ಕಲಬುರಗಿ: ಹಳೆ ಬ್ರಹ್ಮ ಪೂರ್ ಬಡಾವಣೆಯಲ್ಲಿರುವ ಒಳ ರಸ್ತೆಗೆ ಬಸವನ ಬೀದಿ ಎಂಬ ಹೊಸ ನಾಮಫಲಕ ಉದ್ಘಾಟನಾ ಕಾರ್ಯಕ್ರಮ ಜರುಗಿತು,ದಿವ್ಯಾ ಸಾನಿಧ್ಯ ವಹಿಸಿದ ಚೌದಾಪುರಿ ಮಠದ ಷ. ಬ್ರ. ಡಾ. ರಾಜಶೇಖರ ಶಿವಾಚಾರ್ಯರು ಪೂಜೆ ಸಲ್ಲಿಸಿದರು,
ಈ ಬೀದಿ ಹೆಸರು ಮರು ನಾಮಕರಣಕ್ಕೆ ಉದ್ಘಾತಿಸಲು ಆಗಮಿಸಿದ ಧಕ್ಷಿಣ ಮತ ಕ್ಷೇತ್ರದ ಶಾಸಕರಾದ ಶ್ರೀ ಅಲ್ಲಮ ಪ್ರಭು ಪಾಟೀಲ ನೆಲೋಗಿ ಯವರು ಉದ್ಘಾಟಿಸಿ, ಮಾತನಾಡುತ್ತ 40 ವರ್ಷಗಳ ಹಿಂದೆ ನಮ್ಮ ತಂದೆ ತಾಯಿ ಇದೆ ಬೀದಿ ಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು ಎಂದು ತಿಳಿಸಿ, ನಿಮ್ಮೆಲ್ಲರ ಆಶೀರ್ವಾದ ದಿಂದ ಆಯ್ಕೆ ಗೊಂಡು ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಈ ಭಾಗ್ಯ ದೊರೆತಿದೆ, ಸದಾ ಈ ಹಳೆ ಬಡಾವಣೆ ಯಾವುದೇ ಸಮಸ್ಯೆ ಇದ್ದರು ಮೊದಲ ಆದ್ಯತೆ ಮೇರೆಗೆ ಮಾಡುತ್ತೆನೆ ಎಂದು ತಿಳಿಸಿದರು.
ಇಂದು ದಸರಾ ನಿಮಗೆಲ್ಲರಿಗೂ ಶುಭಾಶಯಗಳು ಎಂದು ಕೋರಿದರು, ಅಜಾದ್ ಚಂದ್ರಶೇಖರ್ ವೃತ್ತ ದಿಂದ ಪ್ರಾರಂಭವಾಗಿ, ಹಳೆ ನಂಬರ್ 2 ಶಾಲೆ ಮುಂದಿನ ಪೂರ್ವಕ್ಕೆ ಮುಖ ಮಾಡಿ, ದಿ. ಮಹಾಂತ ಗೌಡ ಪಾಟೀಲ ಮನೆ ಮುಂದೆ ಸಾಗಿ ಮತ್ತೆ ಎಡ ಮತ್ತು ಬಲ ಭಾಗದಲ್ಲಿ ತಿರುಗಿ ದೇಶಮುಖ ವಾಡ ದವರೆಗೆ ಹಾಗೆ ಒಳ ರಸ್ತೆ ಯಿಂದ ಪ್ರಾರಂಭವಾಗಿ ಅದು ಚೌದಾಪುರಿ ಮಠದ ವರೆಗೆ ಸಾಗಿ ಹೊಸ ರಾಯರ ಮಠದ ವರೆಗೆ ಇರುತದೆ ಎಂದು ಬಡಾವಣೆಯ ಮುಖಂಡರಾದ ಸಂಗಪ್ಪಾ ಹತ್ತಿ ಯವರು ಪತ್ರಕರ್ತ ರಿಗೆ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಸವನ ಬೀದಿಯ ನಿವಾಸಿಗಳಾದ, KYF ಸಂಘಟನೆಯ ಅಧ್ಯಕ್ಷ ಅನಂತ ಗುಡಿ, ಹಿರಿಯರಾದ ಎಸ್.ಎ. ಪಾಟೀಲ್, ಸಿದ್ರಾಮಪ್ಪ ಸಾಹು ಜೇವರ್ಗಿ, ನ್ಯಾಯವಾದಿ ವಿನೋದ ಕುಮಾರ, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತ ಅಧಿಕಾರಿಗಳಾದ ರಾಜೇಶ್ ವರ್ಮ, ಶ್ರೀಮತಿ ಪಾರ್ವತಿಗೌಡತಿ. ಜಿ. ನೆಲೋಗಿ, ಶರಣಪ್ಪ ಅರಳಗೊಂಡಗಿ, ಪ್ರಸಾದ ಗುಡಿ, ಮಲ್ಯಯ ಹಿರೇಮಠ, ಬಾಬು ಪಡಶೆಟ್ಟಿ, ಶಿವು ದಟ್ಟಿ, ಮಲ್ಲು ಟೈಲರ, ತಿಪ್ಪಣ್ಣ ಬಾಲಿಕಾಯಿ, ಶೇರಿಕಾರ ಶಿವು, ಶಾಂತಮಲಪ್ಪ ವಡಳ್ಳಿ, ಬಸವರಾಜ ಘಟಾಟೆ, ಆನಂದ ಪಾಟೀಲ, ವೀರೇಂದ್ರ ಘಟಾಟೆ, ಸಂತೋಷ ಪಾಟೀಲ್, ವಿಜಯ ಪುರಾಣಿಕ, ಶಿವಮೂರ್ತಿ ಮಳ್ಳಿ, ಬಬಲಾದ ಶಿವಕುಮಾರ, ಉಪಸ್ಥಿತರಿದ್ದು, ಬೀದಿ ಫಲಕ ನಾಮಕರಣ ಕಾರ್ಯಕ್ರಮ ಯೇಶಸ್ವಿ ಗೊಳಿಸಿದರು.