ಜೇವರ್ಗಿ: ಪಟ್ಟಣದ ಮರೆಮ್ಮ ದೇವಿ ಜಾತ್ರೆಯ ಅಂಗವಾಗಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನಡೆಯುತ್ತಿದ್ದು, ಕೂಡಲೇ ಅದನ್ನು ನಿಲ್ಲಿಸಬೇಕೆಂದು ತಾಲೂಕ ದಲಿತ ಸಮನ್ವಯ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ.
ಇದೇ ಅ. 18 ಮತ್ತು19ರಂದು ಜಾತ್ರೆಯೂ ಅದ್ದೂರಿಯಾಗಿ ನಡೆಯಲಿದ್ದುˌ ನಸುಕಿನ ಜಾವದಲ್ಲಿ ಕುರಿಗಳನ್ನು ಬಲಿಕೊಡಲಾಗುತ್ತಿದೆ. ಮೂಢನಂಬಿಕೆ ವಿರುದ್ಡ ಹೋರಾಟ ಮಾಡುತ್ತಿರುವ ದಲಿತ ಸಮನ್ವಯ ಸಮಿತಿ ಪ್ರತಿ ವರ್ಷವು ಪ್ರಾಣಿಬಲಿ ಕೊಡುವುದನ್ನು ವಿರೋಧಿಸುತ್ತಾ ಬಂದಿದೆ.
ಪ್ರತಿ ವರ್ಷದಂತೆ ಈ ವರ್ಷವು ಕೂಡ ಪ್ರಾಣಿಬಲಿ ಕೊಡಬಾರದು. ಒಂದು ವೇಳೆ ಪ್ರಾಣಿಬಲಿ ನಡೆದರೆ ಅದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗುತ್ತದೆ. ಇದರ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿಗಳಿಗೆˌ ಡಿಐಜಿˌ ಐಜಿಪಿಯವರಿಗೂ ಈ ಮೇಲ್ ಮೂಲಕ ಮತ್ತು ಲಿಖಿತ ದೂರು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಚಂದ್ರಶೇಖರ್ ಹರನಾಳˌ ಭೀಮರಾಯ ನಗನೂರˌ ಶಾಂತಪ್ಪ ಕಟ್ಟಿಮನಿˌ ದವಲಪ್ಪ ಮದನ ತಿಳಿಸಿದ್ದಾರೆ.