ಸಾಮಾಜಿಕ ನ್ಯಾಯದ ಆಯಾಮದಲ್ಲಿ ಸ್ಲಂಗಳ ಅಭಿವೃದ್ಧಿಗೆ ಆಗ್ರಹ

0
33

ಕಲಬುರಗಿ: ಬೆಂಗಳೂರಿನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿ ಪದಾಧಿಕಾರಿಗಳು ಮತ್ತು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಬೆಂಗಳೂರು ನಗರ ಸಮಿತಿ ಸದಸ್ಯರೊಂದಿಗೆ ಮಂಡಳಿಯ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಸ್ಲಂ ಬೋರ್ಡ್ ಆಯುಕ್ತರು ಮತ್ತು ಮುಖ್ಯ ಅಭಿಯಂತರರು ರಾಜ್ಯದ ಸ್ಲಂ ನಿವಾಸಿಗಳ ಕುಂದು-ಕೊರತೆಗಳ ಸಭೆ ನಡೆಸಲಾಯಿತು.

ಸ್ಲಂ ಜನಾಂದೋಲನ ಕರ್ನಾಟಕದ ವಿಷಯ ಸೂಚಿಗಳ ಮೇಲೆ ಚರ್ಚೆ ಮಾಡಿದ ನಂತರ ಪ್ರತಿಕ್ರಿಯಿಸಿ ಮಾತನಾಡಿದ ಮಂಡಳಿಯ ಅಧ್ಯಕ್ಷರು ಕರ್ನಾಟಕ ಸಮಗ್ರ ಕೊಳಗೇರಿ ಅಭಿವೃದ್ಧಿ ನೀತಿ-2016ಕ್ಕೆ ತ್ವರಿತವಾಗಿ ನಿಯಮಾವಳಿ ರೂಪಿಸಿ ಜಿಲ್ಲಾ ಮಟ್ಟದಲ್ಲಿ ಸ್ಲಂಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲು ಕ್ರಮತಗೆದುಕೊಳ್ಳಲಾಗುವುದೆಂದರು.

Contact Your\'s Advertisement; 9902492681

ಸಂಘಟನೆ ಹಲವು ಮೌಲ್ಯಯುತ ಅಂಶಗಳನ್ನು ಮಂಡಳಿಗೆ ನೀಡಿದ್ದು ಇದರಲ್ಲಿ 2024-2025ನೇ ಸಾಲಿನಲ್ಲಿ ಮಂಡಳಿಗೆ ಪ್ರತ್ಯೇಕವಾಗಿ ಸ್ಲಂ ಜನರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಏಕೆಂದರೆ ನಗರಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಸ್ಲಂಗಳಲ್ಲಿ ವಾಸಿಸುತ್ತಿದ್ದು ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಸಹ ಒಲವಿದ್ದುಲೀ ಬಜೆಟ್‍ನಲ್ಲಿ ಅನುದಾನ ಹೆಚ್ಚನ ಮಟ್ಟದಲ್ಲಿ ಸಿಗುವ ಭರವಸೆ ಇದೆ. ಕಳೆದ ವಿಧಾನ ಸಭಾ ಅಧಿವೇಶನದಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಲಂ ಜನರ ಮತ್ತು ವಿಶೇಷ ವರ್ಗಗಳ ಪುನರ್ ವಸತಿಗೆ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲು ಚರ್ಚಿಸಿದ್ದು ಕಂದಾಯ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಭೂಮಿ ಮೀಸಲಿಡಲು ಸರ್ಕಾರ ಸೂಚಿಸಲಿದೆ ಎಂದರು.

