ಸುರಪುರ: ಹಿಂದಿನ ಕಾಲದಲ್ಲಿ ಅನೇಕ ಜನ ರಾಜರು ಸ್ವತಃ ತಾವೇ ಪಾರಂಪರಿಕ ವೈದ್ಯರಾಗಿದ್ದು ಬೇಟೆಗೆ ಹೋದ ಸಂದರ್ಭದಲ್ಲಿ ತಾವೇ ಮದ್ದು ಮಾಡಿಕೊಳ್ಳುತ್ತಿದ್ದರು ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಗೌರವಾಧ್ಯಕ್ಷರು, ಇಲಕಲ್ ಶಿವಶಕ್ತಿ ಪೀಠದ ಬಸವ ಪ್ರಸಾದ ಸ್ವಾಮೀಜಿ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ರಾಣಿ ಪಾಪಮ್ಮ ಜೇಜಾ ಅವರ 20ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಆರ್.ಸಿ.ನಾಯಕ ಜನಸೇವಾ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುರ್ವೇದ ಔಷಧಿ ವಿತರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ,ಯಾವುದೇ ವ್ಯಕ್ತಿ ಬೆಳಗಿನ ಜಾವ ಬ್ರಾಹ್ಮೀ ಸಮಯದಲ್ಲಿ ಎದ್ದೇಳುವುದನ್ನು ರೂಢಿಸಿಕೊಂಡವರಿಗೆ ಅರ್ಧದಷ್ಟು ಕಾಯಿಲೆಗಳು ದೂರ ಇರುತ್ತವೆ.ನೀವೆಲ್ಲ ಪಾರಂಪರಿಕ ವೈದ್ಯರು ನಿಮ್ಮ ಬಳಿಗೆ ಬರುವ ರೋಗಗಳ ಲಕ್ಷಣಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಔಷಧಿ ನೀಡಬೇಕು ಎಂದು ಸಹಲೆ ನೀಡಿದರು.ಮನ್ಯಷ್ಯನಿಗೆ ರೋಗ ದಿಂದ ದೂರವಿರಲು ಶುದ್ಧವಾದ ಆಹಾರ ಸೇವನೆ ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಟ್ರಸ್ಟ್ ಅಧ್ಯಕ್ಷ ಆರ್.ಸಿ.ನಾಯಕ ಮಾತನಾಡಿ,ರಾಣಿ ಪಾಪಮ್ಮ ಜೇಜಾ ಅವರು ನಮಗೆ ತಂದೆ ತಾಯಿಯಾಗಿ ಸಲುಹಿದ್ದಾರೆ.ಅವರು ಸದಾಕಾಲ ಕೊಡುಗೈ ರಾಣಿಯಾಗಿದ್ದರು,ಇಂದು ನಾವಿಬ್ಬರು ಅಣ್ಣ ತಮ್ಮಂದಿರು ಹೀಗೆ ಇದ್ದೇವೆಂದರೆ ಅದಕ್ಕೆ ರಾಣಿ ಪಾಪಮ್ಮ ಜೇಜಾ ಅವರ ಕೊಡುಗೆ ಎಂದರು.ಅಲ್ಲದೆ ನಾನು ಇಂದು ವೈದ್ಯನಾಗಿದ್ದೇನೆ ಎಂದರೆ ಅದಕ್ಕೆ ಬಸವಪ್ರಸಾದ ಸ್ವಾಮೀಜಿಗಳು ಹಾಗೂ ಪರಿಷತ್ ಅಧ್ಯಕ್ಷರಾದ ಆನಂದ ಡಿ,ಹೇರೂರ ಅವರು ಹಾಗೂ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿಯವರ ಮಾರ್ಗದರ್ಶನ ಮುಖ್ಯವಾಗಿದೆ ಎಂದರು.
