ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ರಾಜು ಕಟ್ಟಿಮನಿ ಮನವಿ

0
18

ಕಲಬುರಗಿ: ಮಾದಿಗ ಸಮುದಾಯದ ಹಿರಿಯ ನಾಯಕರಾದ ಕೆ.ಹೆಚ್.ಮುನಿಯಪ್ಪ ಅವರಿಗೆ ರಾಜ್ಯದ ಮುಖ್ಯಮಂತ್ರಿ ಮಾಡಬೇಕೆಂದು ಜಿಲ್ಲಾ ಮಾಧಿಗ ಸಮಾಜದ ಯುವ ಹೋರಾಟಗಾರ ರಾಜು ಎಸ್.ಕಟ್ಟಿಮನಿ ಅವರು ರಾಜ್ಯದ ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ಮತ್ತು ಸಚಿವರು ಹಾಗೂ ಶಾಸಕರಲ್ಲಿ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಸ್ಥಾನ ಬದಲಾವಣೆಯಾದರೆ ಮಾದಿಗ ಸಮುದಾಯದ ಹಿರಿಯ ನಾಯಕರು ಮತ್ತು ಸತತ 7 ಸಲ ಸಂಸದರಾದ ಹಾಗೂ ಪ್ರಸ್ತುತ ರಾಜ್ಯದ ಹಾಲಿ ಸಚಿವರಿದ್ದು ಸುಮಾರು 50 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಸಕ್ರೀಯರಾಗಿದ್ದು, ಕಾಂಗ್ರೇಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಟಮಾಡಲು ಇವರ ಶ್ರಮ ಬಹಳಷ್ಟು ಇರುತ್ತದೆ. ಮುಂದೆ ರಾಜ್ಯದಲ್ಲಿ “ದಲಿತ ಮುಖ್ಯಂತ್ರಿ ಮಾಡಬೇಕೆಂದು” ಕೂಗೂ ಇದೆ. ಇಲ್ಲಿ ಒಂದು ವೇಳೆ ದಲಿತ ಮುಖ್ಯಮಂತ್ರಿ ಮಾಡಬೇಕೆಂದು ಸಂದರ್ಭ ಬಂದರೆ “ಮಾದಿಗ ಸಮುದಾಯದ ಹಿರಿಯ ನಾಯಕರಾದ ಕೆ.ಹೆಚ್.ಮುನಿಯಪ್ಪಾರವರನ್ನು ರಾಜ್ಯದ ಮುಖ್ಯಮಂತ್ರಿಗಳಾಗಿ ಎಲ್ಲಾ ಕಾಂಗ್ರೆಸ ಪಕ್ಷದ ಕೇಂದ್ರದ ವರಿಷ್ಠರು ಮತ್ತುಉ ರಾಜ್ಯದ ವರಿಷ್ಠರು ಹಾಗೂ ಸಚಿವರು ಉ, ಶಾಸಕರು ಸರ್ವಾನುಮತಿಂದ ಆಯ್ಕೆ ಮಾಡಬೇಕಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇರ್ಶವರ ರವರು 2013ರ ವಿಧಾನ ಸಭೆ ಚುನಾವಣೆಯಲ್ಲಿ ಸೋತರು ಕೂಡ ಅವರನ್ನು ಕಾಂಗ್ರೆಸ ಪಕ್ಷದ ರಾಜ್ಯಧ್ಯಕ್ಷರಾಗಿ ಮತ್ತು 2018ರಿಂದ 2020ರ ಅವಧಿಯವರೆಗೆ ಉಪ ಮುಖ್ಯಮಂತ್ರಿಯಾಗಿ ಮಾಡಿರುತ್ತಿರಿ. ಆದರೆ ರಾಜ್ಯದಲ್ಲಿ ದಲಿತರಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಮಾದಿಗ ಸಮುದಾಯದವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಮಾನ ಕೊಟ್ಟಿರುವುದಿಲ್ಲ. ಕಾಂಗ್ರೆಸ ಪಕ್ಷ ಮಾದಿಗ ಸಮಾಜಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದೆ. ಆದ್ದರಿಂದ ತಾವುಗಳು ಮಾದಿಗ ಸಮುದಾಯದ ಸಂಘಟನೇ ಚತುರ ರಾಜಕೀಯ ಚಾಣಕ್ಯ ಮತ್ತು ಕರ್ನಾಟಕ ರಾಜ್ಯದ ಸಚಿವರಾದ ಕೆ.ಹೆಚ್.ಮುನಿಯಪ್ಪಾರವರನ್ನು “ರಾಜ್ಯದ ಮುಖ್ಯಮಂತ್ರಿ” ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ರಾಜು ಎಸ್. ಕಟ್ಟಿಮನಿ ಯವರು ಕಾಂಗ್ರೇಸ ಪಕ್ಷದ ಪ್ರಮುಖರಾದ ಸೋನಿಯಾ ಗಾಂಧಿಜಿ ಮತ್ತು ರಾಹುಲ ಗಾಂಧಿಜಿ ಮತ್ತು ರಾಜ್ಯದ ಕಾಂಗ್ರೆಸ ಪಕ್ಷದ ವರಿಷ್ಠರಲ್ಲಿ ಮತ್ತು ಸಚಿವರು ಹಾಗೂ ಶಾಸಕರಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here