ಕಲಬುರಗಿ: ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ,ಹಾಗೂ ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ಸೂಪೋಷಿತ ಕಿಶೋರಿ, ಸಶಕ್ತ ನಾರಿ 2024-2025 ನೇ ಸಾಲಿನ ರಾಷ್ಟ್ರೀಯ ಪೋಷಣಾ ಮಾಸಾಚರಣೆ ಕಾರ್ಯಕ್ರಮ ಜರುಗಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜಕುಮಾರ ರಾಠೋಡ ಸಮಾರಂಭ ಉದ್ಘಾಟಿಸಿ ಮಾತನಾಡಿ ಉತ್ತಮ ಸಮಾಜ ನಿರ್ಮಾಣ ಮತ್ತು ಸ್ವಸತ ಸಮಾಜ ನಿರ್ಮಾಣವಾಗಲು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹಳ ಮಹತ್ವದಾಗಿದೆ ಎಕೆಂದರೆ ಬೆಳೆಯುವ ಮಕ್ಕಳು ಉತ್ತಮವಾಗಿ ಬೆಳೆದರೆ ಭವಿಷ್ಯತ ಕಾಲದಲ್ಲಿ ಉತ್ತಮ ಫಲ ನೀಡುತ್ತದೆ ಆದ್ದರಿಂದ ಗರ್ಭಿಣಿ ಮಹಿಳೆಯರು ಗರ್ಭ ಧರಿಸಿದ ಸಂದರ್ಭದಲ್ಲಿ ತಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಹಾರ ಪದ್ಧತಿ ಅನುಸರಿಸಿಕೂಂಡು ಪೌಷ್ಟಿಕ ಆಹಾರ ಸೇವನೆಯಿಂದ ಮಕ್ಕಳು ಸರಿಯಾಗಿ ಜನನ ಆಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ನಿರೂಪಣಾ ಮಾತನಾಡಿ ಮುರುಗೇಶ ಗುಣಾರಿಯವರು ನಮ್ಮ ಇಲಾಖೆಯ ಸಿಬ್ಬಂದಿಯ ವರ್ಗದವರು ಪ್ರಮುಖ ಎರಡು ನಿರ್ವಹಣೆ ಮಾಡುತ್ತಾರೆ ಮೂದಲನೆಯದು 1.ತಾಯಿ ಪಾತ್ರ ಮತ್ತು2. ಶಿಕ್ಷಕಿ ಪಾತ್ರ ತಮ್ಮ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳನ್ನು ತಾಯಿಯ ಪ್ರೀತಿ ಒದಗಿಸಿ ಅವರ ಲಾಲನೆ ಪಾಲನೆ ಮಾಡುವುದು ಮತ್ತು ಶಿಸ್ತು ,ಸ್ವಚ್ಛತೆ ಇತ್ಯಾದಿ ಅಂಶಗಳು ಕಲಿಸುತ್ತಾರೆ ಆದ್ದರಿಂದ ಮಕ್ಕಳಲ್ಲಿ ಮೂರು ವರ್ಷದ ಬುದ್ದಿ ನೂರು ವರ್ಷದವರಿಗೆ ಎಂಬುದು ನಿಜವಾಗುತ್ತದೆ ಆದ್ದರಿಂದ ನಮ್ಮ ಇಲಾಖೆಯ ಸಿಬ್ಬಂದಿಗಳು ತುಂಬಾ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ವೈದ್ಯರು ಮಲ್ಲಾರಾಂವ ಮಲ್ಲೆ ಅವರು ಮಾತನಾಡಿ ಗರ್ಭಿಣಿ ಮಹಿಳೆಯರು ವಿಟಮೀನಗಳ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಯಾವ ಆಹಾರಗಳು ತರಕಾರಿ, ಹಣ್ಣು ಹಂಪಲು, ಕಾಳು ಪದಾರ್ಥಗಳು ,ಸೇವನೆ ಮಾಡಬೇಕು ಎಂಬುದರ ಬಗ್ಗೆ ಸಹ ವಿವರವಾಗಿ ಹೇಳಿದರು .
ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳಾದ ಶಿವಶರಣಪ, ಮಹಿಳಾ ಅಧಿಕಾರಗಳು, ಭೀಮರಾಯ ಕಣ್ಣೂರ, ಶಿಶು ಅಭಿವೃದ್ಧಿ ಯೋಜನೆಯಾಧಿಕಾರಿಗಳು, ಕಲಬುರಗಿ ,ವಿಠ್ಠಲ ಚಿಕಣಿ ಸಂಸ್ಕಾರ ಪ್ರತಿಷ್ಠಾನ್ ನಿರ್ದೇಶಕರು, ಮೈಲಾರಿ ದೊಡ್ಡಮನಿ, ಶಂಕರ ಕೋಡ್ಲ ಎಸ್ ಎಸ್. ವಿ .ಟಿವಿ ನಿರ್ದೇಶಕು, ಮತ್ತು ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ ಮಹಿಳೆಯರು ಹಾಜರಿದ್ದರು.