ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ವಿಶಿಷ್ಟವಾದ ಕಾಲಘಟ್ಟ.
ಜಡ್ಡು ಹಿಡಿದಿದ್ದ ಸಮಾಜಕ್ಕೆ ವೈಚಾರಿಕತೆಯ ಸ್ಪರ್ಶ ನೀಡುವ ಮೂಲಕ ಒಂದು ಹೊಸ ಸಮಾಜದ ಸೃಷ್ಟಿಯ ಕನಸನ್ನು ಕಂಡಂತಹ ಬಸವಾದಿ ಶರಣರು ಬಸವಣ್ಣನವರ ನೇತೃತ್ವದಲ್ಲಿ ನಡೆಸಿದಂತಹ ಕ್ರಾಂತಿ ಅಪೂರ್ವವಾದದ್ದು.
ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಬಹುದೊಡ್ಡ ಸಮಾಜ ಸುಧಾರಣೆಯ ಚಳುವಳಿಯಾಗಿ ರೂಪಗೊಂಡು, ಜನಸಾಮಾನ್ಯರ ಬದುಕಿನ ಎಲ್ಲಾ ಸ್ಥರಗಳು ಆ ಚಳುವಳಿಯ ಒಂದು ಭಾಗವಾಗಿದ್ದು ಒಂದು ದೊಡ್ಡ ಸಮಸಮಾಜ ನಿರ್ಮಾಣವೇ ಸರಿ.
ಜ್ಯಾತ್ಯತೀತ ಸಮಾಜ ಕಲ್ಪನೆ ಬಸವಣ್ಣನವರ ಕಣ್ಣಿಗೆ ಮೊದಲ ಬಿದ್ದಿದ್ದು, ಅಂದಿನ ಸಮಾಜದಲ್ಲಿನ ಜಾತಿಯ ವಿಷಮತೆ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ದಲಿತರ ಮೇಲೆ ನಡೆಯುತ್ತಿದ್ದ ಕ್ರೌರ್ಯ ಬಸವಣ್ಣನವರ ಮನಸ್ಸು ತುಂಬಾ ಘಾಸಿಗೊಂಡಿತ್ತು.
ಇದರಿಂದ ಬಸವಾದಿ ಶರಣರು ಇಡೀ ಜಾತಿ ವ್ಯವಸ್ಥೆಯ ವಿರುದ್ಧ ಎದ್ದು ನಿಂತರು.”ಕೊಲ್ಲುವವನೇ ಮಾದಿಗ ಹೊಲಸ ತಿಂಬವನೆ ಹೊಲೆಯ ಕುಲ ಯಾವುದೋ ಆವಂದಿರ ಕುಲ ಯಾವುದು”ಎಂದು ಪ್ರಶ್ನಿಸುವ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಹಿರಿಮೆ ಬಸವಣ್ಣನವರಿಗೆ ಸಲ್ಲುತ್ತದೆ.
ಜಾತ್ಯತೀತ ಸಮಾಜದ ಪರಿಕಲ್ಪನೆ ಶರಣರ ಬಹುದೊಡ್ಡ ಕನಸಾಗಿತ್ತು ಕಾಯಕ ದಾಸೋಹ ಸಿದ್ಧಾಂತ ಬಸವಣ್ಣನವರು ಪ್ರತಿಪಾದಿಸಿದ ಕಾಯಕ ದಾಸೋಹ ಸೂತ್ರ ಒಂದು ವಿನೂತನವಾದ ಆರ್ಥಿಕ ಸಿದ್ದಾಂತಕ್ಕೆ ನಾಂದಿಯಾಯಿತು,
ಕಾಯಕ ಸಂಸ್ಕೃತಿಯ ಪ್ರತಿಪಾದಕರಾದ ಶರಣರು ಗುರುಲಿಂಗ ಜಂಗಮವಾದರೂ ಕಾಯಕದಿಂದಲೇ ಮುಕ್ತಿ ಎಂಬ ಸಂದೇಶ ನೀಡಿದರು.
ಸಮಾಜಕ ಕ್ರಾಂತಿಯಾಗದೆ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳು ಶುದ್ಧವಾಗುವದು ಅಸಾಧ್ಯ ,ಎಂದು ಬಸವಾದಿ ಶರಣರು ಪ್ರಮಾಣಿಕವಾಗಿ ನಂಬಿಕೊಂಡಿದ್ದರು.
