ವಿವಿಧ ಸ್ಪರ್ಧೆಗಳಲ್ಲಿ ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0
13

ಸುರಪುರ: ನಗರದ ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಉತ್ತಮ ಸಾಧನೆಗೈದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

ವಿದ್ಯಾರ್ಥಿಗಳಾದ ರಾಹುಲ್ ಮಾಳಪ್ಪ 80ಕೆಜಿ ಜುಡೋದಲ್ಲಿ ಪ್ರಥಮ,ನಿತಿನಕುಮಾರ ಸುರೇಶ 55ಕೆಜಿ ಜುಡೋದಲ್ಲಿ ಪ್ರಥಮ,100ಮೀಟರ ಓಟದಲ್ಲಿ ವೆಂಕಟೇಶ ದ್ವಿತೀಯ ಸ್ಥಾನ,ಅಭಿಷೇಕ ಭೀಮಣ್ಣ 75ಕೆಜಿ ಕುಸ್ತಿಯಲ್ಲಿ ಪ್ರಥಮ,ನಿತಿನಕುಮಾರ 57ಕೆಜಿ ಕುಸ್ತಿಯಲ್ಲಿ ಪ್ರಥಮ,ಶರಣು ಸುರೇಶ 57ಕೆಜಿ ಕರಾಟೆಯಲ್ಲಿ ಪ್ರಥಮ ಹಾಗೂ ಭಾಗೇಶ ಸಂಗಣ್ಣ ತ್ರಿಬಲ್ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

Contact Your\'s Advertisement; 9902492681

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬೂದೆಪ್ಪ ಶೆಟ್ಟಿ,ಕಾರ್ಯದರ್ಶಿ ತಿರುಪತಿ ಶೆಟಿ,ಪ್ರಾಂಶುಪಾಲೆ ಲಕ್ಷ್ಮೀ ಬಿ.ಶೆಟ್ಟಿ ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here