ಇಂದಿನ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆ ಅನಿವಾರ್ಯ

0
302

ಕಲಬುರಗಿ; ಕ್ರೀಡ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸರ್ವೋತೊಅಭಿವೃದ್ದಿಗೆ ಮುಂದಾಗಿರುವುದು ಸಂತೋಷದಾಯಕ ಜೊತೆಗೆ ಮಕ್ಕಳಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಹ ನೀಡುತ್ತಿರುವ ವಿಧ್ಯಾನಗರದ ಪಾಲಕರ ಪಾತ್ರ ಮೆಚ್ಚುವಂತಹದು ಎಂದು ಸೇಡಂ ನ ಕೊತ್ತಲಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಸದಾಶಿವ ಮಹಾಸ್ವಾಮಿಗಳು ಮಾತನಾಡಿದ್ದಾರೆ.

ಸೇಡಂ ರಸ್ತೆಯ ಬಸವೇಶ್ವರ ಆಸ್ಪ್ರೇಯ ಎದುರುಗಡೆಯಲ್ಲಿರುವ ವಿಧ್ಯಾನಗರ ಕಾಲೋನಿಯ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ 26ನೇ ವಾರ್ಷಿಕೋತ್ಸವ ಹಾಗೂ 5 ದಿನದ ಗಣೇಶ ಉತ್ಸವ 2024ರ ನಿಮಿತ್ಯ ಹಮ್ಮಿಕೊಂಡ ಸಂಸ್ಕ್ರೂತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸುತ್ತ ಅನೇಕ ಹಬ್ಬ ಹರಿದಿನಗಳ ಕುರಿತು ಆಧ್ಯಾತ್ಮಿಕ ವಿಚಾರಗಳು ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡುತ್ತ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಸ್ಪರ್ಧೆಗಳಲ್ಲಿ ಈ ವರ್ಷ ನೀರಿಕ್ಷೆಮೀರಿ ಅಂದರೆ 115ಕ್ಕಿಂತ ಹೆಚ್ಚು ಮಕ್ಕಳು ಓಟ,ಕ್ರೀಕೆಟ,ಸೈಕ್ಲಿಂಗ, ಹಗ್ಗದಾಟ, ನೃತ್ಯ ವಚನ ಪಠಣ, ಗಾಯನ, ಕಥೆ, ಹೀಗೆ sÀ 25 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ 75 ಮಕ್ಕಳು ಹಾಗು ಮಹಿಳೆಯರಿಗು ಪ್ರಥಮ,ದ್ವಿತಿಯ,ಹಾಗೂ ತ್ರುತಿಯ ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಹಿಸಲಾಯಿತು ಮಕ್ಕಳಿಗೆ ಪೂಜ್ಯರಿಂದ ಆಶೀರ್ವಾದಿಸಲಾಯಿತು.

ಪ್ರಾರಂಭದಲ್ಲಿ ಶ್ರೀನಿಧಿ ಕೋಳಕೂರ ಭರತನಾಟ್ಯ ಮಾಡಿದರು, ಪೂರ್ವಿ ರ್ಯಾಕಾ ಪ್ರಥನೆ ಗೀತೆ ಹಾಡಿದರು ಕರಣ ಅಂದೋಲ ಸ್ವಾಗತಿಸಿದರು ಗುರುರಾಜ ಮುಗಳಿ ನಿರುಪಣೆ ಮಾಡಿದರು ಸಂತೋಷ ನಿಂಬೂರ ವಂದಿಸಿದರು ಸಂಗಮೇಶ ಹೆಬ್ಬಾಳ ಪ್ರಶಸ್ತಿ ಪಟ್ಟಿ ಪ್ರಕಟಿಸಿದರು ಶಶಿಧರ ಪ್ಯಾಟಿ, ಸಂಜು ತಂಬಾಕೆ, ಶ್ರೀವತ್ಸ ಸಂಗೋಳಗೆ, ಕ್ರುತಿಕಾ ಹೆಬ್ಬಾಳ, ಸೃಜನಾ ಅವಂಟೆ, ಪ್ರೀಯಾ ನಾಗಶೆಟ್ಟಿ, ಪದ್ಮಾ ಆಂದೋಲಾ ಕಾರ್ಯಕ್ರಮದ ನಿರ್ವಹಣೆ ಮಾಡಿದರು ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೆ ಸ್ವರಾಂಜಲಿ ಮೆಲೋಡಿಸ್ ಸಂಗೀತಾ ಕಲವಿದರಾದ ಸಿದ್ದರಾಮ ಹಂಚಿನಾಳ, ಸುಜಾತ ಸ್ವಾಮಿ ಹಾಗೂ ಅರುಣ ತೆಗೆನೂರ ಅವರಿಂದ ಸಂಗೀತಾ ಕಾರ್ಯಕ್ರಮ ಜರುಗಿತು ಕೊನೆಯಲ್ಲಿ ಶ್ರೀ ಶರಣಬಸವೇಶ್ವರ ಕೆರೆಯಲ್ಲಿ ಗಣೇಶ ವಿಸರ್ಜಿಸಲಾಯಿತು ಎಂದು ಸಂಘದ ಅಧ್ಯಕ್ಷ ಶಿವರಾವ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here