ಅವರು ತಮ್ಮ ಧ್ಯೇಯ ಸಾಧನೆಗಾಗಿ ಅನೇಕ ಮಾರ್ಗ ಉಪಾಯಗಳನ್ನು ರೂಪಿಸಿಕೊಂಡರು ಜಾತಿ ನಿರ್ಮೂಲವಾಗದೆ ಸಮಾಜದಲ್ಲಿ ಸಮ ಸಮಾಜ ನಿರ್ಮಾಣ ವಾಗಲು ಸಾಧ್ಯವಿಲ್ಲ ಶಾಂತಿ ಆಗಲಿ, ಸಂಪತ್ತಾಗಲಿ ಕೇವಲ ಸಮ ಸಮಾಜ ನಿರ್ಮಾಣದಿಂದ ಮಾತ್ರ ಸಾಧ್ಯ ಎಂದು ವ್ಯಕ್ತಿತ್ವ ವಿಕಸನಕ್ಕೆ ಮೂಲ ಸಾಧನೇಯಾದ ಅನುಭವ ಮಂಟಪ ಸ್ಥಾಪಿಸಿದರು.
ಅಂಥದೊಂದು ಮುಕ್ತ ವೇದಿಕೆ ಯಾವತ್ತಿಗೂ ಜಗತ್ತಿನಲ್ಲಿ ಅಸ್ತಿತ್ವಕ್ಕೆ ಬಂದಿರಲಿಲ್ಲ, ಅಂತಹ ಅನುಭವ ಮಂಟಪವನ್ನು ಪ್ರಾರಂಭಿಸುವುದರ ಮೂಲಕ ವ್ಯಕ್ತಿತ್ವ ವಿಕಸನದ ಕಡೆ ಗಮನಹರಿಸಿದ ವಚನಕಾರರು ಬಸವಣ್ಣ ಚನ್ನಬಸವಣ್ಣ ಅಲ್ಲಮ ಪ್ರಭು ಅಕ್ಕಮಹಾದೇವಿ ಸಿದ್ದರಾಮ ಈ ಮುಂತಾದ ವಚನಕಾರರ ವ್ಯಕ್ತಿತ್ವ ಅನುಭವ ಮಂಟಪದ ಮೂಲಕ ಸ್ಫೋಟಗೊಂಡು ಬದುಕಿನ ಹೊಸ ದಿಕ್ಕುಗಳನ್ನು ಹುಡುಕುವಲ್ಲಿ ಸಮಾನತೆಯ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾಯಿತು. ಪ್ರತಿಯೊಬ್ಬ ವ್ಯಕ್ತಿಗೂ ವ್ಯಕ್ತಿತ್ವವಿದೆ ಎಂಬ ಸತ್ಯ ಸಂಗತಿ ಸಾಮೂಹಿಕವಾಗಿ ಮೊದಲ ಬಾರಿಗೆ ಮನವರಿಕೆಯಾದದ್ದು ಅನುಭವ ಮಂಟಪದಂತಹ ಅರ್ಥಪೂರ್ಣ ವೇದಿಕೆಯಿಂದ ಎಂಬ ವಿಷಯ ಮರೆಯುವಂತಿಲ್ಲ.
ವ್ಯಕ್ತಿತ್ವ ಎಂದರೇನು ಎಂಬುದನ್ನು ಅರಿಯದ ಸಹಸ್ರಾರು ಸಾಮಾನ್ಯರು ವ್ಯಕ್ತಿತ್ವವನ್ನು ಪಡೆದದ್ದು ಆ ವ್ಯಕ್ತಿತ್ವದ ಬೆಳಕಿನಲ್ಲಿ ಬದುಕನ್ನು ಬೆಳಗಿಸಿತ್ತು ಇಂದಿಗೂ ಪ್ರಸ್ತುತವಾಗುತ್ತದೆ.
ಮನುಷ್ಯರಾಗಿಯು ಕುರಿಗಳಂತೆ ಬಾಳುತ್ತಿದ್ದ ಈ ದೇಶದ ಜನತೆಯಲ್ಲಿ ಮೊದಲ ಬಾರಿಗೆ ಜಾಗೃತಿಯನ್ನು ಉಂಟು ಮಾಡಿದ ವೇದಿಕೆ ಎಂದರೆ ಅದು ಅನುಭವ ಮಂಟಪ.
