ಆಳಂದ; ಪಟ್ಟಣದ ಶ್ರೀ ಸಿದ್ದಲಿಂಗ ಸಂಸ್ಥಾನ ಹಿರೇಮಠದಲ್ಲಿ ಲಿಂ. ಸಿದ್ದಲಿಂಗ ಶಿವಾಚಾರ್ಯ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶಿವಾನುಭವ ಚಿಂತನ ಗೋಷ್ಠಿ, ಹಾಗೂ ಧರ್ಮ ಸಭೆ ಕಾರ್ಯಕ್ರಮದಲ್ಲಿ ನಾಡಿನ ಯುವ ವಾಗ್ಮಿಗಳು ಪುರಾಣ ಪ್ರವಚನ ಕೀರ್ತನಕಾರು ಪದ್ಮಭೂಷಣ ಡಾ.ಪಂ ಪುಟ್ಟರಾಜರಾಜ ಗವಾಯಿಗಳ ಶಿಷ್ಯರಾದ ಬಂಡಯ್ಯ ಶಾಸ್ತ್ರಿಗಳು ಸಂಸ್ಥಾನ ಹಿರೇಮಠ ಸುಂಟನೂರ ಇವರಿಗೆ “ಕಲ್ಯಾಣ ನಾಡಿನ ಪುರಾಣ ಪ್ರವಚನ ಪಂಡಿತರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಶಂಭುಲಿಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠ ಪಡಸಾವಳಗಿ. ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಅಕ್ಕಲಕೋಟ. ಶ್ರೀ ಮಠದ ಒಡೆಯರಾದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಹಿರೇಮಠ ನಾವದಗಿ, ಆಳಂದ. ಪೂಜ್ಯಶ್ರೀ ಗುರು ಮಹಾಂತ ಮಹಾಸ್ವಾಮಿಗಳು ವಿರಕ್ತಮಠ ನರೋಣ.
ಪೂಜ್ಯಶ್ರೀ ವೖಷಭ ಲಿಂಗ ಮಹಾಸ್ವಾಮಿಗಳು ವಿರಕ್ತಮಠ ಹೊದಲೂರ. ಪೂಜ್ಯಶ್ರೀ ಚನ್ನಬಸವ ಪಟ್ಟದೇವರು ಶರಣ ಮಂಟಪ ಆಳಂದ. ಕಲಾವಿದರಾದ ಶಾಂತಕುಮಾರ ಗವಾಯಿಗಳು ಸಾವಳಗಿ. ತಬಲ ವಾದಕರಾದ ಶರಣು ಹೂಗಾರ ದೇಸಾಯಿ ಕಲ್ಲೂರ ಹಾಗೂ ಶ್ರೀಮಠದ ಅನೇಕ ಸದ್ಭಕ್ತ ಮಹಾಶಯರು ಭಾಗವಹಿಸಿದ್ದರು.