ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ ಕಾರ್ಯಕ್ಕೆ ಸಂತಸ ತಂದಿದೆ, “ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿ ಇದ್ದಿದ್ದೆನೆ ಪಕ್ಷದಲ್ಲಿ ಅಧ್ಯಕ್ಷ ಸ್ಥಾನ ಸಿಗುವ ಸಂಪೂರ್ಣ ನಂಬಿಕೆ ವಿಶ್ವಾಸ ಇದೆ ಎಂದು ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ ರವಿರಾಜ ಕೋರವಿ ರವರು ಹೇಳಿದರು.
ಕಾಳಗಿ ತಾಲ್ಲೂಕಿನ ಕೋರವಿ ಗ್ರಾಮದ ಅತಿಥಿ ನಿಲಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಕಷ್ಟಕಾಲದಲ್ಲಿ ಚಿಂಚೋಳಿ ತಾಲ್ಲೂಕಿನಾದ್ಯಂತ ಏಕಾಂಗಿಯಾಗಿ ಸಂಚರಿಸಿ ಜಾತತೀತವಾಗಿ ಬಿಜೆಪಿ ಪಕ್ಷ ಬಲಿಷ್ಠವಾಗಲು ಶ್ರಮಿಸಿದ್ದೆನೆ’ ಎಂದರು.
ವಿಧಾನಸಭಾ ಚುನಾವಣೆ ವೇಳೆಯಲ್ಲಿ, ಸಂಸದರ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಕಲಬುರಗಿ ಚಿಂಚೋಳಿ ತಾಲ್ಲೂಕಿನಾದ್ಯಂತ ನಿಶ್ವರ್ಥ ಸೇವೆ ಸಲ್ಲಿಸಿದ್ದು ಕಾರಣ ನನಗೆ ರಾಜಕೀಯ ಭವಿಷ್ಯ ನೀಡಿದ್ದು ಬಿಜೆಪಿ ಪಕ್ಷ ಕಾರಣ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನನಗೆ ಬಿಜೆಪಿ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಸಿಗಲಿಲ್ಲ ” ಯಾವುದೇ ಹುದ್ದೆಗೆ ಆಸೆಪಟ್ಟವನಲ್ಲ” ಆಗಂತ ನಾವೇನು ಪಕ್ಷದ ವಿರುದ್ದ ಹೋಗಿಲ್ಲ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವೊಂದೇ ನಮಗೆ ಮಾನದಂಡ. ಎಂದು ಒಬ್ಬ ಜ್ಯಾತ್ಯಾತೀತ ನಾಯಕನಾಗಿ ಎಲ್ಲಾ ಸಮಾಜದ ನಾಯಕರಿಗೆ ಪಕ್ಷದ ಬಲವರ್ಧನೆ ಬುನಾದಿ ಹಾಕಿದ್ದೆನೆ, ಪಂಚ ಗ್ಯಾಂರಟಿ ನೀಡುತ್ತವೆ ಎಂದು ಕಾಂಗ್ರೆಸ್ ಪಕ್ಷದ ಜನವರಿಗೆ ಮೋಸ ಮಾಡುತ್ತಿರುವುದು ಜನಗೆ ತಿಳಿದಿದೆ. ಮುಂಬರುವ ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ, ಪಟ್ಟಣ ಪಂಚಾಯತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದರು.
ಮೋದಿಜಿ ರವರ ಹಿತದೃಷ್ಟಿಯಲ್ಲಿ ಯುವಕರಿಗೆ ಮಣೆಹಾಕುವುದು ಧ್ಯೆಯವಾಗಿದೆ ನಾನೋಬ್ಬ ಯುವಕ ಜ್ಯಾತ್ಯಾತೀತ ನಾಯಕನೇಂದು ಕಲಬುರಗಿ ತಾಲೂಕಿನ ಮತದಾರರು ಹೇಳಿರುವದು ಹೇಳುವ ಪ್ರಸಂಗ ಇದಾಗಿದೆ ಚಂದು ಪಾಟೀಲ ರವರ ನೇತೃತ್ವದಲ್ಲಿ ರವಿರಾಜ ಕೋರವಿ ರವರಿಗೆ ಉತ್ತಮ ಸ್ಥಾನ ಸಿಗುತ್ತದೆ, ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದರೆ ಒಬಿಸಿ ನಾಯಕನಲ್ಲದೆ ಜ್ಯಾತ್ಯಾತೀತ ನಾಯಕನಿಗೆ ಸ್ಥಾನ ನೀಡಿದಂತೆ ಎಂದು ಹೇಳಿದರು.