ಕಲಬುರಗಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ 16ನೇ ಸಂಸ್ಥಾಪನಾ ದಿನಾಚರಣೆಯನ್ನು 22ನೇ ನವೆಂಬರ್ 2024 ರಂದು ರಾಯಚೂರು ಮುಖ್ಯ ಆವರಣದಲ್ಲಿ ಆಯೋಜಿಸಲಾಗುವುದು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅತ್ಯುತ್ತಮ ಸಾಧನೆಗೈದ ಪ್ರಗತಿಪರ ಕೃಷಿಕರಿಗೆ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಈ ಹಿನ್ನೆಲೆಯಲ್ಲಿ 2023-24ನೇ ಸಾಲಿಗೆ ಕಲ್ಯಾಣ ಕರ್ನಾಟಕ ಭಾಗದ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರ ಪ್ರಯುಕ್ತ ಅರ್ಜಿ ನಮೂನೆಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ವೆಬ್ ಸೈಟ್ https://uasraichur.karnataka.gov.in ನಲ್ಲಿ ಲಭ್ಯವಿರುತ್ತದೆ.
ಮುಂದುವರೆದು, ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿ ವ್ಯಾಪ್ತಿಯ ತಾಲೂಕುಗಳಾದ ಜೇವರ್ಗಿ, ಸೇಡಂ, ಚಿತ್ತಾಪುರ, ಕಾಳಗಿ, ಯಡ್ರಾಮಿ ಮತ್ತು ಶಹಾಬಾದ ಭಾಗದ ರೈತರು ಭರ್ತಿ ಮಾಡಿದ ಅರ್ಜಿಯನ್ನು ಕೃಷಿ ವಿಜ್ಞಾನ ಕೇಂದ್ರÀ, ರದ್ದೇವಾಡ್ಗಿ ಮುಖ್ಯಸ್ಥರಿಗೆ ಸಲ್ಲಿsಸಬೇಕು ಅರ್ಜಿ ಸಲ್ಲಿಸಲು ಕೊನೆಯ 31 ಸಂಜೆ 5.00 ಘಂಟೆ) ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿ & ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿ ಇವರನ್ನು ಸಂಪರ್ಕಿಸಲು ಕೋರಲಾಗಿದೆ. ದೂರವಾಣಿ ಸಂಖ್ಯೆಗಳು : 9480696348 ಮೇಲೆ ತಿಳಿಸಿದ ಮಾಹಿತಿಯನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಬೇಕಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.