ಬರುವ ನಗರೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಲಂ ಜನರು ಬದುಕುವ ಹಕ್ಕಿನ ಆಯಾಮದಲ್ಲಿ ಹೊಸ ಕಾಯಿದೆಯನ್ನು ರೂಪಿಸಲು ಪ್ರಯತ್ನಿಸಲಾಗುವುದು. ಹಕ್ಕುಪತ್ರ ವಿತರಣೆಗಾಗಿ 6 ತಿಂಗಳ ಗಡುವು ನೀಡಿ ಬಾಕಿ ಇರುವ ಹಕ್ಕುಪತ್ರಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ವಿತರಣೆ ಮಾಡಿ ನೋಂದಣಿ ಮಾಡಿಸುವ ಎಲ್ಲಾ ಕ್ರಮಗಳನ್ನು ತಗೆದುಕೊಂಡು ನಗರ ಸ್ಥಳೀಯ ಸಂಸ್ಥೆಗಳು ಖಾತಾ ಮಾಡಿಕೊಡಲು ಪ್ರಸ್ತುತ ತೆರಿಗೆಯನ್ನು ಮಾತ್ರ ಪಾವತಿಸಿಕೊಳ್ಳಲು ಮಂಡಳಿಯಿಂದ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಸ್ಲಂ ಕಾಯಿದೆ ಆಶಯಕ್ಕೆ ವಿರುದ್ಧವಾಗಿರುವ ಮತ್ತು ಖಾಸಗಿ ಸ್ಲಂಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ರದ್ದುಗೊಳಿಸಲಾಗುವುದೆಂದರು. ರಾಜ್ಯದಲ್ಲಿ 1.80 ಲಕ್ಷ ವಸತಿಗಳನ್ನು ಪ್ರಧಾನ್ ಮಂತ್ರಿ ಅವಾಸ್ ಯೋಜನೆ ಮತ್ತು ಇನ್ನಿತರೆ ಯೋಜನೆಗಳಲ್ಲಿ ನಿರ್ಮಾಣ ಮಾಡುತ್ತಿದ್ದು 6 ಸಾವಿರ ಕೋಟಿಗಳನ್ನು ಸರ್ಕಾರ ನೀಡಲು ಒಪ್ಪಿದೆ. ಕೇಂದ್ರದ ಅನುದಾನ ಕಡಿಮೆ ಇದ್ದು ರಾಜ್ಯದ ಅನುದಾನ ಹೆಚ್ಚಿದೆ. ಆದರು ಫಲಾನುಭವಿಗಳ ವಂತಿಕೆ ಕಡಿಮೆ ಮಾಡಲು ವಸತಿ ಸಚಿವರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಮಂಡಳಿ ಬರಿ ವಸತಿ ನಿರ್ಮಾಣ ಮಾಡಲು ಕೆಲಸವಲ್ಲದೆ ಸ್ಲಂ ಜನರಿಗೆ ಶಿಕ್ಷಣ,ಆರೋಗ್ಯ, ಜೀವನೋಪಾಯದಂತಹ ಕಾರ್ಯಕ್ರಮಗಳನ್ನು ಒದಗಿಸಲು ಕಾಯಕಲ್ಪ ನೀಡಲಾಗುವುದೆಂದು ಹೇಳಿದರು.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ, ರಾಜ್ಯ ಸ್ಲಂ ನಿವಾಸಿಗಳ ಬೇಡಿಗಳನ್ನು ವಿಷಯ ಸೂಚಿಗಳನ್ನು ಪ್ರಸ್ತಾಪಿಸಿ ರಾಜ್ಯದಲ್ಲಿ 50 ಲಕ್ಷಕ್ಕೂ ಮೇಲ್ಪಟ್ಟು ಸ್ಲಂ ನಿವಾಸಿಗಳಿದ್ದು ನಮ್ಮ ಜನಸಂಖ್ಯೆಗೆ ಅನುಗುಣವಾಗಿ 1,000 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಈಗಿರುವ ಸ್ಲಂ ಕಾಯಿದೆ ಸಾರ್ವಜನಿಕ ಆರೋಗ್ಯ ಕಾಪಾಡುವ ಪರಿಚ್ಛೇಧ 47ರ ಅಡಿಯಲ್ಲಿ ಜಾರಿಯಾಗಿದ್ದು, ಪರಿಚ್ಛೇಧ 21ರಲ್ಲಿ ಬದುಕುವ ಹಕ್ಕಿನ ಅಡಿಯಲ್ಲಿ ಹಾಗೂ ಮುಂಬರುವ ನಗರೀಕರಣದ ವೇಗಕ್ಕೆ ಅನುಗುಣವಾಗಿ ಹೊಸ ಕಾಯಿದೆ ಅಗತ್ಯವಿದೆ.

