ಆರೋಗ್ಯ ಇಲಾಖೆಯ ಗುತ್ತಿಗೆ ಹೊರಗುತ್ತಿಗೆ ನೌಕರರ ಹಿತ ಕಾಪಾಡಲು ಸಂಘದಿಂದ ಮನವಿ

1
138

ಕಲಬುರಗಿ: ಹೊರಗುತ್ತಿಗೆ ಪದ್ಧತಿಯನ್ನು ಕೈ ಬಿಡಬೇಕು ಅಥವಾ ಬೀದರ್ ಮಾದರಿಯಲ್ಲಿ ಸಂಸ್ಥೆ ರಚಿಸಿ ಹೊರಗುತ್ತಿಗೆ ಸಿಬ್ಬಂದಿಗಳ ಹಿತ ಕಾಪಾಡಬೇಕು ಎಂಬುದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ (KSHCOEA)ದ ಆಗ್ರಹ ಮತ್ತು ಹೋರಾಟ ಆಗಿತ್ತು.

ಇದಕ್ಕೆ ಸ್ಪಂದಿಸಿದ ರಾಜ್ಯ ಸರಕಾರದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಹೊರಗುತ್ತಿಗೆ ನೌಕರರಿಗೆ ಏಜೆನ್ಸಿ ರದ್ದುಗೊಳಿಸಿ ಬೀದರ್ ಮಾದರಿಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸರ್ಕಾರಿ ಸಹಕಾರಿ ಸಂಸ್ಥೆಯ ಮೂಲಕ ಎಲ್ಲಾ ಇಲಾಖೆಗಳಲ್ಲಿ ವೇತನ ಹಾಗೂ ಇದಕ್ಕೆ ಮೇಲ್ವಿಚಾರಣೆಗೆ ಸರ್ಕಾರದ ಒಬ್ಬ ಅಧಿಕಾರಿಯನ್ನು ಜವಾಬ್ದಾರಿ ಹೊರಿಸಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಜಾರಿಗೆ ಮಾಡುವ ಬಗ್ಗೆ ಸಭೆ ಮಾಡಿ ಸೂಚನೆ ನೀಡಿರುತ್ತಾರೆ.

Contact Your\'s Advertisement; 9902492681

KSHCOEA-BMS ಸಂಘದಿಂದ ಈ ಬೀದರ್ ಮಾದರಿಯನ್ನು ಸತತ 05 ವರ್ಷಗಳಿಂದ ಹಲವು ಬಾರಿ ಸರಕಾರದ ಮುಂದಿಟ್ಟು ಕಾರ್ಮಿಕ ಇಲಾಖೆಗಳ  ಪ್ರತಿ ಸಭೆಯಲ್ಲಿ (ಗುತ್ತಿಗೆ ಸಲಹಾ ಮಂಡಳಿಯ ಸಭೆ , ಕನಿಷ್ಠ ವೇತನ ಸಲಹಾ ಮಂಡಳಿ ಸಭೆ, ಹಾಗೂ ಟ್ರೇಡ್ ಯೂನಿಯನ್ ಗಳ ಸಭೆಗಳಲ್ಲಿ) ಭಾರತೀಯ ಮಜ್ಧೂರ ಸಂಘ (ಕರ್ನಾಟಕ)ದ ಮೂಲಕ ಹಾಗೂ ನಮ್ಮ ಏSಊಅಔಇಂ ಸಂಘದ ಗೌರವ ಅಧ್ಯಕ್ಷರಾದ ಆಯನೂರ ಮಂಜುನಾಥ ರವರ ಮೂಲಕ ಆರೋಗ್ಯ ಇಲಾಖೆಯ ನೌಕರರಿಗಾಗಿ ಸರಕಾರದ ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಶ್ರೀ ಶ್ರೀನಿವಾಸಾಚಾರಿ ಅವರ ಅಧ್ಯಕ್ಷರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸಂಘದ ಗೌರವ ಅಧ್ಯಕ್ಷರು ಒಳಗೊಂಡಂತೆ ಸಮಿತಿ ರಚಿಸಿ ಮಾನವ ಸಂಪನ್ಮೂಲ ವರದಿಯಲ್ಲಿ ಬೀದರ್ ಮಾದರಿ ಸೇರಿಸಿ ಸರಕಾರಕ್ಕೆ ಈ ಒಂದು ಮಾದರಿಯನ್ನು ಪರಿಚಯಿಸಿದ  ಕೀರ್ತಿ ನಮ್ಮ ಸಂಘಕ್ಕೆ ಸಲ್ಲುತ್ತದೆ.

ಸರಕಾರದ ಕಾಳಜಿಯುತ ಒಂದೊಳ್ಳೆಯ ವ್ಯವಸ್ಥೆಯನ್ನು KSHCOEA-BMS ಆರೋಗ್ಯ ಇಲಾಖೆಯ ಹೊರಗುತ್ತಿಗೆ ಜಾರಿಗೆ ತರಲು ಸದಾ ಒತ್ತಡ ಹೇರುವುದರ ಮೂಲಕ ಇಂದು ಜಾರಿ ಆಗುತ್ತಿದೆ.

ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸರಕಾರದ ಎಲ್ಲಾ ಇಲಾಖೆಗಳ ಹೊರಗುತ್ತಿಗೆ ನೌಕರರಿಗೆ ವಿಸ್ತರಿಸುತ್ತಿರುವುದನ್ನು ಅತ್ಯಂತ ಖುಷಿಯ ವಿಚಾರ ಎಂದು ಸಂಘದ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ಸ್ವಾಮಿ ಅವರು ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

1 ಕಾಮೆಂಟ್

  1. ನಿಜ ಸರ್ ದಯವಿಟ್ಟು ಮದ್ಯ ಇರೋ ದಲ್ಲಾಳಿನ ತೆಗದು ಹಾಕಿ ಪ್ಲೀಸ್ ವೇತನ ನೇರ ನಮ್ಮ ಖಾತೆಗೆ ಜಮಾ ಮಾಡಿ ದಯವಿಟ್ಟು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here