ಸುರಪುರ: ನಗರದ ತಿಮ್ಮಾಪೂರ ಬಸ್ ನಿಲ್ದಾಣದ ಮುಂದುಗಡೆ ಇರುವ ಜಾಗವನ್ನು ಕೆಲ ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಬಳಸುವದಕ್ಕೆ ಅನುಕೂಲ ಮಾಡಿಕೊಡಲು ಆಗ್ರಹಿಸಿ ಮತ್ತು ರಂಗಂಪೇಟ ದೊಡ್ಡ ಬಜಾರ್ ನಲ್ಲಿ ಕನ್ನಡ ಧ್ವಜ ಸ್ತಂಭವನ್ನು ಹಾಕಲು ಅನುಮತಿ ನೀಡುವ ಕುರಿತು ಹಾಗೂ ನಗರದಾದ್ಯಾಂತ ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಇರುವ ಅನ್ಯಭಾಷೆಗಳ ನಾಮಫಲಕ ತೆರವುಗೊಳಿಸಲು ಆಗ್ರಹಿಸಿ ನಗರಸಭೆ ಪೌರಾಯುಕ್ತರಾದ ಜೀವನ್ ಕುಮಾರ ಕಟ್ಟಿಮನಿ ರವರಿಗೆ ಕರವೇ ಸುರಪುರ ತಾಲೂಕ ಘಟಕದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ತಾಲೂಕಾಧ್ಯಕ್ಷ ಶ್ರೀ ವೆಂಕಟೇಶ ನಾಯಕ ಭೖರಿಮರಡಿ, ತಾಲೂಕ ಪದಾಧಿಕಾರಿಗಳಾದ ಹಣಮಂತ ಹಾಲಗೇರಿ,ಮಲ್ಲು ವಿಷ್ಣು ಸೇನೆ, ಕಾರ್ಮಿಕ ಘಟಕದ ಅಯ್ಯಪ್ಪ ವಗ್ಗಾಲಿ, ನಗರ ಘಟಕದ ನಿಂಗಪ್ಪ ಮಾಲಗತ್ತಿ, ವಿವಿಧ ಗ್ರಾಮಶಾಖೆಯ ಪದಾಧಿಕಾರಿಗಳಾದ ಮೌನೇಶ ಶಖಾಪೂರ, ಬಲಭೀಮ ಬೊಮ್ನಳ್ಳಿ, ಶೇಖರ ಚೌಡೇಶ್ವರಿಹಾಳ, ಅಶೋಕ ನಾಯಕ, ಮೌನೇಶ ಬಡಿಗೇರ, ಬಲಭೀಮ ಬಾದ್ಯಾಪೂರ, ಮಹಾರಾಜ ಹೆಮ್ಮಡಿಗಿ, ರಾಯಪ್ಪ ಅಮ್ಮಾಪೂರ, ಅರ್ಜುನ ಯಕ್ಷಿಂತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.