’ಮಾನವನ ದಬ್ಬಾಳಿಕಯಿಂದ ಅವಘಡಗಳ ಸಂಖ್ಯೆ ಹೆಚ್ಚಳ’

0
52

ಕಲಬುರಗಿ: ದೇವರು ಪ್ರಕೃತಿಯನ್ನು ಸಮತೋಲನದಲ್ಲಿಯೇ ಸೃಷ್ಠಿಸಿದ್ದಾನೆ. ಆದರೆ ಮಾನವನು ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡಿ, ತನಗೆ ಬೇಕಾದಂತೆ ಸೃಷ್ಠಿಸಲು ಹವಣಿಸುತ್ತಿದ್ದಾನೆ. ಇದರ ಪರಿಣಾಮವಾಗಿ ಪ್ರಕೃತಿಯಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ನೈಸರ್ಗಿಕ ಅವಘಡಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಹೇಳಿದರು.

ಅವರು ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಕೂಡಲಸಂಗಮದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ’ರಾಷ್ಟ್ರೀಯ ನೈಸರ್ಗಿಕ ಅವಘಡಗಳ ನಿಯಂತ್ರಣ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲಡೆ ಕಟ್ಟಡಗಳು ಸೇರಿದಂತೆ ಇನ್ನೀತರ ನಿರ್ಮಾಣದ ನೆಪದಲ್ಲಿ ವ್ಯಾಪಕವಾದ ಗಿಡ-ಮರ, ಪ್ರಾಣಿ-ಪಕ್ಷಿಗಳ ಸಂಕುಲವನ್ನು ನಾಶಪಡಿಸಲಾಗಿದೆ. ಇದರಿಂದ ನಿಸರ್ಗದಲ್ಲಿ ಅಸಮತೋಲನ ಉಂಟಾಗುತ್ತಿದೆ. ಒಂದೆಡೆ ಅತಿವೃಷ್ಠಿ, ಮತ್ತೊಂದೆಡೆ ಅನಾವೃಷ್ಠಿ ಉಂಟಾಗುತ್ತಿದೆ. ಭೂಕಂಪ, ಜ್ವಾಲಾಮುಖಿಯಂತಹ ನೈಸರ್ಗಿಕ ಅವಘಡಗಳು ಉಂಟಾಗುತ್ತಿವೆ. ಪವಿತ್ರ ಸ್ಥಳಗಳ ಪುಣ್ಯಸ್ಥಾನ ಮಾಡುವ ಸಂದರ್ಭದಲ್ಲಿ ಪ್ರವಾಹವನ್ನು ಗಮನಿಸಬೇಕೆಂದರು.

ಸೋಮಶೇಖರ ಮೂಲಗೆ ಮಾತನಾಡಿ, ಪರಿಸರವನ್ನು ಸಂರಕ್ಷಿದರೆ ಮಾತ್ರ ಸಕಲ ಜೀವರಾಶಿಗಳಿಗೆ ಉಳಿಗಾಲವಿದೆ. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆಯೆಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಪ್ರೊ.ಎಸ್.ಕೆ.ಕಲ್ಯಾಣರಾವ, ರಾಜಶೇಖರ ಬಿ.ಮರಡಿ, ಲಕ್ಷೀಪುತ್ರ ಬಿರಾದಾರ ಸಂಗೋಳಗಿ, ಸೋಮಶೇಖರ ಪಾಟೀಲ, ಹಣಮಂತ ಕಾಂಬಳೆ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here