ಸೇಡಂ; ಸೇಡಂ ನೆಲ ಎಂಬುದು ಸಾಹಿತ್ಯಿಕ ಮತ್ತು ಸಾಂಸ್ಕøತಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಂಜುನಾಥ ಎಸ್.ಜಿ. ಅವರು ಹೇಳಿದರು.
ಪಟ್ಟಣದ ದೊಡ್ಡ ಅಗಸಿಯ ಬಳಿ ಶಿವಸೇನಾ ದಸರಾ ಉತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ 30 ನೇ ವರ್ಷದ ದಸರಾ ಉತ್ಸವ ಹಾಗೂ ಲಕ್ಷ ದೀಪೋತ್ಸವ ನಿಮಿತ್ತ ಮಂಗಳವಾರ ಸಂಜೆ 7.30 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಕರ್ನಾಟಕ ಆ ಭಾಗದಿಂದ ಬಂದವನಾದ್ದರಿಂದ ಈ ಭಾಗಕ್ಕೆ ಬರುವಾಗ ದೂರದ ಪ್ರದೇಶ ಎಂಬ ಭಾವನೆಯಿತ್ತು. ಆದರೆ ಇಲ್ಲಿ ಬಂದ ಮೇಲೆ ಇಲ್ಲಿನ ಜನರ ಹೃದಯಶ್ರೀಮಂತಿಕೆಗೆ ಮಾರುಹೋದೆ. ಈಗ ನಾಲ್ಕು ವರ್ಷದ ನಂತರ ನಮ್ಮ ಭಾಗಕ್ಕೆ ಹೋಗೋಕೆ ಮನಸಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಮಾತ ನಾಡಿ, ಶಿವಸೇನಾ ಸಮಿತಿ ವತಿಯಿಂದ ಪ್ರತಿ ವರ್ಷ ಪ್ರತಿಷ್ಠಾಪನೆ ಮಾಡುವ ಜಗದಂಬಾ ಮೂರ್ತಿ ಮತ್ತು ದಸರಾ ಹಬ್ಬದ ವಿಜೃಂಭಣೆಗೆ ಈ ವರ್ಷ 30 ನೇ ವರ್ಷದ ಸಂಭ್ರಮ. ಸಂಘಟನೆಯಲ್ಲಿ ಶಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟಿದ್ದು ಶಿವಸೇನಾ ಸಮಿತಿಯವರು ಎಂದು ಹೇಳಿ, ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುವಂತಹ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು, ರಸಪ್ರಶ್ನೆ ಕೇಳಿ, ಥಟ್ ಅಂತ ಉತ್ತರ ಹೇಳಿದ ಎಂಟನೇ ತರಗತಿ ಓದುತ್ತಿರುವ ಅನನ್ಯ ಳಿಗೆ ಸತ್ಕರಿಸಿದರು.
ಜೈ ಭಾರತ ಮಾತಾ ಸೇವಾ ಸಮಿತಿ ತಾಲೂಕು ಅಧ್ಯಕ್ಷ ರಾಜಶೇಖರ ರೆಡ್ಡಿ ಹೈಯ್ಯಾಳ, ಪುರಸಭೆಯ ನಾಮನಿರ್ದೇಶಿತ ಮಾಜಿ ಸದಸ್ಯ ರಾಘವೇಂದ್ರ ಮೆಕ್ಯಾನಿಕ್ ಮುಖ್ಯ ಅತಿಥಿಗಳಾಗಿದ್ದರು. ಶಿವಸೇನಾ ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ರಾಜೇಂದ್ರ ಬಾಗೋಡಿ ಅಧ್ಯಕ್ಷತೆ ವಹಿಸಿದ್ದರು. ಮಾತೃಛಾಯ ಪಿಯು ಕಾಲೇಜಿನ ಉಪನ್ಯಾಸಕ ರಾಜಕುಮಾರ ಚನ್ನೀರ ಕಾರ್ಯಕ್ರಮ ನಿರೂಪಿಸಿದರು.
ಪುರಸಭೆ ಸದಸ್ಯರ ಸಂತೋಷ ತಳವಾರ ಸರ್ವರನ್ನೂ ಸ್ವಾಗತಿಸಿದರು. ಲಕ್ಷ್ಮಣ ಭೋವಿ ವಂದಿಸಿದರು. ಶಿವಸೇನಾ ದಸರಾ ಉತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಜೀವಣಗಿ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಭೋವಿ, ಅಭಿಷೇಕ ಬಾಗೋಡಿ, ರಾಜು ಎಸ್. ದೀಪಕ ಬಾಗೋಡಿ, ಭೀಮಾಶಂಕರ ಕೊಳ್ಳಿ, ಸಾಬಣ್ಣ ತೊಟ್ನಳ್ಳಿ, ಶಂಕರ ಟಗರೆ, ಜಗನ್ನಾಥ ಟಗರೆ, ಜಗನ್ನಾಥ ಗುಡ್ಡದ ಇತರರಿದ್ದರು.