ಗ್ರಾಮೀಣ ಪ್ರದೇಶದಲ್ಲಿ ಘನ-ತಾಜ್ಯ ನಿರ್ವಹಣೆ ಕುರಿತು ತರಬೇತಿ

0
22

ಕಲಬುರಗಿ: ನಗರದಲ್ಲಿರುವ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ, ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಮೈಸೂರು & ಪ್ರಾದೇಶಿ ಕೇಂದ್ರ ಕಲಬುರಗಿ ವತಿಯಿಂದ ವಿವಿಧ ತಾಲೂಕಿನ  ಗ್ರಾಮ ಪಂಚಾಯತಿಯ ಮಟ್ಟದ ಸ್ಥಳೀಯ ಮಹಿಳಾ ಒಕ್ಕೂಟದ ಸದಸ್ಯರಿಗೆ ಘನ-ತಾಜ್ಯ ನಿರ್ವಹಣೆ ಕುರಿತು 3 ದಿನಗಳ ವಸತಿ ಸಹಿತ ಸುಸ್ಥಿರ ನಡೆ ಸ್ವಚ್ಛತೆ ಕಡೆಗೆ 10 & 11ನೇ ತಂಡದವರಿಗೆ  ಪುನಶ್ಚೇತನ ತರಬೇತಿಯನ್ನು ಆಯೋಜಿಸಲಾಗಿತ್ತು ಮೊದಲಿಗೆ ತರಬೇತಿ ಕಾ‍ರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕರಾದ ಧನರಾಜ್‌ ಬೊರಾಳೆ ಮಾತನಾಡುತ್ತ ಸ್ವಚ್ಛ ಗ್ರಹಿಗಳು ಮನೆ-ಮನೆಗೆ ಹೋಗಿ ಕಸ ಸಂಗ್ರಹಣೆ ಮಾಡಿ ಸ್ವಚ್ಛವಾಹಿನಿ ಮೂಲಕ ಸ್ವಚ್ಛ ಸಂರ್ಕಿಣಕ್ಕೆ ತಂದು ಕಸವನ್ನು ಹಸಿ ಕಸ & ಒಣ ಕಸವನ್ನಾಗಿ ವಿಲೇವಾರಿ ಮಾಡಬೇಕೆಂದರು.

Contact Your\'s Advertisement; 9902492681

ತರಬೇತಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕಾರದ ಶಿವಪುತ್ರಪ್ಪ ಗೊಬ್ಬರು, ಡಾ.ರಾಜು ಕಂಬಳಿಮಠ, ರವರು ತರಬೇತಿಯ ಗುರಿ-ಉದ್ದೇಶ ಕುರಿತು ಮಾತಾನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸತೀಶಕುಮಾರ ಸುಲೇಪೇಟ, ಪುಷ್ಪಾ ಬೆಳಮಗಿ, ಪರಮಾನಂದ ಹಾಗೂ ಸಬೀನಾ ಬಾನು  ರವರು ಆಗಮಿಸಿದ  ಶಿಬಿರಾರ್ಥಿಗಳನ್ನು ಉದ್ದೇಶಿಸಿ ವಿಷಯ ಮಂಡನೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here