ಕ್ಯಾಂಪ್‍ಬೆಲ್ಸ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಆಯ್ಕೆ

0
19

ಕಲಬುರಗಿ: ಕ್ಷೇತ್ರ ಶಿಕ್ಷಣಾಧಿಕಾಗಳ ಕಾರ್ಯಾಲಯ ದಕ್ಷಿಣ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಬಾಲಕ-ಬಾಲಕಿಯರಿಗಾಗಿ ನಗರದ ಚಂದ್ರಶೇಖರ ಪಾಟಿಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಕ್ಯಾಂಪ್‍ಬೆಲ್ಸ್ ಶಾಲೆಯ ಕ್ರೀಡಾಪಟುಗಳು ಭಾಗವಹಿಸಿ ಪ್ರಾಥಮಿಕ ಶಾಲೆಯ ಬಾಲಕರು ಥೋ ಬಾಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ವಾಲಿಬಾಲನಲ್ಲಿ ದ್ವಿತೀಯ ಸ್ಥಾನ ಮತ್ತು ಬಾಲಕಿಯರು ಥೋ ಬಾಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪ್ರೌಢ ಶಾಲೆಯ ಬಾಲಕಿಯರು ಥೋ ಬಾಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ವಾಲಿಬಾಲನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ಬಾಲಕ ಬಾಲಕೀಯರು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಶ್ರೀ ಬಸವರಾಜ ಕಣ್ಣಿ ಸರ್, ಶಾಲೆಯ ಆಡಳಿತ ಅಧಿಕಾರಿ ಇಮ್ಮಾನ್ಯೂಲ್ ಜಯವಂತ, ಮುಖ್ಯ ಗುರುಗಳಾದ ಸೂರ್ಯಕಾಂತ ಪವಾರ, ದೈಹಿಕ ಶಿಕ್ಷಕರಾದ ದತ್ತಾತ್ರೇಯ ಜೇವರ್ಗಿ, ಶೀಲಾದೇವಿ ತಂಡದ ವ್ಯವಸ್ಥಾಪಕರಾದ ಸಂತೋಷ ದೇಶಮುಖ, ಓಂಕಾರ ಹಾಗೂ ದಿವ್ಯಾರಾಣಿ ಅವರು ಶುಭ ಹಾರೈಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here