ದೇಶವನ್ನು ಮುಂಚೂಣಿಯಲ್ಲಿ ತರಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅತ್ಯಗತ್ಯ: ರಾಜ್ಯಪಾಲರು

0
28

ಮುಂಬೈ; ನಮ್ಮ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ವೇಗದಲ್ಲಿ ಸಾಗುತ್ತಿದೆ, ಮುಂಬರುವ ವರ್ಷಗಳಲ್ಲಿ ದೇಶವನ್ನು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮುಂಚೂಣಿಗೆ ತರಲು ಪ್ರತಿಯೊಬ್ಬರು ಸಕ್ರಿಯ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಜೈನ ಸಾಹಿತ್ಯ ಸಂಗಮದ ಪರಿವಾಹದಿಂದ ಮುಂಬೈನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯದ ನಂತರ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ದೇಶದ ಆರ್ಥಿಕತೆಯನ್ನು ಬಲಪಡಿಸಿದೆ. ಪ್ರಸ್ತುತ ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ಜೈನ ಧರ್ಮದಲ್ಲಿ “ಬದುಕು ಮತ್ತು ಬದುಕಲು ಬಿಡಿ” ಮತ್ತು “ಅಹಿಂಸಾ ಪರಮೋ ಧರ್ಮ” ಗಳು ಜೀವಿಗಳ ಬಗ್ಗೆ ಸಹಾನುಭೂತಿಯನ್ನು ಕಲಿಸುತ್ತದೆ. ಹಲವು ದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಜೈನ ಧರ್ಮದ ಅಧ್ಯಯನಕ್ಕಾಗಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಸಮಾಜವನ್ನು ಸಂಘಟಿತವಾಗಿಡುವಲ್ಲಿ ಧರ್ಮವು ಪ್ರಮುಖ ಪಾತ್ರ ವಹಿಸುತ್ತದೆ. ಧರ್ಮ ಮತ್ತು ಸಂಸ್ಕøತಿಯನ್ನು ಸ್ವೀಕರಿಸಿ, ದೇಶವನ್ನು ಸರ್ವೋಚ್ಚ ಎಂದು ಪರಿಗಣಿಸಿ, ದೇಶದ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ದೇಶಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡಬಹುದು ಎಂದು ಅವರು ತಿಳಿಸಿದರು.

ವಿವಿಧ ಜೈನ ಸಂಸ್ಥೆಗಳಿಂದ ಅಂತಾರಾಷ್ಟ್ರೀಯ ಜೈನ ವಿಚಾರಗೋಷ್ಠಿಗಳು, ಸಮ್ಮೇಳನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದಾಗಿ ಜೈನ ಸಾಹಿತ್ಯದ ಪ್ರಭಾವವನ್ನು ಇಂದು ಜಗತ್ತಿನಲ್ಲಿ ಕಾಣಬಹುದು. ಈ ಸಮಾವೇಶದ ಮೂಲಕ ಅಂತರರಾಷ್ಟ್ರೀಯ ಜೈನ ಸಾಹಿತ್ಯ ಸಂಗಮವು ಆಗಮ ಸಾಹಿತ್ಯ, ವ್ಯಾಖ್ಯಾನಗಳು, ಧರ್ಮಶಾಸ್ತ್ರ, ಇತಿಹಾಸ ಮತ್ತು ತತ್ವಶಾಸ್ತ್ರದಂತಹ ಜೈನ ಸಾಹಿತ್ಯದ ವಿವಿಧ ಅಂಶಗಳನ್ನು ಚರ್ಚಿಸಲು ವೇದಿಕೆಯನ್ನು ಒದಗಿಸುತ್ತಿದೆ. ರಾಷ್ಟ್ರೀಯ ಧರ್ಮ ಮತ್ತು ಭಾರತೀಯ ಸಂಸ್ಕøತಿಯನ್ನು ಸಾಮಾನ್ಯ ಜನರಿಗೆ ಪಸರಿಸಲು ಜೈನ ಸಾಹಿತ್ಯ ಸಂಗಮದ ಈ ಸಂಕಲ್ಪ ಶ್ಲಾಘನೀಯ. ಈ ಸಮಾವೇಶದಲ್ಲಿ ಭಾಗವಹಿಸಿರುವ ಎಲ್ಲ ಸಾಹಿತಿಗಳು ಮತ್ತು ಕವಿಗಳು ತಮ್ಮ ಬರಹಗಳ ಮೂಲಕ ಭಾರತದಾದ್ಯಂತ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಾರ್ವಜನಿಕ ಜಾಗೃತಿಯನ್ನು ತರಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಯೋಗಿ ದೇವೇಂದ್ರ ಬ್ರಹ್ಮಚಾರಿ, ಮಹಾರಾಷ್ಟ್ರ ಸರ್ಕಾರದ ಸಚಿವರಾದ ಮಂಗಲ್ ಪ್ರಭಾತ್ ಲೋಧಾ, ಜೈನ ಸಾಹಿತ್ಯ ಸಂಗಮದ ಅಂತಾರಾಷ್ಟ್ರೀಯ ಅಧ್ಯಕ್ಷರಾದ ಮಂಜು ಲೋಧಾ, ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here