ಕಲಬುರಗಿ: ಸಾಯಿ ರಾಮ್ ನಗರದಲ್ಲಿರುವ ವಿ ಎಲ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಮಾಜಿ ಉಪಮೇಯರ್ ಮಹೇಶ್ ಹೋಸೂರಕರ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ದಾಂಡಿಯಾ ನೈಟ್ ಕಾರ್ಯಕ್ರಮವನ್ನು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಣ್ಣಾ ಹೋಸೂರಕರ್, ಸ್ವೇತಾ, ರಕ್ಷಿತಾ, ರವಿ ಪೂಜಾರಿ, ನಾಗಾರೆಡ್ಡಿ, ಕಾರ್ತಿಕ್, ವೈಭವ್ ಸೇರಿದಂತೆ ಬಡಾವಣೆಯ ಮಹಿಳೆಯರು ಯುವಕರು, ಯುವತಿಯರು ಇದ್ದರು.