ಮುಕ್ತ ಹಾಗೂ ಸಮಾನತೆಯ ವೇದಿಕೆಯ ಮುಖಾಂತರ ವಚನಕಾರರು ತಮ್ಮ ವ್ಯಕ್ತಿತ್ವವನ್ನ ರೂಪಿಸಿಕೊಂಡರು. ತಮ್ಮ ವ್ಯಕ್ತಿತ್ವದ ವಿಕಸನದ ಜೊತೆಗೆ ಅನೇಕ ಹೊಸ ಮೌಲ್ಯಗಳನ್ನ ವೇದಿಕೆಯಲ್ಲಿ ಹುಟ್ಟು ಹಾಕುವುದರ ಮೂಲಕ ಸಮಾಜದ ಸಹಸ್ರಾರು ಸಾಮಾನ್ಯ ಜನತೆಯ ವ್ಯಕ್ತಿತ್ವದ ಬೆಳವಣಿಗೆ ಕಾರಣರಾಗಿ ಬದುಕಿನ ಉದ್ದಕ್ಕೂ ಎಲ್ಲರೂ ಸರಿಸಮಾನವಾಗಿ ಜೀವಿಸಬೇಕು ಎಂಬ ಸೂತ್ರ ಅಳವಡಿಸಿದರು.
ಗುರು ಲಿಂಗ ಜಂಗಮ ತತ್ವ ಅನುಷ್ಠಾನದ ಜೊತೆಗೆ ಜಾತೀಯತೆ ನಿರ್ಮಾಣಗೊಳಿಸಿ ಸ್ತ್ರೀಯರಿಗೆ ಸ್ವತಂತ್ರ ಸಮಾನತೆ ಹಕ್ಕನ್ನು ಅಂಗೀಕರಿಸಿ ವ್ಯಕ್ತಿ ಸ್ವತಂತ್ರ ಸರ್ವ ಸಮಾನತೆ ಹಾಗೂ ಪ್ರಜಾಪ್ರಭುತ್ವದ ಆಧಾರದ ಮೇಲೆ ನವ ಸಮಾಜ ಸ್ಥಾಪನೆಯನ್ನು ತನ್ನ ಮೂಲಕ ಜಾಗ್ರತಗೊಳಿಸುವುದೇ ಅವರ ಉದ್ದೇಶವಾಗಿತ್ತು.
ಬಸವಣ್ಣನವರು ಪ್ರತಿಪಾದಿಸಿದ ಕಾಯಕದಾಸೋಹ ಸೂತ್ರ ಒಂದು ವಿನೂತನ ಆರ್ಥಿಕ ಸಿದ್ದಾಂತಕ್ಕೆ ನಾಂದಿಯಾಯಿತು. ಈ ಕಾಯಕ ಸಂಸ್ಕೃತಿಯ ಪ್ರತಿಪಾದಕದಾರದ ಗುರುಲಿಂಗ ಜಂಗಮವಾದರೂ ಕಾಯಕದಿಂದಲೇ ಮುಕ್ತಿ ಎಂಬ ಸಂದೇಶ ನೀಡಿ ಬೆವರಿಗೆ ಹಾಗೂ ಶ್ರಮ ಸಂಸ್ಕೃತಿಗೆ ಸತ್ಯ ಶುದ್ಧ ಕಾಯಕಕ್ಕೆ, ಒಂದು ಹೊಸ ಕಳೆಯನ್ನು ತಂದು ಕೊಟ್ಟರು.
ಶರಣ ಸಂಸ್ಕೃತಿಯಲ್ಲಿ ಸೋಮಾರಿಗಳಿಗೆ ಸ್ಥಾನವಿಲ್ಲ ದುಡಿಮೆ ಇಲ್ಲದೆ ಸಂಪತ್ತು ಗಳಿಸಬೇಕೆಂಬ ಹಿಂದಿನ ಸಮಾಜಕ್ಕೆ “ಕಾಯಕವೇ ಕೈಲಾಸ” ಎಂಬ ಸಂದೇಶ ಕೊಟ್ಟರು,
ವ್ಯಕ್ತಿ ತಾನು ಕಾಯಕದಿಂದ ಗಳಿಸಿರುವ ಸಂಪತ್ತನ್ನು ತಾನುೊಬ್ಬನೇ ಅನುಭವಿಸ ಬೇಕೆಂಬ ತತ್ವವನ್ನು ನಿರಾಕರಿಸಿ ತನ್ನ ಗಳಿಕೆಯಲ್ಲಿ ಸಮಾಜದ ಪಾತ್ರ ಇರುವುದರಿಂದ ಅದು ಸಮಾಜಕ್ಕೆ ವಿನಿಯೋಗ ಆಗಬೇಕು ಎಂಬ ಉದ್ದೇಶದಿಂದ ದಾಸೋಹ ಸೂತ್ರ ಪ್ರತಿಪಾದಿಸಿದರು.
