ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ

0
12

ಸುರಪುರ: ಪ್ರತಿಯೊಂದು ಮಗುವಿನಲ್ಲಿ ಕೇವಲ ಓದಿನ ಬೌದ್ಧಿಕತೆ ಮಾತ್ರವಲ್ಲದೆ ಅವರಲ್ಲಿ ಉತ್ತಮವಾದ ಕಲಾ ಪ್ರತಿಭೆಯು ಇರುತ್ತದೆ,ಅದನ್ನು ಹೊರ ಹಾಕಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಬಿಆರ್‍ಪಿ ಖಾದರ್ ಪಟೇಲ್ ಮಾತನಾಡಿದರು.

ನಗರದ ರಂಗಂಪೇಟೆಯ ಕನ್ಯಾ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ರಂಗಂಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಅನೇಕ ಶಾಲೆಯ ಮಕ್ಕಳು ಭಾಗವಹಿಸಿದ್ದಾರೆ,ತೀರ್ಪುಗಾರರು ಎಲ್ಲಾ ಮಕ್ಕಳ ಪ್ರತಿಭೆ ಪ್ರದರ್ಶನವನ್ನು ವೀಕ್ಷಿಸಿ ಉತ್ತಮವಾದ ಪ್ರದರ್ಶನ ತೋರಿದ ಮಕ್ಕಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ತೀರ್ಪು ನೀಡುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸಿಆರ್‍ಪಿ ಚೆನ್ನಪ್ಪ ಕ್ಯಾದಗಿ ಮಾತನಾಡಿ,ರಂರಂಪೇಟೆ ಕ್ಲಸ್ಟರ್ ಮಟ್ಟದಲ್ಲಿ ಅನೇಕ ಶಾಲಾ ಮಕ್ಕಳು ಇಲ್ಲಿ ಭಾಗವಹಿಸಿದ್ದಾರೆ,ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣವಾದ ಶಾಲೆಯ ಮುಖ್ಯಗುರು ಮುದ್ದಪ್ಪ ಅಪ್ಪಾಗೋಳ ಸೇರಿ ಶಾಲೆಯ ಎಲ್ಲಾ ಶಿಕ್ಷಕ ವೃಂದಕ್ಕೆ ಹಾಗೂ ಕಾರ್ಯಕ್ರಮಕ್ಕೆ ನೆರವಾಗಿರುವ ತಕ್ಷಶಿಲಾ ಇಂಟರ್‍ನ್ಯಾಷನಲ್ ಶಾಲೆಯ ಮುಖ್ಯಸ್ಥರಿಗೂ ಈ ಮೂಲಕ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಸೋಮರಡ್ಡಿ ಮಂಗಿಹಾಳ,ತಾ.ಪ್ರಧಾನ ಕಾರ್ಯದರ್ಶಿ ಶರಣು ಗೋನಾಲ,ಶಿಕ್ಷಕ ದೇವರಾಜ ಪಾಟೀಲ್,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಮುದ್ದಪ್ಪ ಅಪ್ಪಾಗೋಳ ಸೇರಿ ಅನೇಕರು ಮಾತನಾಡಿದರು.

ನಂತರ ವಿವಿಧ ಶಾಲೆಗಳ ಮಕ್ಕಳಿಂದ ಭರತ ನಾಟ್ಯ,ಛದ್ಮ ವೇಷ,ರಂಗೋಲಿ,ಚಿತ್ರಕಲೆ,ಅಭಿನಯ ಗೀತೆ,ಆಶು ಭಾಷಣ,ಕಥೆ ಹೇಳುವದು,ಜನಪದ ನೃತ್ಯ ಕಲಾ ಪ್ರದರ್ಶನ ನಡೆಯಿತು.ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖಂಡರಾದ ವಾಸುದೇವ ಮಂಗಳೂರ,ಸುಭಾಷ್ ಬೋಡಾ,ನಗರಸಭೆ ಸದಸ್ಯ ಕಮ್ರುದ್ದಿನ್,ಎಸ್.ಡಿ.ಎಮ್.ಸಿ ಅಧ್ಯಕ್ಷ ನಿಂಗಪ್ಪ ಮಾಲಗತ್ತಿ,ರಮೇಶ ಡೊಳ್ಳೆ,ಅಂಬಿಕಾ ಡಾ.ಮುಕುಂದ ಯಾನಗುಂಟಿ,ಶಿಕ್ಷಕ ದೇವರಾಜ ಪಾಟೀಲ್,ಹಣಮಂತ್ರಾಯ,ಎಪಿಎಫ್ ಸಂಯೋಜಕರಾದ ಅನ್ವರ ಜಮಾದಾರ್,ಕೃಷ್ಣಾ ಬಿಜಾಸಪುರ,ಉರ್ದು ಶಾಲೆ ಮುಖ್ಯಗುರು ಯೂನೂಸ್ ಬೇಪಾರಿ,ಶಕೀಲ್ ಅಹ್ಮದ್ ವೇದಿಕೆಯಲ್ಲಿದ್ದರು.ಆಕಾಶವಾಣಿ ಕಲಾವಿದ ಶರಣು ಜಾಲಹಳ್ಳಿ ನಿರೂಪಿಸಿದರು,ಶಿಕ್ಷಕ ಸಿದ್ದನಗೌಡ ಸ್ವಾಗತಿಸಿದರು,ಲಕ್ಷ್ಮಣ ಶಿಕ್ಷಕ ವಂದಿಸಿದರು.

ಸಮಾರೋಪ ಸಮಾರಂಭದಲ್ಲಿ ಶಿಕ್ಷಕಿಯರಾದ ಆಯುಷಾ ಪರ್ವಿನ್, ರಾಜೇಶ್ವರಿ,ಶಾಂತಾ,ಪಿಡ್ಡಮ್ಮ,ವಜನಾ ಕುಲಕರ್ಣಿ,ಜಹಿರಾ ಬೇಗಂ ಸೇರಿದಂತೆ ಕನ್ನಡ ಕನ್ಯಾ ಹಿ.ಪ್ರಾ.ಶಾಲೆ ತಿಮ್ಮಾಪುರ,ಕೆಪಿಎಸ್ ರಂಗಂಪೇಟೆ,ಸ.ಹಿ.ಪ್ರಾ.ಶಾಲೆ ದಿವಳಗುಡ್ಡ,ಸ.ಹಿ.ಪ್ರಾ.ಶಾಲೆ ಸತ್ಯಂಪೇಟೆ ಶಾಲೆಯ ಅನೇಕ ಜನ ಶಿಕ್ಷಕಿಯರು ವೇದಿಕೆಯಲ್ಲಿದ್ದು ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here