ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿಗಾಗಿ ಸರ್ಕಾರ ಬದ್ಧ; ಶರಣಬಸಪ್ಪ ದರ್ಶನಾಪೂರ

0
26

ಕಲಬುರಗಿ: ನಮ್ಮ ಸರಕಾರ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ನಮ್ಮ ಭಾಗದಲ್ಲಿ ಕೌಶಲ್ಯಾಧಾರಿತ ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕವಾದ ಉದ್ಯೋಗ ಸೃಷ್ಠಿಗಾಗಿ ಈಗಾಗಲೇ ಹಲವು ಯೋಜನೆಗಳ ಮೂಲಕ ಸಾರ್ವಜನಿಕರಿಗೆ ತಲುಪುತ್ತಿದೆ. ನಮ್ಮ ಭಾಗದ ಯುವಕರು ಒಟ್ಟಾಗಿ ದೀಕ್ಷಣಾ ಗ್ಲೋಬಲ್ ಡೆವಲಪಮೆಂಟ್ ಫೌಂಡೇಷನ್ ನ ಮೂಲಕ ಕೈಜೋಡಿಸುತ್ತಿರುವುದು ಅತ್ಯಂತ ಪ್ರಶಂಸನೀಯ ಅವರೊಂದಿಗೆ ಸರ್ಕಾರದ ಸಹಕಾರ ಯಾವಾಗಲೂ ಇರುತ್ತದೆ.

ನಮ್ಮ ಸರ್ಕಾರ ಯಾವಾಗಲೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಹೆಚ್ಚು ಅನುದಾನ, ಪ್ರಧಾನ್ಯತೆಯನ್ನು ಕೊಡುತ್ತಲೇ ಬಂದಿದೆ. ಕಲ್ಯಾಣ ಕರ್ನಾಟಕದಲ್ಲಿ ಕೌಶಲ್ಯಗಳ ಅಭಿವೃದ್ಧಿ, ಭವಿಷ್ಯದ ಉದ್ಯೋಗ ಸೃಷ್ಠಿಗಾಗಿ ಸರ್ಕಾರ ಬದ್ಧವಾಗಿದೆ ಎಂದು ಶರಣಬಸಪ್ಪ ದರ್ಶನಾಪೂರ ಸಣ್ಣಕೈಗಾರಿಕೆ ಹಾಗೂಸಾರ್ವಜನಿಕಉದ್ಯಮಗಳಸಚಿವರುಕರ್ನಾಟಕ ಸರ್ಕಾರ ಅಭಿಮತ ವ್ಯಕ್ತಪಡಿಸಿದರು.

Contact Your\'s Advertisement; 9902492681

ಮಾನ್ಯ ಸಚಿವರು ಇಂದು ಕಲ್ಯಾಣಕರ್ನಾಟಕಉತ್ಸವದನಿಮಿತ್ಯವಾಗಿದೀಕ್ಷಣಾಗ್ಲೋಬಲ್ಡೆವೆಲಪ್ಮೆಂಟ್ಫೌಂಡೇಶನ್ ಕರ್ನಾಟಕಡಿಜಿಟಲ್ಎಕೊನೊಮಿಮಿಷನ್ಸಹಯೋಗದೊಂದಿಗೆಕಲ್ಯಾಣಕರ್ನಾಟಕದಕೌಶಲ್ಯಾಧಾರಿತಭವಿಷ್ಯದಉದ್ಯೋಗಸೃಷ್ಟಿಗಾಗಿ ಮ್ಯಾರಥಾನ್ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ ಯೂತ್ ಐಕಾನ್ ಬಿಜಾಸ್ಪೂರ್ ಗ್ರುಪ್ ನ ಸಿಇಓ ಪ್ರಶಾಂತ್ಬಿಜಾಸ್ಪೂರ ಮಾತನಾಡುತ್ತಾ, ನಮ್ಮ ಭಾಗದ ಯುವಕರು ಯಾವುದೇ ಕೆಲಸಗಳನ್ನು ಮಾಡುವಾಗ ಸತತ ಪ್ರಯತ್ನ ಮಾಡಬೇಕು, ಸೋತಾಗ ಕುಗ್ಗದೇ ಕೆದ್ದಾಗ ಹಿಗ್ಗದೇ ಮರಳಿ ಯತ್ನವನ್ನು ಮಾಡಬೇಕು. ಹೆಚ್ಚು ಯುವಕರು ನಮ್ಮ ಭಾಗದ ದೇಶದ ಮಟ್ಟದಲ್ಲಿ ಗುರುತಿಸುವ ಹಾಗೆ ಕೆಲಸ ಮಾಡಬೇಕು.

ಈ ದೇಶದ ಔದ್ಯೋಗಿಕ ಕ್ಷೇತ್ರದಲ್ಲಿ ತಮ್ಮ ಜ್ಞಾನ, ಕೌಶಲ್ಯಗಳನ್ನು ಸದಾ ಕಲಿಯುತ್ತಾ, ಇನ್ನೊಬ್ಬರಿಗೂ ಸ್ಪೂರ್ತಿಯಾಗುತ್ತಾ ಮುಂದೆ ಸಾಗಬೇಕು. ದೀಕ್ಷಣಾ ಗ್ಲೋಬಲ್ ಡೆವಲಪಮೆಂಟ್ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಈ ಮ್ಯಾರಥಾನ್ ಅತ್ಯಂತ ಹೊಸ ಚೈತನ್ಯ ಎಲ್ಲ ಯುವಕರಲ್ಲಿ ತುಂಬಲಿ ಎಂದು ನೆರದ ಯುಕರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಸವರಾಜ ಗಡಗೆ ಪ್ರಾದೇಶಿಕ ನಿರ್ದೇಶಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕಲಬುರಗಿ, ಮಂಜುನಾಥ ವಾಣಿಜ್ಯ ಮಂಡಳಿ ಕಾರ್ಯದರ್ಶಿಗಳು, ನವ ಉದ್ಯೋಗಿ ಯುವಕರಾದ ಆಕಾಶ ತೊನಸನಳ್ಳಿ, ಬಸವರಡ್ಡಿ, ಮುರುಗೇಶ, ಬಸವೇಶ ಎಂ, ಶಿವಕುಮಾರ ಕೊಡ್ಲಿ, ನಮೃತಾ, ಅಂಕುಶ, ಮಧುಶ್ರೀ, ಮಹೇಶ, ಶ್ರೀಶೈಲ್, ಸಂತೋಷ, ಮಂಜುನಾಥ, ಸದಾನಂದ,ನಿರ್ದೇಶಕ ಸುಂದರ, ಪುಂಡಲಿಕ,ಕಾಲೇಜಿನ ವಿದ್ಯಾರ್ಥಿಗಳು, ಯುವಕರು, ಸಾರ್ವಜನಕರು ಹಾಜರಿದ್ದರು.

ದೀಕ್ಷಣಾ ಗ್ಲೋಬಲ್ ಡೆವೆಲೆಪಮೆಂಟ್ ಫೌಂಡೇಷನ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ ವಿಭೋತೆ ಪರಿಚಯ ಮತ್ತು ಪ್ರಸ್ತಾವಿಕ ಮಾತನಾಡಿದರು. ಶಿಕ್ಷಣ ಪ್ರೇಮಿ ಕೆ.ಎಂ.ವಿಶ್ವನಾಥ ಮರತೂರ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here