ಪಿಂಚಣಿ ವಂಚಿತ ಕರ್ನಾಟಕ ರಾಜ್ಯ ಸರ್ಕಾರಿ ಖಾಸಗಿ (ಪದವಿ ಪೂರ್ವ) ವೃತ್ತಿ ಶಿಕ್ಷಣ (ಜೆ.ಓಸಿ) ವಿವಿಧ ಇಲಾಖೆಯಿಂದ ವಿಲೀನಗೊಂಡ ನೌಕರರಿಗೆ ಸೇವೆಗೆ ಸೇರಿದ ದಿನಾಂಕ ಪರಿಗಣಿಸಿ ನಿಶ್ಚಿತ ಪಿಂಚಣಿ ಒದಗಿಸಿಕೊಡಬೇಕೆಂದು ಪಿಂಚಿಣಿ ವಂಚಿತ ಕರ್ನಾಟಕ ರಾಜ್ಯ ಪದವಿ ಪೂರ್ವ (ಜೆಓಸಿ) ವೃತ್ತ ಶಿಕ್ಷಣ ಇಲಾಖೆಯಿಂದ ವಿವಿಧ ಇಲಾಖೆ ವಿಲೀನಗೊಂಡ ನೌಕರರ ಸಂಘದ ಅಧ್ಯಕ್ಷ ಮಲ್ಲಿನಾಥ ಕಳಸ್ಕರ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಸುಮಾರು 20-25 ವರ್ಷಗಳಿಂದ ವೃತ್ತಿ ಶಿಕ್ಷಣ (ಜೆ.ಓ.ಸಿ.) ಸರಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು ಸರಕಾರ 2010-11ರಲ್ಲಿ ವಿಶೇಷ ಕಾನೂನು ಜಾರಿ ಮಾಡಿ ಆಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರನ್ನು ಖಾಯಂಗೊಳಿಸಲಾಗಿದೆ.
ಆದರೆ ಖಾಯಂಗೊಂಡ ನೌಕರದಾರರಿಗೆ ನಿವೃತ್ತಿ ಹೊಂದಿದ ನಂತರ ಇವರಿಗೆ ಯಾವುದೇ ಸೇವಾ ಭದ್ರತೆ ಸಿಕ್ಕಿರುವುದಿಲ್ಲ. ನಿವೃತ್ತಿಯಾದನಂತರ ನಿವೃತ್ತಿ ವೇತನ (ಪಿಂಚಣಿ)ಯಿಂದ ಕೂಡಾ ವಂಚಿತರಾಗಿರುತ್ತಾರೆ. ನಿವೃತ್ತಿಯಾದ ನೌಕರರು ಹಲವಾರು ಜನ ಮೃತಪಟ್ಟಿರುತ್ತಾರೆ. ಸೇವೆ ಸಲ್ಲಿಸುವ ಸಂದರ್ಭದಲ್ಲಿಯೂ ಕೂಡಾ ಮೃತಪಟ್ಟಿರುತ್ತಾರೆ. ಆದರೆ ಇವರಿಗೆ ಸರಕಾರಿ ನೌಕರರಿಗೆ ಸಿಗುವ ಯಾವುದೇ ಸೌಲಭ್ಯಗಳು ಸಿಕ್ಕಿರುವುದಿಲ್ಲ. ನಿವೃತ್ತಿ ಹೊಂದಿದ ಮತ್ತು ಸೇವೆಯಲ್ಲಿ ಮೃತಪಟ್ಟ ಕುಟುಂಬಗಳು ಆತಂತ್ರ ಸ್ಥಿತಿಯಲ್ಲಿದ್ದಾರೆ.
ಈ ಕಾರಣಕ್ಕಾಗಿ ಸದರಿ ನೌಕರರಿಗೆ ಒಬ್ಬ ಸರಕಾರಿ ನೌಕರರಿಗೆ ಸಿಗುವ ಎಲ್ಲಾ ಸವಲತ್ತುಗಳು ಸಿಗಬೇಕು. ಈಗಾಗಲೇ ನಿವೃತ್ತಿ ವೇತನ (ಪಿಂಚಣಿ) ಸೌಲಭ್ಯ ಒದಗಿಸಿಕೊಡಬೇಕು. ಮತ್ತು ಸೇವೆಸಲ್ಲಿಸುತ್ತಿರುವ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರದ ಮೇಲೆ ಸರಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು. ಮಾನವಿಯತೆಯ ಆಧಾರದ ಮೇಲೆ ಸದರಿ ನೌಕರರಿಗೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.