ಸುರಪುರ: ತಾಲ್ಲೂಕಿನ ರುಕ್ಮಾಪುರ ಗ್ರಾಮದಲ್ಲಿ ಸಗರನಾಡು ಕಲಾ ವೇದಿಕೆ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಸಂಗೀತ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ತಾಲ್ಲೂಕು ಪಂಚಾಯತಿ ಸದಸ್ಯ ಸುರೇಂದ್ರ ನಾಯಕ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಸಂಗೀತದಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ.ಸಂಗೀತಕ್ಕೆ ಅಮೋಘವಾದ ಶಕ್ತಿಯಿದೆ.ಸಂಗೀತಕ್ಕೆ ಯಾವುದೆ ಧರ್ಮ ಮತದ ಬಣ್ಣವಿಲ್ಲ,ಎಲ್ಲರು ಸಂಗೀತಕ್ಕೆ ತಲೆದೂಗುತ್ತಾರೆ.ಸಂಗೀತವೆ ಒಂದು ಮನಶಾಂತಿ ನೀಡುವ ಭಾಷೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಗಿತಗಾರ ಬಸವರಾಜ ಗೋಗಿ ಹಾಗು ನಿವೃತ್ತ ಪ್ರಾಂಶುಪಾಲ ಬಸವರಾಜ ಸಲೆಗಾರ ಮಾತನಾಡಿದರು.ಇದೇ ಸಂದರ್ಭದಲ್ಲಿ ತನ್ನ ದೇಹದ ಅಂಗಾಂಗಗಳ ದಾನ ಮಾಡಿಸಮಾಜಕ್ಕೆ ಮಾದರಿ ಯುವಕನಾಗಿ ವಿಧಿವಶರಾಗಿದ್ದ ರುಕ್ಮಾಪುರ ಗ್ರಾಮದ ವಿದ್ಯಾರ್ಥಿ ಕಾರ್ತಿಕ ಬಡಗ ತಂದೆ ಕಿರಪ್ಪ ಬಡಗರನ್ನು ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಹಳ್ಳೆರಾವ್ ಕುಲಕರ್ಣಿ ಕೆಂಭಾವಿ,ಅಂಬ್ಲಪ್ಪ ಹಳ್ಳಿ ಸಗರ ಇದ್ದರು.ಈರಣ್ಣ ಪೂಜಾರಿ ನೇತೃತ್ವ ವಹಿಸಿದ್ದರು.ನಿವೃತ್ತ ವೈದ್ಯಾಧಿಕಾರಿ ಶಾಂಕ್ರಪ್ಪ ಬಾವಿ ಅಧ್ಯಕ್ಷತೆ ವಹಿಸಿದ್ದರು.ಮಂಜುನಾಥ ಚೆಟ್ಟಿ ನಿರೂಪಿಸಿದರು,ರಾಜಶೇಖರ ಗೆಜ್ಜಿ ವಂದಿಸಿದರು.ಕಾರ್ಯಕ್ರಮದಲ್ಲಿ ಬಸವರಾಜ ಹೊನ್ನಳ್ಳಿ,ಶಂಕ್ರಪ್ಪ ಬಡಗ,ಕಾಶಿನಾಥ ಬಣಗಾರ,ಶಂಕ್ರಪ್ಪ ಚೆಟ್ಟಿ,ಸದಾಶಿವ ಮಿಣಜಿಗಿ,ರಮೇಶ ಕುದರಿ,ಮಲ್ಕಪ್ಪ ಕುಂಬಾರ ಇತರರು ಉಪಸ್ಥಿತರಿದ್ದರು.