ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಬಸವರಾಜ ಮುಗುಳಖೋಡ ಹೇಳಿದರು.
ಪ್ರಜ್ಞಾ ನವೋದಯ ಕೋಚಿಂಗ್ ಕೇಂದ್ರ ಹಾಗೂ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ ಬಹಾದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ನೀಡಿದ ಮಹಾನ ವ್ಯಕ್ತಿಗಳಾದ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆ ಮಂತ್ರದಿಂದ ದೇಶದ ಜನರಿಗೆ ಸ್ವಾತಂತ್ರ ನೀಡುವುದರಲ್ಲಿ ಮಹಾತ್ಮ ಎನಿಸಿಕೊಂಡರು .ಅದೇ ರೀತಿ ಶಾಸ್ತ್ರೀಜಿರವರು ಸರ್ಕಾರದ ಕೆಲಸ ದೇವರ ಕೆಲಸ ಎಂದು ನಂಬಿದರು .ಅಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಇಂದಿನ ಯುವಕರು ನಾಳಿನ ದೇಶ ಕಟ್ಟುವ ಒಳ್ಳೆಯ ವಿದ್ಯಾರ್ಥಿಗಳಾಗಬೇಕೆಂದು ಹೇಳಿದರು.
ಇಂದು ವಿಶ್ವದಲ್ಲಿ ಯುದ್ದದ ಛಾಯೆ ಮುಡಿದೆ ರಸಿಯಾ ಯುಕ್ರೆನ್ , ಇಸ್ರೇಲ್ ಮತ್ತು ಪ್ಯಾಲೆಸ್ತಿನ್ ಹಾಗೂ ಇತರ ದೇಶಗಳು ಯುದ್ದವನ್ನು ಸಾರಿವೆ. ಈ ಸಂದರ್ಭದಲ್ಲಿ ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆ ಮಾರ್ಗವು ಇಡಿ ವಿಶ್ವಕ್ಕೆ ಭೋಧಿಸಿ ಶಾಂತಿ ಸ್ಥಾಪಿಸಬಹುದು.ಅಲ್ಲದೇ ಮಾಜಿ ಪ್ರಧಾನಿ ಲಾಲ ಬಹಾದ್ದೂರ್ ಶಾಸ್ತ್ರೀಜಿ ಅವರ
ಅಧಿಕಾರದ ಕಾಲದಲ್ಲಿ ಮಾಡಿರುವ ಸಾಧ್ಯನೆಗಳನ್ನು ಕೊಂಡಾಡಿದರು.
ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ಮಾತನಾಡಿ, ಇಂದು ನಾವು ಸ್ವಾತಂತ್ರ ಸುಖಿ ಜೀವನ ಅನುಭವಿಸಲು ಮಹಾತ್ಮ ಗಾಂಧೀಜಿಯವರ ತ್ಯಾಗ ಬಲಿದಾನ ಕಾರಣ. ಅಹಿಂಸೆಯ ಸಂದೇಶ ಇಂದು ಸಮಾಜಕ್ಕೆ ಅತ್ಯಂತ ಜರೂರಿ ಇದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಪ್ರಜ್ಞಾ ನವೋದಯ ಕೋಚಿಂಗ್ ಕೇಂದ್ರ ಹಾಗೂ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಮಾತೆ ಸುರೇಖಾ ಮೇತ್ರಿ ಹಾಗೂ ಪಿ.ಎಸ್.ಮೇತ್ರಿ ಇದ್ದರು.