ಹಂಚಿಕೊಂಡು ತಿನ್ನುವುದು ಶರಣ ಧರ್ಮ ಹಂಚಿಕೊಂಡು ತಿನ್ನುವ ಗುಣ ಪ್ರಾಣಿ ಪಕ್ಷಿಗಳಲ್ಲಿ ಕಾಣುವ ಬಸವಣ್ಣನವರಿಗೆ ಮತ್ತೊಬ್ಬರಿಂದ ಕಸಿದುಕೊಂಡು ತಿನ್ನುವ ಮನುಷ್ಯನನ್ನು ನೋಡಿದಾಗ ನೋವಾಗುತಿತ್ತು.
ಅವರ ಈ ವಚನ ಇದಕ್ಕೆ ಸಾಕ್ಷಿಯಾಗಿದೆ, “ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬೆಳಗವನು, ಕೋಳಿ ಒಂದು ಕುಟುಕುಕನ್ನಡೆ ಕೂಗಿ ಕರೆಯದೆ ತನ್ನ ಕುಲವನ್ನಲ್ಲವಾ ಶಿವಭಕ್ತ ನಾಗಿ ಭಕ್ತಿ ಪಕ್ಷ ವಿಲ್ಲದಿದ್ದರೆ ಕಾಗೆ ಕೋಳಿಗಿಂತ ಕರೀ ಕಷ್ಟ ಕೂಡಲಸಂಗಮದೇವ”ಎಂದು ವಚನದ ಮೂಲಕ ಎಲ್ಲರೂ ಸಮಾನರೆಂದು ಸಾರಿದರು .
ಶತಮಾನಗಳಿಂದ ಶೋಷಣೆಗೆ ಒಳಪಟ್ಟಿದ್ದ ಸ್ತ್ರೀ ಸಮುದಾಯದ ಧ್ವನಿಯಾದವರು, ಹೆಣ್ಣು ಮಾಯೆ ಎಲ್ಲಾ ಎಂದು ಪ್ರತಿಪಾದಿಸುತ್ತಾ ಲಿಂಗಭೇದದ ವಿರುದ್ಧ ಸಿಡಿದೆಳುವ ಮೂಲಕ ಶ್ರೀ ಸ್ವಾತಂತ್ರ ಪ್ರತಿಪಾದನೆ ಮಾಡಿದರು ,ಹೆಣ್ಣು ಗಂಡು ಎನ್ನುವ ಕಲ್ಪನೆ ಕೇವಲ ದೇಹಕ್ಕೆ ಮಾತ್ರವೇ ವಿನಹ ಆತ್ಮಕ್ಕೆ ಅಲ್ಲ ಎಂಬ ವಿಶಿಷ್ಟ ಕಲ್ಪನೆ ನೀಡಿದ ಹಿರಿಮೆ ಬಸವಾರಿ ಶರಣರಿಗೆ ಸಲ್ಲುತ್ತದೆ .
ಬಸವಣ್ಣನವರ ದಿವ್ಯೆ ನೇತೃತ್ವದಲ್ಲಿ ನಡೆದ ಸಮಗ್ರ ಕ್ರಾಂತಿಯ ಸ್ವರೂಪವನ್ನು ಅರ್ಥೈಸಬೇಕಾದರೆ ಅವರು ಹಾಗೂ ಅವರ ಸಮಕಾಲಿನ ಶರಣರು ರಚಿಸಿದ ವಚನ ಸಾಹಿತ್ಯಕ್ಕೆ ನಾವು ಮೊರೆ ಹೋಗಬೇಕಾಗುತ್ತದೆ,
ಏಕೆಂದರೆ ಶರಣರು ನಡೆಸಿದ ಕ್ರಾಂತಿಗೆ ವಚನ ಸಾಹಿತ್ಯವೇ ನೀತಿ ಸಂಹಿತೆ, ಅದೇ ಅವರ ಹೋರಾಟದ ಸಂವಿಧಾನ. ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಹೊಸ ರೂಪ ತಂದುಕೊಟ್ಟಂತಹ ಅನುಭವ ಸಾಹಿತ್ಯ, ಈ ವಚನ ಸಾಹಿತ್ಯದ ರಚನೆ ಶರಣರ ಮೂಲ ಉದ್ದೇಶವಾಗಿರಲಿಲ್ಲ ,
ಅದು ಅವರ ನಿರಂತರ ಜೀವನ ಭಾವದಿಂದ ಹಂಚಿಕೊಂಡ ಅಂತರಂಗದ ಸಹಜ ಅಭಿವ್ಯಕ್ತಿತ್ವವಾಗಿತ್ತು, ಶರಣರ ಬದುಕಿನ ಅನುಸಂಧಾನದ ಹಾದಿಯಲ್ಲಿ ಅವರ ಅನುಭವದ ಮೂಸೆಯಲ್ಲಿ ಅರಳಿದ ಅನನ್ಯ ಜ್ಞಾನ ರತ್ನವೇ ಈ ವಚನಗಳು,
ಸಾಹಿತ್ಯದ ಮೂಲ ಆಶಯ ವ್ಯಕ್ತಿಯ ಕಲ್ಯಾಣದೊಂದಿಗೆ ಲೋಕ ಕಲ್ಯಾಣದ ಸಾಧನೆಯಾಗಬೇಕು, ಈ ಸಮಾಜ ಹೊಸ ಸಮಾಜ ವಾಗಿ ನಿರ್ಮಾಣವಾಗಬೇಕು, ಇಲ್ಲಿ ಎಲ್ಲರೂ ಸಮಾನವಾಗಿ ಜೀವಿಸಬೇಕು, ಎಂಬುದೇ ಅವರ ಉದ್ದೇಶವಾಗಿತ್ತು .
