ಮಾಜಿ ಸಿಎಂ ವೀರೇಂದ್ರ ಪಾಟೀಲ್, ಧರ್ಮಸಿಂಗ್ ಪ್ರತಿಮೆ ಸ್ಥಾಪನೆಗೆ ಮನವಿ

0
27

ಕಲಬುರಗಿ: ಬಿಸಿಲುನಾಡು, ತೊಗರಿ ಕಣಜ ನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿ.ವಿರೇಂದ್ರ ಪಾಟೀಲ್ ಹಾಗೂ ಧರಂಸಿಂಗ್ ಅವರ ಪ್ರತಿಮೆಯನ್ನು ಕಲಬುರಗಿ ಮಹಾನಗರದ ಪ್ರಮುಖ ವೃತ್ತದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಚಿಂಚೋಳಿ ವಿಧಾನ ಸಭಾ ಮತಕ್ಷೇತ್ರದಿಂದ ಶಾಸಕರಾಗಿಮತ್ತು ಲೋಕಸಭಾಸದಸ್ಯರಾಗಿಯೂಸೇವೆ ಸಲ್ಲಿಸಿಉ್ಪ್ಮ.

ಕಲ್ಯಾಣ ಕರ್ನಾಟಕ ಭಾಗದ ಪ್ರಥಮ ಮುಖ್ಯಮಂತ್ರಿಯೂ ಸೇವೆ ಸಲ್ಲಿಸಿದ್ದಾರೆ ಹಾಗೂ ಅಜಾತಶತ್ರು ಎಂದೇ ಖ್ಯಾತರಾಗಿರುವ ಮಾಜಿ ಮುಖ್ಯಮಂತ್ರಿಧರಂಸಿಂಗ್ ಅವರು 7 ಭಾರಿ ಜೇವರ್ಗಿ ವಿಧಾನಸಭಾ ಮತಕ್ಷೇತ್ರದಿಂದ ಶಾಸಕರಾಗಿ ಹಾಗೂ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ.

Contact Your\'s Advertisement; 9902492681

ಈ ಭಾಗದ ಪ್ರಭಾವಿ ಮತ್ತು ಆದರ್ಶ ಮಾದರಿ ನಾಯಕ ಸ್ಮರಣೆಗಾಗಿ ಪ್ರತಿಮೆಯನ್ನು ಸ್ಥಾಪಿಸಲು ಸ್ಥಳ ಹಾಗೂ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ದತ್ತು ಭಾಸಗಿ ಅವರು, ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸೇನೆಯ ಮುಖಂಡರಾದ ಹುಸೇನ, ನವೀನಕುಮಾರ,ದುಮ್ಮನಸೂರ, ಅನೀಲ ತಳವಾರ, ಮಲ್ಲು ಆಲಗೂಡ, ಪ್ರಕಾಶ, ಗೌತಮ ಗೋರೆ, ಶಿವಪ್ರಕಾಶ ಕುಸ್ತಿ,ರೋಹ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here