ಕಲಬುರಗಿ: ಕಾಳಗಿ ತಾಲೂಕಿನ ಬಹಳಷ್ಟು ರಸ್ತೆಗಳು ಹದಗೆಟ್ಟಿ ಹೋಗಿವೆ. ಸತತ ಮಳೆಯಿಂದಾಗಿ ರಸ್ತೆಯ ಡಾಂಬರಿಕರಣವಾಗಿರುವ ರಸ್ತೆಗಳು ಕೃಷಿ ಜಮೀನಿನ ಉಳ್ಳಾಗಡ್ಡಿ ಮಡಿಗಳಾಗಿ ಮಾರ್ಪಟಿವೆ ಎಂದು ಸ್ಥಳೀಯ ಜನರು ಜನಪ್ರತಿನಿಧಿ ಹಾಗು ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಳಗಿ ಹಳೆಯ ಬಸ್ಸ್ಟ್ಯಾಂಡ್, ಜಂಬಗಾದಿಂದ ತೆಂಗಳಿ ಕ್ರಾಸ್, ಕಂದ ಗೋಳದಿಂದ ಹೇರೂರ್, ಚಿಂಚೋಳಿ Hದಿಂದ ಹೆಬ್ಬಾಳ, ಸತಖೇಡದಿಂದ ಹೇರೂರು, ಹೊಸಳಿಯಿಂದ ಕೇಶ್ವಾರ, ಹೀಗೆ ಹತ್ತಾರು ಕಡೆ ರಸ್ತೆಗಳು ಹಾಳಾಗಿದ್ದು, ಸಾವಿರಾರು ರೈತರು ಪ್ರತಿನಿತ್ಯ ಪರದಾಡು ಸ್ಥಿತಿ ನಿರ್ಮಾಣವಾಗಿದೆ.
ಅಪಘಾತಕ್ಕೆ ತುತಾಗಿರುವ ಸಂದರ್ಭದಲ್ಲಿ ಸತ್ತ ಮೇಲೆ ಅಂಬುಲೆನ್ಸ್ ಬರುವ ಪರಿಸ್ಥಿತಿಯಾಗಿದೆ. ರಸ್ತೆ ದುರಸ್ಥಿ ಮತ್ತು ಅಭಿವೃದ್ಧಿ ಮಾಡುವ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಹೆಸರಿಗೆ ಮಾತ್ರ ಅಧಿಕಾರದಲ್ಲಿ ಇದ್ದು, ಸಾರ್ವಜನಿಕರ ಹಿತ ಕಾಪಾಡುವಲ್ಲಿ ನಿರ್ಲಕ್ಷ್ಯ ತೊರುತ್ತಿದ್ದಾರೆ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
ತಕ್ಷಣ ಶಾಸಕರು ಹಿರಿಯ ಅಧಿಕಾರಿಗಳು ಇತ ಗಮನಹರಿಸಿ ತ್ವರಿತವಾಗಿ ರಸ್ತೆ ಕಾಮಗಾರಿ ಪ್ರಾರಂಭಿಸಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ತಾಲೂಕನಲ್ಲಿ ರಸ್ತೆಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ. -ವೀರಣ್ಣ ಗಂಗಾಣಿ ರಟಕಲ್, ಅಧ್ಯಕ್ಷ ರೈತ ಸಂಘ, ತಾಲೂಕ ರೈತ ಸೇನೆ ಕಾಳಗಿ