ಶಹಾಪುರ : ತಾಲೂಕಿನ ಬಹುತೇಕ ಗ್ರಾಮೀಣ ಭಾಗದಲ್ಲಿ ಪದೇ ಪದೇ ವಿದ್ಯುತ್ ಪರಿವರ್ತಕಗಳು ಕೈಕೊಡುತ್ತಿದ್ದು ಹೊಸ ಪರಿವರ್ತಕ ಅಳವಡಿಸುವ ಪ್ರಕ್ರಿಯೆಗಳು ವಿಳಂಬದ ಜಾಡು ಹಿಡಿದ ಪರಿಣಾಮ ಗ್ರಾಮದ ಸಾರ್ವಜನಿಕರು ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ ಎಂದು ಶಿವಕುಮಾರ ಚೌಡಗುಂಡ ಜೆಸ್ಕಾಂ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,ನೂತನ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಆಗ್ರಹಿಸಿದರು.
ತಾಲೂಕಿನ ಸಗರ ಬಹುದೊಡ್ಡ ಕೃಷಿ ಆಧಾರಿತ ಗ್ರಾಮ ವಾಗಿರುವುದರಿಂದ ಕತ್ತಲಾಗುತ್ತಿದ್ದಂತೆ ಹುಳು ಉಪ್ಪಡಿಗಳ ಹಾವಳಿಯಿಂದ ಜೀವನ ನಡೆಸಲು ಕಷ್ಟಕರವಾಗಿದೆ, ಅಲ್ಲದೆ ಸೊಳ್ಳೆಗಳ ಕಾಟಕ್ಕೆ ಜನರು ತುಂಬಾ ತೊಂದರೆ ಅನುಭವಿಸಿ ಬೇಸತ್ತು ರೋಸಿ ಹೋಗಿದ್ದಾರೆ,ಈ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಮೂರ್ನಾಲ್ಕು ದಿನಗಳು ಕಳೆದಿರುವುದರಿಂದ, ಹಿಟ್ಟು ಬೀಸುವ ಗಿರಣಿ ಹಾಗೂ ಇತರ ಕೆಲಸಗಳಿಗಾಗಿ ಪಕ್ಕದ ಹಳ್ಳಿಗಳ ಮೇಲೆ ಅವಲಂಬನೆಯಾಗುವ ಪರಿಸ್ಥಿತಿ ಉದ್ಭವಿಸಿದೆ,ಹೀಗೆ ಮುಂದುವರೆದರೆ ಕಳ್ಳತನ ಪ್ರಕರಣಗಳು ಜರಗಬಹುದೆಂದು ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳಿಗೆ ಇಡಿ ಶಾಪ ಹಾಕುವಂತಾಗಿದೆ.
ಜೆಸ್ಕಾಂ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನ ಆಗಿಲ್ಲ,ಗಣೇಶ್ ಹಬ್ಬ ಕತ್ತಲೆಯಲ್ಲಿ ಆಚರಿಸುವಂತಾಗಿದೆ,ನಿರ್ಲಕ್ಷ್ಯ ವಹಿಸಿದ ಸಂಬಂಧಪಟ್ಟ ಜೆಸ್ಕಾಂ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಸಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.