ನೇತೃತ್ವ ವಹಿಸಿದ್ದ ಡಾ.ನಿರ್ಮಲಾ ಕನ್ನಾಳ ಮಾತನಾಡಿ,ಪ್ರತಿಯೊಬ್ಬರಿಗೆ ವಾತ,ಪಿತ್ತ,ಕಫ ನಿಯಂತ್ರಣ ಮುಖ್ಯವಾಗಿದೆ.ಯಾವುದೇ ಕಾಯಿಲೆಗೆ ಈ ಮೂರು ಮುಖ್ಯ ಕಾರಣವಾಗಿರಲಿವೆ ಎಂದರು.
ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಹಾಗೂ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಸಹೋದರ ರಾಜಾ ಸಂತೋಷ ನಾಯಕ ಕಾರ್ಯಕ್ರಮ ಉದ್ಘಾಟಿಸಿ,ಉಚಿತ ಆಯುರ್ವೇದ ಔಷಧಿ ವಿತರಿಸಿ ಚಾಲನೆ ನೀಡಿದರು.ಟ್ರಸ್ಟ್ ಗೌರವಾಧ್ಯಕ್ಷ ರಾಜಾ ಶುಭಾಶ್ಚಂದ್ರ ನಾಯಕ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾನಿಧ್ಯ ವಹಿಸಿದ್ದ ಪ್ರಭುಲಿಂಗ ಮಹಾಸ್ವಾಮೀಜಿ,ಪರಿಷತ್ ಅಧ್ಯಕ್ಷ ಆನಂದ ಡಿ.ಹೇರೂರ,ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಪೊಲೀಸ್ ಪೇದೆ ದಯಾನಂದ ಜಮಾದಾರ,ಮಾಜಿ ಸೈನಿಕ ಭೀಮಣ್ಣ ನಾಯಕ,ವಿದ್ಯಾರ್ಥಿ ಅತೀಕ್ ಫರೀದಿ,ಪ್ರಗತಿಪರ ರೈತ ಭಾಗಪ್ಪ ರತ್ತಾಳ ಸೇರಿದಂತೆ ಅನೇಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿ.ಪಂ ಮಾಜಿ ಅದ್ಯಕ್ಷ ರಾಜಾ ಹನುಮಪ್ಪ ನಾಯಕ,ತಾಲೂಕ ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ,ಹುಲಗಪ್ಪ ಪೂಜಾರಿ,ರಾಜಾ ಸೋಮನಾಥ ನಾಯಕ ಗುರಗುಂಟಾ,ರಾಜಾ ಕೃಷ್ಣದೇವರಾಜ ನಾಯಕ (ಬಬ್ಲುದೊರೆ) ರತ್ನಗಿರಿ ಸಂಸ್ಥಾನ,ನಗರಸಭೆ ಸದಸ್ಯ ವೇಣುಮಾಧವ ನಾಯಕ,ಡಾ.ಶಫೀಕ್ ಅಹ್ಮದ್, ನರಸಿಂಹ ವೈದ್ಯ ಶಹಾಪುರ,ಪರಿಷತ್ ಜಿಲ್ಲಾಧ್ಯಕ್ಷ ಮಕ್ತುಮ್ ಪಟೇಲ್,ಚಂದ್ರಶೇಖರ ಪಂಡೀತ್,ರಮೇಶ ಗಂಜ್ ಇತರರು ಉಪಸ್ಥಿತರಿದ್ದರು.
ಮೋಹನರಾವ್ ಮಾಳದಕರ್ ತಂಡ ದಿಂದ ಸಂಗೀತ ಕಾರ್ಯಕ್ರಮ ನಡೆಯಿತು.ನಿವೃತ್ತ ಶಿಕ್ಷಕ ಶಿವಕುಮಾರ ಮಸ್ಕಿ ಸ್ವಾಗತಿಸಿದರು,ರಾಘವೇಂದ್ರ ಸುಗಂಧಿ ಗೋಗಿ ನಿರೂಪಿಸಿ,ವಂದಿಸಿದರು.ಟ್ರಸ್ಟ್‍ನ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.ತಾಲೂಕಿನಾದ್ಯಂತ ನೂರಾರು ಜನರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆಯುರ್ವೇದ ಔಷಧಿ ಪಡೆದುಕೊಂಡರು.