ಕೊಪ್ಪಳ: ‘ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವಾಡುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯನ್ನು ಅಸ್ಪೃಶ್ಯತೆ ಪಿಡಿತ ಜಿಲ್ಲೆಯನ್ನಾಗಿ ಘೋಷಿಸಬೇಕು ಮತ್ತು ಎಸ್ಸಿ ಎಸ್ಟಿ ಮತ್ತು ಟಿಎಸ್ಪಿ ಹಣವನ್ನು ರಾಜ್ಯ ಸರ್ಕಾರ ತಮ್ಮ ಐದು ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುದನ್ನು ಕೈ ಬಿಡಬೇಕು. ದಲಿತರ ಅಭಿವೃದ್ಧಿಗಾಗಿ ಮೀಸಲಿರುವ ಹಣವನ್ನು ದಲಿತರಿಗೆ ಮಾತ್ರ ಬಳಸಬೇಕು ಎಂಬ ಹಲವು ಬೇಡಿಕೆಗಳನ್ನು ಈಡೆರಿಸಲು ಒತ್ತಾಯಿಸಿ ಭಾರತೀಯ ಭೀಮ ಸೇನಾ ಮತ್ತು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಕಾರ್ಯಕರ್ತರ ನಿಯೋಗ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಭೀಮ್ ಸೇನಾ ಮುಖಂಡ ಕಾಶಪ್ಪ ಚಲವಾದಿ ಮತ್ತು ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಸಂಘಟನೆಯ ಮುಖಂಡ ರಾಘು ಚಾಕ್ರಿ ಅವರು ಮಾತನಾಡಿ,’ ದಲಿತ ವಿಧ್ಯಾರ್ಥಿವೇತನ, ವಿಧ್ಯಾರ್ಥಿ ನಿಲಯಗಳ ದುರವಸ್ಥೆ, ವಿಧ್ಯಾರ್ಥಿಗಳ ಉತ್ತೇಜನದಿಂದ ಮೀಸಲಾದ ಪ್ರೈಜ್ ಮನಿ ದುರುಪಯೋಗ ಆಗುತ್ತಿವೆ. ಅವರಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲಾ! ಈ ವಿಷಯವನ್ನು ತನಿಖೆ ಮಾಡಿ ದಲಿತ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು.
ಪ.ಜಾತಿ ಮತ್ತು ಪ.ಪಂಗಡದ ಹಣ ಬೇರೆ ಯೋಜನೆಗಳಿಗೆ ವರ್ಗಾವಣೆ ಆಗುತ್ತಿದ್ದು, ದಲಿತರ ಹಣವನ್ನು ರಾಜ್ಯ ಸರ್ಕಾರ ದಲಿತರಿಗೆ ಬಳಸಬೇಕು ದಲಿತರ ಅನುದಾನ ರಕ್ಷಣೆ ಆಗಬೇಕು ಎಂದರು.
ದಲಿತರಿಗೆಂದೇ ಮೀಸಲಿರಿಸಿರುವ SCSP/TSP ಯೋಜನೆಯ ಸರಿಸುಮಾರು 26 ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವದು ಸರಿಯಲ್ಲ. ಗ್ಯಾರಂಟಿ ಯೋಜನೆಯು ಕೇವಲ ದಲಿತರಿಗಷ್ಟೇ ಸೀಮಿತವಾಗಿಲ್ಲ, ಅದು ಈ ರಾಜ್ಯದಲ್ಲಿರುವ ಎಲ್ಲಾ ನಾಗರೀಕರಿಗೂ ಗ್ಯಾರಂಟಿ ಯೋಜನೆಯು ಬಳಕೆಯಲ್ಲಿದೆ ಆದ್ದರಿಂದ ದುರ್ಬಳಕೆ ಮಾಡಿಕೊಂಡ SCSP/TSP ಹಣವನ್ನು ಮರಳಿ ಸರ್ಕಾರ SCSP/TSP ಖಾತೆಗೆ ಹಿಂದಿರುಗಿಸಿ ದಲಿತೋದ್ಧಾರ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ನಿತ್ಯ ದಲಿತರ ಮೇಲೆ ಕೊಲೆ ಮತ್ತು ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕೆ ಸೂಕ್ತ ಕಾನೂನು ಜಾರಿ ಮಾಡಬೇಕು ಮತ್ತು ರಾಜ್ಯ ಸರ್ಕಾರವೆ ಈ ಹಿಂದೆ ಯಾವುದಾದರೂ ದೌರ್ಜನ್ಯ ಪ್ರಕರಣ ನಡೆದ ಸಂದರ್ಭದಲ್ಲಿ ಅದಕ್ಕೆ ಆಯಾ ಜಿಲ್ಲೆಯ ಡಿಸಿ, ಎಸ್ ಪಿ ಗಳನ್ನು ಹೊಣೆ ಮಾಡಲಾಗುವುದು ಎಂದು ಹೇಳಿದ್ದೀರಿ. ಆದರೇ ಇಲ್ಲಿಯ ವರೆಗೂ ಸರ್ಕಾರವು ಯಾವ ಒಬ್ಬ DC ಹಾಗೂ SP ಗಳ ಮೇಲೆ ಕ್ರಮ ಜರುಗಿಸಿಲ್ಲ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.
ನಿಯೋಗದಲ್ಲಿ ಪ್ರಮುಖರಾದ ನೀಲಪ್ಪ ಹೊಸಮನಿ, ಮಂಜುನಾಥ ದೊಡ್ಡಮನಿ, ಶ್ರೀಕಾಂತ ಕಡೆಮನಿ, ಮಾರ್ಕಂಡಯ್ಯ ಬೆಲ್ಲದ ಸೇರಿದಂತೆ ಹಲವರು ಇದ್ದರು.