2016ರಲ್ಲಿ ಜಾರಿಯಾದ ಸ್ಲಂ ನೀತಿ, ಸ್ಲಂ ನಿವಾಸಿಗಳ ಪಾಲ್ಗೊಳ್ಳುವ ಅವಕಾಶ ನೀಡಿದ್ದು ಈ ನೀತಿಯನ್ನು  ಸರ್ಕಾರ ಅನುಷ್ಠಾನಗೊಳಿಸಬೇಕು. 2016-17ರ ಬಜೆಟ್ ಭಾಷಣದಲ್ಲಿ ನಗರ ಲ್ಯಾಂಡ್ ಬ್ಯಾಂಕ್ ಯೋಜನೆಯನ್ನು ಘೋಷಣೆ ಮಾಡಿದ್ದು ಅದರಂತೆಯೇ ಕ್ರಮವಹಿಸಿ, ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ನೀಡಿ ಸ್ಲಂ ಜನರ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಸರ್ಕಾರ ಮುಂದಾಗಬೇಕು. ಸ್ಲಂ ನಿವಾಸಿಗಳ ಸಮಸ್ಯೆಯನ್ನು ಸಾಮಾಜಿಕ ಆಯಾಮದಲ್ಲಿ ನೋಡಿ ಅಭಿವೃದ್ಧಿಯಲ್ಲಿ ಪಾಲು ನೀಡಲು ಮುಂದಾಗಲು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಂಡಳಿ ಆಯುಕ್ತರಾದ ಆಶೋಕ್, ಮುಖ್ಯ ಇಂಜಿನಿಯರ್ ಬಾಲರಾಜ್, ತಾಂತ್ರಿಕ ಅಭಿಯಂತರರಾದ ಸುಧೀರ್, ಎಲ್ಲಾ ವಿಭಾಗಗಳ ಇಂಜಿನಿಯರ್‍ಗಳು ಮತ್ತು ಕಂದಾಯ ಅಧಿಕಾರಿಗಳು, ಅಧ್ಯಕ್ಷರ ವಿಶೇಷ ಅಧಿಕಾರಿಗಳು ಸೇರಿದಂತೆ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಮಿತಿ ಪದಾಧಿಕಾರಿಗಳಾದ ಬೆಂಗಳೂರಿನ ಚಂದ್ರಮ್ಮ, ರಾಯಚೂರಿನ ಜನಾರ್ಧನ್ ಹಳ್ಳಿಬೆಂಚಿ, ದಾವಣಗೆರೆಯ ರೇಣುಕಾ ಎಲ್ಲಮ್ಮ, ಬಳ್ಳಾರಿಯ ಶೇಖರ್ ಬಾಬು, ಕಲ್ಬುರ್ಗಿ-ಯಾದಗಿರಿಯ ರೇಣುಕ ಸರಡಗಿ, ಚಿತ್ರದುರ್ಗದ ಸುಧಾ, ತುಮಕೂರಿನ ಅರುಣಾ, ಬೆಂಗಳೂರು ನಗರ ಸಮಿತಿಯ ಮಂಜುಬಾಯ್, ತೇಜಸ್ ಕುಮಾರ್, ಆಂಜನೇಯ, ರೇಖಾ ಕಂಬಳಿ, ಅರಸ್, ಶ್ರೀನಿವಾಸ್, ವೆಳ್ಳಿಯಮ್ಮ, ಶಕುಂತಲ್, ಜಲಗೇರಮ್ಮ, ವೆಂಕಟಮ್ಮ, ಜ್ಯೋತಿ, ಕಲಾವತಿ, ಆನಂದ್ ಸೇರಿದಂತೆ ಮುತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here