಜೊತೆಗೆ ಈ ವರ್ಷ ಪೂಜ್ಯ ಶ್ರೀ ಬಸವಲಿಂಗ ದೇವರು ಅಲ್ಲಮಪ್ರಭುದೇವರ ವಚನ ಪ್ರವಚನ ಮಾಡಿರುವುದು ನಮ್ಮೆಲ್ಲರಿಗೆ ಅತ್ಯಂತ ಸಂತೋಷ ಉಂಟು ಮಾಡಿದೆ. ಪೂಜ್ಯರು ನಡೆ-ನುಡಿ ಒಂದಾಗಿಸಿಕೊಂಡು ಸರಳ ಮತ್ತು ಸಾತ್ವಿಕ ಜೀವನ ನಡೆಸುವ ಮೂಲಕ ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ. ಅವರು ಮತ್ತು ಗುರುಗಳು ಪ್ರವಚನವನ್ನು ಆಲಿಸಿದ ತಾವೆಲ್ಲರೂ ನಿಜಕ್ಕೂ ಧನ್ಯರು ಎಂದು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

ಪೂಜ್ಯ ಶ್ರೀ ಬಸವಲಿಂಗ ದೇವರು ಮಾತನಾಡಿ ನಾನು ಒಂದು ತಿಂಗಳು ಪ್ರವಚನ ಮಾಡಲಿಕ್ಕೆ ನನಗೆ ಮೂಲ ಪ್ರೇರಣೆ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಗಳು ಆಗಿದ್ದಾರೆ. ನಾನು ಪೂಜ್ಯರಲ್ಲಿ ಬಸವಣ್ಣನವರನ್ನು ಕಂಡರೆ, ಸಿದ್ಧೇಶ್ವರ ಅಪ್ಪಗಳಲ್ಲಿ ಅಲ್ಲಪ್ರಭುದೇವರನ್ನು ಕಂಡಿದ್ದೇನೆ ಈ ಉಭಯರ ಸಾನಿಧ್ಯದಿಂದ ನನ್ನ ಜೀವನ ಪಾವನವಾಗಿದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ಡಾ.ಗೀತಾ ಈಶ್ವರ ಖಂಡ್ರೆ ವಹಿಸಿದ್ದರು. ಬಸವಗುರುಪೂಜೆ ಉಮಾ ಪ್ರಕಾಶ ಖಂಡ್ರೆ ಅವರಿಂದ ನೆರವೇರಿತು. ಶ್ರಾವಣ ಮಾಸ ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾದ ನಿರ್ಮಲಾ ಚಂದ್ರಕಾಂತ ಪಾಟೀಲ ದಂಪತಿಗಳಿಗೆ ಸನ್ಮಾನಿಸಲಾಯಿತು. ಶಾರದಾ ಬಾಬುರಾವ ಹುಣಜೆ ಪ್ರಸಾದ ದಾಸೋಹ ಮಾಡಿದರು. ದೀಪಕ ಥಮಕೆ ನಿರೂಪಿಸಿದರು. ವೀರಣ್ಣ ಕುಂಬಾರ ಶರಣು ಸಮರ್ಪಣೆ ಮಾಡಿದರು. ಕು. ಸಮೃದ್ಧಿ ಚನ್ನಬಸವಣ್ಣ ಬಳತೆ ವಚನ ಪ್ರಾರ್ಥನೆ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here