ಹಾಡುಗಳ ಮೂಲಕ ಪಿಬಿ ಶ್ರೀನಿವಾಸ್ ಇನ್ನೂ ಜೀವಂತ : ಭವಾನಿಸಿಂಗ್ ಠಾಕೂರ್

0
36

ಕಲಬುರಗಿ: ಗಾನ ಗಾರುಡಿಗ ಪಿಬಿ ಶ್ರೀನಿವಾಸ್ ರವರು ನಮ್ಮಿಂದ ಮರೆಯಾದರೂ ಅವರು ಹಾಡಿದ ಸಾವಿರಾರು ಹಾಡುಗಳ ಮೂಲಕ ಇವತ್ತಿಗೂ ಎಲ್ಲರ ಮನದಲ್ಲಿ ಜೀವಂತವಾಗಿದ್ದಾರೆ ಅಂತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಹೇಳಿದ್ದಾರೆ.

ನಗರದ ಕನ್ನಡ ಭವನದಲ್ಲಿ ಮ್ಯೂಸಿಕ್ ಗೋಲ್ಡನ್ ಫ್ರೆಂಡ್ಸ್ ಏರ್ಪಡಿಸಿದ್ದ ಗಾಯಕ ಡಾ.ಪಿಬಿ ಶ್ರೀನಿವಾಸ್ ರವರ 96 ನೇ ವರ್ಷದ ಹುಟ್ಟುಹಬ್ಬದ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ಪಿಬಿ ಶ್ರೀನಿವಾಸರವರ ಗಾಯನ ಎಂದೆಂದಿಗೂ ಶಾಶ್ವತ ವಿಶೇಷವಾಗಿ ಮಧುರ ಗೀತೆಗಳಿಗೆ ಧ್ವನಿಯಾಗಿದ್ದ ಅವರು ಹಾಡಿದ ಸಾವಿರಾರು ಹಾಡುಗಳು ಕೇಳುಗರ ಮನಸ್ಸಿಗೆ ಇವತ್ತಿಗೂ ತಟ್ಟುತ್ತವೆ ಅಂತ ಪಿಬಿಎಸ್ ರವರ ಗುಣಗಾನ ಮಾಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಉದ್ಘಾಟನೆ ನಂತ್ರ ಪಿಬಿಎಸ್ ಹಾಡಿರುವ ಗೀತೆಗಳನ್ನ ಹಾಡಲಾಯಿತು. ರಂಗ ವಿಠಲಾ ಒಲವೇ ಜೀವ ಸಾಕ್ಷಾತ್ಕಾರ ನೀಬಂದು ನಿಂತಾಗ ಉತ್ತರ ಧೃವದಿಂ ಹಾಗು ರವಿವರ್ಮನ ಹಾಡುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಕಸಾಪದ ವಿಜಯ ಕುಮಾರ್ ತೇಗಲತಿಪ್ಪಿ ಶಿವರಾಜ ಅಂಡಗಿ ಕಾರ್ಯಕ್ರಮದ ವೇದಿಕೆಯಲ್ಲಿದ್ದರು.

ಕಲಾವಿದರಾದ ಮಧು ಮಲ್ಲಾಬಾದಿ ಗೋಪಿ ಕುಲಕರ್ಣಿ ಮಹಾಂತಗೌಡ ಜೇವರ್ಗಿ ಚಂದ್ರಶೇಖರ ರೆಡ್ಡಿ ವಿಠಲ ಮೇತ್ರೆ ಸತೀಶ್ ಪಾಟೀಲ್ ಲಕ್ಷ್ಮಿಕಾಂತ ಸೀತನೂರ್ ನರಸಿಂಹಾಚಾರಿ ಲಕ್ಷ್ಮಿ ಕುಲಕರ್ಣಿ ಜಾನಕಿ ಜಾಧವ್ ಗಾನಮಂಜರಿ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here