ಕಲಬುರಗಿ: ಮುಡಾ ಭೂ ಹಗರಣಕ್ಕೆ ಸಂಬಂದಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರು ವಿರುದ್ಧ ಪ್ರಾಸಿಕ್ಯೂಷನ್‍ಗೆ ನೀಡಿರುವ ಅನುಮತಿಗೆ ಹೈಕೋರ್ಟ್ ಮತ್ತು ಜನಪ್ರತಿನಿದಿಗಳ ನ್ಯಾಯಲಯವು ತನಿಖೆಗೆ ಸೂಚಿಸಿದ್ದರು ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನ ಪ್ರದರ್ಶನ ಮಾಡುತ್ತಿರು ವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ದೇವೆಂದ್ರ ದೇಸಾಯಿ ಕಲ್ಲೂರ ಕಿಡಿ ಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಾರೆ, ಬಿಜೆಪಿ ಸರ್ಕಾರ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ ಎಂದು ಆರೋಪ ಮಾಡುವ ಕಾಂಗ್ರೆಸ್ಸಿಗರು ಇತಿಹಾ ಸವನ್ನು ಒಮ್ಮೆ ನೆನಪಿಸಿಕೊಳ್ಳಲಿ ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರ ಸಂವಿಧಾನದ 356ನೇ ವಿಧಿಯನ್ನು ದುರುಪಯೋಗ ಮಾಡುವ ಮೂಲಕ ಒಂಬತ್ತು ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿತ್ತು. ಮಾಜಿ ಪ್ರಧಾನಿಯಾಗಿದ್ದ ಇಂದಿರಾ ಗಾಂದಿಯವರು 50 ಬಾರಿ ಅಧಿಕಾರ ದುರುಪಯೋಗಪಡಿಸಿಕೊಂಡ ವಿಚಾರ ಕಾಂಗ್ರೆಸ್ಸಿನವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ದೇಶದಲ್ಲಿ ಅಂದು ಸರ್ವಾಧಿಕಾರಿಯಾಗಿ ಮೆರೆದ ಕಾರಣಕ್ಕೆ ಜನ ಕೇಂದ್ರದಲ್ಲಿ ಕಾಂಗ್ರೆಸ್ಸಿಗೆ ಅಧಿಕಾರ ನೀಡಿಲ್ಲ, ಈ ನೆಲದ ಕಾನೂನಿನ ಬಗ್ಗೆ, ನ್ಯಾಯಾಲಯದ ಬಗ್ಗೆ, ಸಂವಿಧಾನದ ಬಗ್ಗೆ ಕಾಂಗ್ರೆಸ್ಸಿಗರಿಗೆ ಗೌರವವಿಲ್ಲ, ಸಚಿವ ಜಮೀರ್ ಅಹಮದ್ ಮೂಡ ಹಗರಣದ ಬಗೆಗಿನ ನ್ಯಾಯಾಲಯದ ಆದೇಶವನ್ನು ಪೆÇಲಿಟಿಕಲ್ ಜೆಡ್ಜ್ಮೆಂಟ್ ಎಂದು ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದರು.
ಕೇಜ್ರಿವಾಲ್ ಮಾದರಿ ಆಡಳಿತ ಕರ್ನಾಟಕಕ್ಕೆ ಸಲ್ಲದು, ರಿಸೈನ್ ವಿಥ್ ಸ್ಮೈಲ್ ಆಗಿರಬೇಕೇ ಹೊರತು ವರ್ಕ್ ಫ್ರಮ್ ಜೈಲ್ ಆಗಿರಬಾರದು. ಸಿದ್ದರಾಮಯ್ಯ ಕಾನೂನು ಪದವೀಧರರು ತಮ್ಮ ಸಹುದ್ಯೋಗಿಗಳಿಗೆ ಕಾನೂನಿನ ಪಾಠಮಾಡೋ ಲಾ ಮಾಸ್ಟರ್ ತಪ್ಪು ಮಾಡಬಾರದು ಹಾಗಾಗಿ ಈ ನೆಲದ ಕಾನೂನಿಗೆ ಗೌರವ ಕೊಟ್ಟು ಕೂಡಲೇ ರಾಜನಾಮೆ ನೀಡಿ ಪಕ್ಷಪಾತ ರಹಿತ ನ್ಯಾಯ ಸಮ್ಮತ ತನಿಖೆಗೆ ಅವಕಾಶ ಮಾಡಿ ಕೊಡಬೇಕು.
ಭೂ ಯಡವಟ್ಟು ಮಾಡಿರುವವರು ಮುಖ್ಯ ಮಂತ್ರಿಯಾಗಿ ಮುಂದುವರೆ ಯುವುದರಲ್ಲಿ ಅರ್ಥವಿಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೇ ಹೋದರೆ ಮುಂಬರುವ ದಿನಗಳಲ್ಲಿ ವಿನೂತನ ತಮಟೆ ಚಳುವಳಿ ಹಮ್ಮಿಕೊ ಳ್ಳಲಾಗುವುದೆಂದು ದೇವೆಂದ್ರ ದೇಸಾಯಿ ಕಲ್ಲೂರ ತಿಳಿಸಿದ್ದಾರೆ.