ತಲೆಕುಣಿ ಗ್ರಾಮದಲ್ಲಿ ಪ್ರತಿಭಾವಂತರಿಗೆ ಸತ್ಕಾರ; ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ

0
13

ಆಳಂದ: ಗ್ರಾಮೀಣ ಭಾಗದಲ್ಲಿರುವ ಕಲೆ, ಕ್ರೀಡೆ ಹಾಗೂ ಸೃಜನಶೀಲ ಕ್ಷೇತ್ರದ ಸಾಧಕ ಪ್ರತಿಭಾವಂತರಿಗೆ ಪ್ರೋತ್ಸಾಹ ದೊರೆಯಬೇಕು ಎಂದು ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕಾಧ್ಯಕ್ಷ ಸಂಜಯ ಪಾಟೀಲ ತಿಳಿಸಿದರು.

ಆಳಂದ ತಾಲೂಕಿನ ತಲೆಕುಣಿ ಗ್ರಾಮದಲ್ಲಿ ಸೋಮವಾರ ಬಸವೇಶ್ವರ ಪಲ್ಲಕ್ಕಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಪ್ರತಿಭಾವಂತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಯುವಕರು ಮುಖ್ಯವಾಗಿ ಶೈಕ್ಷಣಿಕ ಅವಕಾಶಗಳು ಸದುಪಯೋಗ ಮಾಡಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ, ಮೊಬೈಲ್ ಬಳಕೆ, ಐಷಾರಾಮಿ ಜೀವನ ಶೈಲಿಯು ಯುವಕರ ಸಾಧನೆಗೆ ಅಡ್ಡಿಯಾಗದಂತೆ ಎಚ್ಚೆರವಹಿಸಲು ತಿಳಿಸಿದರು.

ತೋಂಟದಾರ್ಯ ಅನುಭವ ಮಂಟಪದ ಕಾರ್ಯದರ್ಶಿ ಸುಭಾಷ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳು ಬೆಳೆಸುವುದು ಅವಶ್ಯಕತೆ ಇದೆ, ಈಚೆಗೆ ಶಿಕ್ಷಿತ ಯುವಕರ ನಡೆನುಡಿ, ಜೀವನ ಕ್ರಮಗಳಲ್ಲಿ ವ್ಯತ್ಯಾಸ ಹೆಚ್ಚುತ್ತಿದೆ, ಇದು ನಮ್ಮ ಸಾಮರಸ್ಯದ ಬದುಕಿಗೆ ಆತಂಕ ತರಲಿದೆ ಎಂದರು.

ಇದೇ ಸಂದರ್ಭದಲ್ಲಿ ಪಿಎಚ್ ಡಿ ಪೂರ್ಣಗೊಳಿಸಿದ ಡಾ.ಪೂಜಾ ಸಚಿನ ಹತ್ತೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಂದೀಪ ಸುರೇಂದ್ರ ಪಾಟೀಲ್, ನಿವೃತ್ತ ನೌಕರ ಸಿದ್ದಪ್ಪಾ ರಾಯೆ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಪಂಡಿತರಾವ ಪಾಟೀಲ, ಗ್ರಾಪಂ ಅಧ್ಯಕ್ಷ ಮಹಿಬೂಬ ಶೇಖ, ಸುರೇಂದ್ರ ಪಾಟೀಲ್, ಜಗದೀಶ್ ಕೋರೆ, ಧನರಾಜ ಪಾಟೀಲ, ರಾಜಶೇಖರ ಪಾಟೀಲ, ಶಿವರಾಯ ಪೂಜಾರಿ, ಚೆನ್ನಪ್ಪ ಬಿರಾದಾರ, ಮಲ್ಲು ಖಜೂರಿ, ರೇವಣಸಿದ್ದಪ್ಪ ಮೋದೆ, ಪರಮೇಶ್ವರ ಪಾಟೀಲ, ಗಿರಿಮಲ್ಲ ಮೈಂದರ್ಗಿ, ಜಗದೇವಪ್ಪ ಪಾಟೀಲ, ಶಂಕರ ಲೋಕಾಣೆ, ರಾಮಚಂದ್ರ ಮೋಧೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here