ಕೊಲೆಯಾದ ಯುವತಿ ಕುಟುಂಬಕ್ಕೆ ಪರಿಹಾರ ನೀಡಲು ಲಚ್ಚಪ್ಪ ಜಮಾದಾರ ಆಗ್ರಹ

0
30

ಕಲಬುರಗಿ: ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯುವತಿಯನ್ನು ಅಪಹರಿಸಿ,ಬಲತ್ಕಾರ ಹಾಗೂ ಕೊಲೆ ಮಾಡಿ ಹುಲ್ಲಿನ ಪೊದೆಯೊಳಗೆ ಶವವನ್ನು ಬಿಸಾಡಿ ಹೋಗಿರುವ ದುರ್ಘಟನೆಯನ್ನು ಖಂಡಿಸುವುದಾಗಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಖಂಡಿಸಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಆದರೆ, ಇಲ್ಲಿಯವರೆಗೆ ಈ ಕೃತ್ಯವೆಸಗಿದ ಆರೋಪಿಗಳನ್ನು ಕಠಿಣ ಶಿಕ್ಷಕೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಬಸವಕಲ್ಯಾಣ ತಾಲೂಕಿನ ಗುಣತೀರ್ಥ ಗ್ರಾಮದಲ್ಲಿ ಕಡುಬಡತನದಲ್ಲಿ ವಿದ್ಯಾವಂತೆಯಾಗಿದ್ದ ಯುವತಿಯೊಂದಿಗೆ, ಘೋರ ಕೃತ್ಯಕ್ಕೆ ಬಲಿಯಾಗಿರುವಕುಟುಂಬ ಅಘಾತಕ್ಕೆ ಒಳಗಾಗಿ ಕಣ್ಣಿರಿನ ಕಡಿಲಿನಲ್ಲಿ ಮುಳಗಿದೆ. ಸರಕಾರ ಈ ಕೂಡಲೇ ಆರೋಪಿಗಳನ್ನು ಕಠಿಣ ಶಿಕ್ಷಕೆಗೆ ಗುರಿಪಡಿಸಿ ಅನ್ಯಾಯಕ್ಕೆ ಒಳಗಾದಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಸದರಿ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಕೊಡಿಸಿ, 50 ಲಕ್ಷ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ರಾಮಲಿಂಗ ನಾಟೇಕಾರ, ಮಲ್ಲಿಕಾರ್ಜುನ ಗುಡಬಾ, ಪಿಂಟು ಜಮಾದಾರ, ಭೀಮಶಾ ಖನ್ನಾ, ದೇವಿಂದ್ರ ಜಮಾದಾರ, ಅರುಣಕುಮಾರ ಇನಾಂದಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here