ಕಲಬುರಗಿ: ಸ್ಥಳೀಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಇಂಜಿನಿಯರಿಂಗ ನಿಕಾಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಮಂಗಳವಾರ “ಐ ಟಿ ಮೂಲಸೌಕರ್ಯ ನಿರ್ವಹಣೆ” ಕುರಿತು ಇಂದಿನ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ನ್ಯೂ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕ ಜನಾಬ ಸಯ್ಯದ ಶಮಸು ಜಮಾ ಸಂಪಂನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿಂಡೋಸ್ ಸರ್ವರ್ 2022, DHCP (ಡೈನಾಮಿಕ್ ಹೋಸ್ಟ್ ಕಾನ್ಫಿಗರೇಶನ್ ಪ್ರೋಟೋಕಾಲ್), ಗುಂಪು ನೀತಿ ಸೇವೆ, DNS (ಡೊಮೈನ್ ನೇಮ್ ಸಿಸ್ಟಮ್) ಸರ್ವರ್ ಮತ್ತು ಆಕ್ಟಿವ್ ಡೈರೆಕ್ಟರಿ ಡೊಮೈನ್ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಪ್ರತಿ ಗೋಷ್ಠಿಯ ನಂತರ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿದರು.
ಇಂಜಿನಿಯರಿಂಗ್ ಡೀನ್ ಡಾ. ಎಸ್.ಕೆ. ಮೊಹಮ್ಮದ್ ಆಜಂ ಅಧ್ಯಕ್ಷೀಯ ಮಾತುಗಳಲ್ಲಿ ಪ್ರಸ್ತುತ ಸಮಯದಲ್ಲಿ ಐಟಿ ಮಹತ್ವ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗೆ ಈ ಅವಕಾಶದ ಸದ್ಭಳಿಕೆ ಮಾಡಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಜ್ಮಾ ಶರೀನ ಪ್ರಾರ್ಥಿಸಿದರೆ, ಅಬ್ದುಲ್ ರೆಹಮಾನ್ ಸ್ವಾಗತಿಸಿದರು. ಸುಮಯ್ಯಾ ಫರ್ಹೀನ್ ಅತಿಥಿಗಳನ್ನು ಪರಿಚಯಿಸಿದರೆ, ಅಬ್ದುಲ್ ಮತೀನ್ ವಂದಿಸಿದರು. ವಿದ್ಯಾರ್ಥಿ ಅಬ್ದುಲ ರೆಹಮನ ನಿರೂಪಿಸಿದರು.
ಇಂಜಿನಿಯರಿಂಗ ಡೀನ ಪ್ರೊ ಮೊಹಮ್ಮದ ಆಜಾಮ, ವಿಭಾಗದ ಮುಖ್ಯಸ್ಥರಾದ ಡಾ ಶಭಾನಾ ಮತ್ತು ಡಾ ಸಮೀನಾ ಹಾಗೂ ನಿಕಾಯದ ಎಲ್ಲ ಉಪನ್ಯಾಸಕರು ಹಾಜರಿದ್ದರು.
ಸುಮಾರು 130 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಎಲ್ಲರಿಗೂ ಪ್ರಾಮಾಣಪತ್ರ ನೀಡಲಾಯಿತು.