ಕೃಷಿ ಆಸಕ್ತಿ ಹೆಚ್ಚಿಸಲು ಶಿಬಿರ ಪೂರಕ: ಡಾ.ಎಂ.ಭೀಮಣ್ಣ ಯಲಗೋಡ

0
30

ಜೇವರ್ಗಿ: ಇಂದಿನ ಯುವಕರಲ್ಲಿ ಕೃಷಿ ಬಗ್ಗೆ ಆಸಕ್ತಿ ಹೆಚ್ಚಿಸುವುದಲ್ಲದೆ ರೈತರಿಗೆ ಕೃಷಿ ಬಗ್ಗೆ ಸಮಗ್ರ ಮಾಹಿತಿ ಒದಗಿಸಲು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕೀಟಶಾಸ್ತ್ರ ತಜ್ಞ ಡಾ.ಎಂ.ಭೀಮಣ್ಣ ಯಲಗೋಡ ತಿಳಿಸಿದರು.

ತಾಲೂಕಿನ ಯಲಗೋಡ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿಯ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಸೋಮವಾರ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಗುಲಾಬಿ ಕಾಯಿಕೊರಕವು ಹತ್ತಿಯಲ್ಲಿ ಬರುವ ಪ್ರಮುಖ ಕೀಟವಾಗಿದ್ದು, ಅದು ಪ್ರಾರಂಭದ ಮೊಟ್ಟೆಯಿಂದ ಹೊರಬಂದ ಬಿಳಿಬಣ್ಣದ ಮರಿಯು ಹತ್ತಿಕಾಯಿಯ ಮೃದುವಾದ ಭಾಗವನ್ನು ಹುಡುಕಿ ರಂದ್ರವನ್ನು ಕೊರೆದು ಒಳ ಸೇರುತ್ತದೆ, ನಂತರ ಹಂತದ ಮರಿಹುಳು ಹತ್ತಿಯ ಬೀಜ ಭಾಗವನ್ನು ತಿಂದು ಹತ್ತಿ ಗುಣಮಟ್ಟ ಹಾಳುಮಾಡುತ್ತದೆ. ಈ ಕೀಟವನ್ನು ಹತೋಟಿ ಮಾಡಲು ಸಮಗ್ರ ಕೀಟ ನಿರ್ವಹಣೆಯಿಂದ ಮಾತ್ರ ಸಾಧ್ಯ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಆರ್ ಲೋಕೇಶ್ ಮಾತನಾಡಿ, ಇಂದಿನ ಯುವಕರಲ್ಲಿ ಕೃಷಿ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಗ್ರಾಮಗಳನ್ನು ತೊರೆದು ನಗರಗಳತ್ತ ವಲಸೆ ಹೋಗುತ್ತಿರುವುದರಿಂದ ಗ್ರಾಮಗಳು ಬರಡಾಗುತ್ತಿವೆ. ಜತೆಗೆ ಮಾರುಕಟ್ಟೆಯಲ್ಲಿನ ಕೃಷಿ ಉತ್ಪನ್ನಗಳ ಬೆಲೆ ಏರಿಳಿತವು ರೈತರನ್ನು ಸಂಕಷ್ಟಕ್ಕೆ ದೂಡುತ್ತಿವೆ ಬೇರಸ ವ್ಯಕ್ತಪಡಿಸಿದರು.

ಕೃಷಿ ಮಹಾವಿದ್ಯಾಲಯದ ರಾಯಚೂರು ಕೀಟಶಾಸ್ತ್ರದ ಹಿರಿಯ ವಿಜ್ಞಾನಿಗಳಾದ ಡಾ. ಎಂ. ಭೀಮಣ್ಣ, ಕೃಷಿ ಕಾರ್ಯಾನುಭವ ಶಿಬಿರದ ಸಲಹೆಗಾರ ಡಾ.ಡಿ.ಕೆ.ಹಾದಿಮನಿ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here