ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಜೀವನ ಕಲೆ

0
16

ಸುರುಪುರು : ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ ಕಾರ್ಯಕ್ರಮದ ಅಡಿಯಲ್ಲಿ ಜೀವನ ಕಲೆಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಆರ್ಟ್ ಆಫ್ ಲಿವಿಂಗ್‍ನ ಉಜ್ವಲಶಂಕರ್,ಮಾತನಾಡಿ ಧ್ಯಾನದಿಂದ ಸಿಗುವ ವಿಶ್ರಾಂತಿ, ಆಳವಾದ ನಿದ್ರೆಯಿಂದಸಿಗುವ ವಿಶ್ರಾಂತಿ ಮೀರಿದೆ. ಮನಸ್ಸು ತಳಮಳ ಮುಕ್ತವಾಗಿ, ಪ್ರಶಾಂತ ಹಾಗು ಸಮಾಧಾನವಾಗಿರುತ್ತದೆ, ಮನಸ್ಸಿನ ಈ ಸ್ಥಿತಿಯಲ್ಲಿ ಧ್ಯಾನವಾಗುತ್ತದೆ . ಧ್ಯಾನದಿಂದ ಪ್ರಯೋಜನ ಹಲವಾರು. ಮನಸ್ಸಿನ ಶುಭ್ರತೆ ಹಾಗು ಸ್ವಾಸ್ಥ್ಯಕ್ಕಾಗಿ , ಇದು ಅತ್ಯಗತ್ಯ. ನಿತ್ಯ ನಿಯಮಿತವಾಗಿ ಧ್ಯಾನ ಮಾಡುವದರಿಂದ ಸ್ವಭಾವಿಕವಾಗಿ ಬರುವ ಲಾಭಗಳೆಂದರೆ ಶಾಂತಿಯುತವಾದ ಮನಸ್ಸು, ಒಳ್ಳೆಯ ಕೇಂದ್ರಿಕರಿಸುವ ಶಕ್ತಿ, ಒಳ್ಳೆ ಗ್ರಹಿಕೆಯ ಶಕ್ತಿ, ಪರಿಣಾಮಕಾರಿಯಾದ ವ್ಯಕ್ತಪಡಿಸುವಿಕೆ, ಕೌಶಲ್ಯ ಹಾಗು ಪ್ರತಿಭೆಗಳ ವಿಕಸನ ಎಂದು ಹೇಳಿದರು.

Contact Your\'s Advertisement; 9902492681

ಧ್ಯಾನವು ಒತ್ತ , ಭಯ, ಆತಂಕ, ಖಿನ್ನತೆ ಮತ್ತು ನೋವನ್ನು ಗಮನಾರ್ಹವಾಗಿ ಕಡಿಮೆಮಾಡುತ್ತದೆ, ಮತ್ತು ಶಾಂತಿ, ಗ್ರಹಿಕೆ, ಸ್ವ-ಪರಿಕಲ್ಪನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಆರೋಗ್ಯವನ್ನು ಸುಧಾರಿಸುತ್ತದೆ, ಮಾನಸಿಕ ಶಕ್ತಿಯನ್ನು ನೀಡುತ್ತದೆ, ದೈಹಿಕ ಶಕ್ತಿಯನ್ನು ಸುಧಾರಿಸುತ್ತದೆ, ಗಾಯದಿಂದರಕ್ಷಣೆ, ದೇಹವನ್ನು ನಿರ್ವಿಷಗೊಳಿಸುತ್ತದೆ ಎಂದು ಹೇಳಿದರು.

ಇನ್ನೊರ್ವ ಅತಿಥಿಗಳಾದ ಆರ್ಟ್ ಆಫ್ ಲಿವಿಂಗ್‍ನ ಜಿಲ್ಲಾ ಸಂಯೋಜಕಿ ಶಿಲ್ಪಾಅವಂಟಿ, ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿಯವರು ಅತಿಥಿಗಳನ್ನು ಸ್ವಾಗತಿಸಿ ಸನ್ಮಾನಿಸಿದರು.

ಬಿ.ಇ ಪ್ರಥಮ ವರ್ಷದ ಸಂಚಾಲಕರಾದ ಪ್ರೊ ಸಿದ್ದಣ್ಣಗೌಡ ಪಾಟೀಲ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ, ಪ್ರೊ. ಶರಣಗೌಡಪಾಟೀಲ ಶೈಕ್ಷಣಿಕ ವಿಭಾಗ, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪ್ರೊ .ಗಂಗಾಧರ ಹೂಗಾರ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here