ಕಲಬುರಗಿ: ನಗರದ ಸುಲ್ತಾನಪುರ ಕ್ರಾಸ್ ಬಳಿ ಇರುವ ಬಂಡಕ್ ಹಾಗೂ ಬೆಣ್ಣೂರು ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಇರುಮುಡಿ ಪೂಜೆ ಹಾಗೂ ಶಬರಿಮಲೈ ಯಾತ್ರೆ ಸಮಾರಂಭವು ಅದ್ದೂರಿಯಾಗಿ ನೆರವೇರಿಸಲಾಯಿತು.
ಗುರುಸ್ವಾಮಿ ವಿಕಾಸ್ ಆರ್ ಪಾಠಕ್ ಅವರ ನೇತೃತ್ವದಲ್ಲಿ ನಗರದ ಸುಲ್ತಾನಪುರ ಕ್ರಾಸ್ ಬಳಿ ಇರುವ ಬಂಡಕ್ ಹಾಗೂ ಬೆಣ್ಣೂರು ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಇರುಮುಡಿ ಪೂಜೆ ಹಾಗೂ ಶಬರಿಮಲೈ ಯಾತ್ರೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತ್ತು ಸಮಾರಂಭದಲ್ಲಿ ಭಾಗವಹಿಸಿದ ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಬಳಿಕ ಮಾತನಾಡಿದ ಗುರುಸ್ವಾಮಿ ಶಿವಲಿಂಗಪ್ಪ ಬಂಡಕ್ ಅವರು, ಕಳೆದ 26 ವರ್ಷಗಳಿಂದ ಬಂಡಕ್ ಹಾಗೂ ಬೆಣ್ಣೂರು ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಇರುಮುಡಿ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದ್ದು ಅನೇಕ ಜನ ಮಾಲದಾರಿಗಳು ಇಲ್ಲಿಂದ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಇತ್ತೀಚಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಹೋರಾಟಗಾರ ಲಕ್ಷ್ಮಣ ದಸ್ತಿ ಅವರಿಗೆ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯಾ ಸಾನಿಧ್ಯವನ್ನು ಕಡಗಂಚಿಯ ಶಾಂತಲಿಂಗೇಶ್ವರ ಸಂಸ್ಥಾನ ಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯರು ಹಾಗೂ ಚವದಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ವಹಿಸಿಕೊಂಡಿದ್ದರು. ಗುರುಸ್ವಾಮಿಗಳಾದ ಶಿವಲಿಂಗಪ್ಪ ಬಂಡಾಕ್, ಚಂದ್ರಶೇಖರ ಬೆಣ್ಣೂರ ಪ್ರಭುಲಿಂಗ ಗೊಬ್ಬುರು, ವಿಶ್ವಾನಾಥ ಗೌಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.