ಬೆಂಬಲಬೆಲೆ ಯೋಜನೆಯಡಿ ಉದ್ದಿನ ಕಾಳು ಹಾಗೂ ಸೋಯಾಬಿನ್ ಖರೀದಿ ಪ್ರಕ್ರಿಯೆ ಪ್ರಾರಂಭ
ಕಲಬುರಗಿ: 2024-25 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಉದ್ದಿನ ಕಾಳು ಹಾಗೂ ಸೋಯಾಬಿನ್ ಖರೀದಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ರೈತರು ಯೋಜನೆಯ ಲಾಭ ಪಡೆದುಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಉದ್ದಿನ ಕಾಳು ಹಾಗೂ ಸೋಯಾಬಿನ್ (ಹಳದಿ ) ಖರೀದಿ ಮಾಡುವ ಉದ್ದೇಶದಿಂದ ಸರ್ಕಾರ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತವನ್ನು ನೋಡಲ್ ಏಜೆನ್ಸಿಯನ್ನಾಗಿ ನೇಮಿಸಿದೆ. ಈ ಹಿನ್ನೆಲೆ ಯಲ್ಲಿ, ಕಲಬುರಗಿ ಜಿಲ್ಲೆಯಲ್ಲಿ ಪರಿಣಿತ ಹೊಂದಿದ 29 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಅಥವಾ ರೈತ ಉತ್ಪಾದಕ ಸಂಘಗಳನ್ನು ಗುರಿತಿಸಲಾಗಿದೆ. ಹಾಗಾಗಿ, ತಕ್ಷಣ ರೈತರು ನೋಂದಣಿ ಕಾರ್ಯವನ್ನು ಮಾಡಕೊಳ್ಳಬೇಕು. ಈ ಪ್ರಕ್ರಿಯೆಗೆ ಸೆಪ್ಟೆಂಬರ್ 07 ರಿಂದ ಅಕ್ಟೋಬರ್ 20 ರವರೆಗೆ ನಿಗದಿಪಡಿಸಲಾಗಿದ್ದು ಸೆಪ್ಟೆಂಬರ್ 7 ರಿಂದ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ಖರೀದಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮುಂದುವರೆದು ಹೇಳಿರುವ ಸಚಿವರು ಜಿಲ್ಲೆಯ ರೈತರು ಉದ್ದಿನ ಬೇಳೆ ಹಾಗೂ ಸೋಯಾಬಿನ್ ಬೆಳೆಗಳನ್ನು ನಿಗದಿಪಡಿಸಲಾದ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.
ನಿಗದಿಪಡಿಸಿದ ಕೇಂದ್ರಗಳು ಈ ಕೆಳಗಿನಂತಿವೆ: 1) ಕಲಬುರಗಿ : 1) ಮಹಾಗಾಂವ್, 2) ದೇವರ ದಾಸಿಮಯ್ಯ ರೈತ ಉತ್ಪಾದಕರ ಕಂಪನಿ ಕಮಲಾಪುರ, 3) ಗ್ರಾಮೀಣ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಕಮಲಾಪುರ.
2) ಆಳಂದ : 1) ಪಡಸಾವಳಗಿ 2) ಹಿರೋಳಿ, 3) ಮನ್ನಳ್ಳಿ, 4) ಕಜೂರಿ, 5) ಯಳಸಂಗಿ, 6)ಕವಲಗಾ, 7) ಕಿಣ್ಣಿ ಸುಲ್ತಾನ, 8) ಮಡಿಕಿ, 9) ಅಂಬಲಗಾ, 10) ರುದ್ರವಾಡಿ, 11) ಹೋದಲೂರು, 12) ನಿರುಡಗಿ, 13) ಬೋದನ, 14) ಸರಸಂಬಾ ಹಾಗೂ 15) ತಡಕಲ್.
3) ಚಿತ್ತಾಪುರ : 1) ಕಾಳಗಿ, 2) ಟೆಂಗಳಿ, 3) ನೀಲಕಂಠ ಕಾಳೇಶ್ವರ ರೈತ ಉತ್ಪಾದಕರ ಸಂಸ್ಥೆ ಕಾಳಗಿ.
4) ಚಿಂಚೋಳಿ: 1) ಚಿಂಚೋಳಿ, 2) ಸಾಲೆಬಿರನಳ್ಳಿ, 3) ಕುಂಚಾವರಂ, 4) ಐನಾಪುರ, 5) ಸುಲೇಪೇಟ್, 6) ಚಿಮ್ಮನಚೋಡ್, 7) ಕೋಡ್ಲಿ ಹಾಗೂ 8) ಶಾದಿಪುರ.