ಕಲಬುರಗಿ: ಕಲ್ಯಾಣ ಕರ್ನಾಟಕದ ದಶಮಾನೋತ್ಸವದ ಅಂಗವಾಗಿ ಪ್ಲಾಸ್ಟಿಕ ಮುಕ್ತ ಅಭಿಯಾನವನ್ನು ನಗರದಲ್ಲಿ ಮಹಾನಗರ ಪಾಲಿಕೆ ಹಾಗೂ ಕೆಕೆಆರ್‍ಡಿಬಿವತಿಯಿಂದ ಯುನೈಟೆಡ್ ಆಸ್ಪತ್ರೆ ಸಹಯೋಗದೊಂದಿಗೆ ಏಕ ಬಳಕೆಯ ಪ್ಲಾಸ್ಟಿಕ ನಿಷೇಧದ ಕುರಿತು ಅರಿವು ಮೂಡಿಸಲು ಪ್ಲಾಗಾಥಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಉದ್ಘಾಟಿಸಿದರು.
ಏಕ ಬಳಕೆಯ ಪ್ಲಾಸ್ಟಿಕ ನಿಷೇಧದ ಪ್ಲಾಗಾಥಾನ ಕಾರ್ಯಕ್ರಮದಲ್ಲಿ ಏಕಬಳಕೆಯ ಪ್ಲಾಸಿಕನ್ನು ಸಂಗ್ರಹಿಸಿ ಪಾಲಿಕೆಗೆ ನೀಡಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೊದಲ ಬಹುಮಾನ ರೂ. 15000 ಹಾಗೂ ದ್ವಿತೀಯ ಬಹುಮಾನ ರೂ.10000/- ಹಾಗೂ ಮೂರನೆ ಬಹುಮಾನ ರೂ.5000 ಗಳನ್ನು ವಿತರಿಸಲಾಯಿತು.
ಪದವಿ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಹಾಗೂ 18 ವರ್ಷ ಮೇಲ್ಪಟ್ಟ ಸಾಮಾನ್ಯನಾಗರೀಕರು, ಸಂಘಸಂಸ್ಥೆ, ಇತ್ಯಾದಿ ತಂಡಕ್ಕೆ ಮೊದಲನೆ ಬಹುಮಾನ ರೂ. 15000ದ್ವಿತೀಯ ಬಹುಮಾನ ರೂ. 10000 ಮೂರನೆ ಬಹುಮಾನ ರೂ. 5000 ಗಳನ್ನು ವಿತರಿಸಲಾಯಿತು.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ತಂಡದ ಶಾಲೆಗೆ, ಪದವಿಪೂರ್ವ ಮಹಾವಿದ್ಯಾಲಯ ಮತ್ತು ಮಹಾವಿದ್ಯಾಲಯಗಳಿಗೆ ವಿಶೇಷವಾಗಿ ರೂ. 15000 ಗಳ ನಗದು ಬಹುಮಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಸ್ವಚ್ಛ ಸರ್ವೇಕ್ಷಣ 2024 ಬ್ರಾಂಡ್ ಅಂಬಾಸಿಡರ್ ಆಗಿಯುನೈಟೆಡ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ್ ಸಿದ್ದಾರೆಡ್ಡಿ ಅವರಿಗೆ ನೇಮಕ ಮಾಡಿ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಫೌಜಿಯಾತರನ್ನುಮ್, ಕೆಕೆಆರ್‍ಡಿಬಿ ಕಾರ್ಯದರ್ಶಿ ಸುಂದರೇಶ್ ಬಾಬು, ಶಾಸಕ ಅಲ್ಲಮಪ್ರಭು ಪಾಟೀಲ್, ಮೇಯರ್ ಎಲ್ಲಪ್ಪ ನಾಯಕೋಡಿ, ಪಾಲಿಕೆ ಆಯುಕ್ತ ಪಾಟೀಲ್ ಭುವನೇಶ್ ದೇವಿದಾಸ, ದಾವೂದ್ ಅಲಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು, ಆರ್ ಜೆ ಮಂಜು ಹಿರೋಲಿ ನಿರೂಪಿಸಿದರು.