ಲಿಂಗಭೇದವಿಲ್ಲದೆ ವರ್ಣಭೇದವಿಲ್ಲದೆ ಎಲ್ಲಾ ಶರಣರು ಒಂದೆ ಕಡೆ ಸೇರಿ ತಮ್ಮ ವಿಚಾರಗಳನ್ನ ಅಭಿವ್ಯಕ್ತಿಗೊಳಿಸುವ ಇತರ ವಿಚಾರಗಳನ್ನು ಹಂಚಿಕೊಳ್ಳುವ ದಾಸೋಹ ಕೇಂದ್ರವಾದ ಅನುಭವ ಮಂಟಪದಲ್ಲಿ ಸಮ ಸಮಾಜದ, ನವ ಸಮಾಜದ ಕನಸನ್ನು ಕಾಣುತ್ತಿದ್ದರು ಅದಕ್ಕಾಗಿ ಶ್ರಮಿಸುತ್ತಿದ್ದರು.
ಯಾವುದೇ ರೀತಿಯ ಭೇದ ಭಾವವಿಲ್ಲದೆ ಬೇರೆಯವರ ಚಿಂತನೆಗಳನ್ನು ಆಲಿಸಿ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು.
“ದಯೆ ಧರ್ಮದ ಮೂಲವಯ್ಯ ದಯೆ ಇಲ್ಲದ ಧರ್ಮ ಯಾವುದಯ್ಯ? ದಯಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯೆ ಧರ್ಮದ ಮೂಲವಯ್ಯ ಕೂಡಲಸಂಗಮದೇವ ನಂತ ನೊಲ್ಲನಯ್ಯ “ಎಂಬ ಬಸವಣ್ಣನವರ ವಚನದಂತೆ ಶರಣ ಧರ್ಮದ ಮೂಲ ಆಧಾರವೇ ದಯೆ ಶರಣ ಧರ್ಮದ ಮೂಲ ತಳಹದಿಯೇ ದಯೆ, ಯೆಂಬ ಸೂತ್ರ ದೊಂದಿಗೆ ಪರಸ್ಪರ ಪ್ರೀತಿ ಪ್ರೇಮ ದಯೆಯಿಂದ ಮಾನವೀಯ ಗುಣಗಳಿಂದಾಗಿ ಶರಣರು ಪ್ರತಿಪಾದಿಸಿದ ಧರ್ಮ ಮಾನವ ಧರ್ಮವಾಯಿತು .
ಶರಣರು ಕೇವಲ ಮಾನವರಲ್ಲಿ ಮಾತ್ರ ದಯೆ ತೋರಲಿಲ್ಲ ಇಡೀ ಜೀವರಾಶಿಗೆ ದಯೆ ಮಳೆಯನ್ನು ಸುರಿಸಿದರು ಶರಣರು ಧಾರ್ಮಿಕ ಚಿಂತನೆ ಉಳ್ಳವರಾಗಿದ್ದರಿಂದ ಮೂಢನಂಬಿಕೆಗಳನ್ನು ಧರ್ಮದ ಹೆಸರಿನಲ್ಲಿ ಪ್ರೋತ್ಸಾಹಿಸುತ್ತಿರಲಿಲ್ಲ.
ಬದಲಿಗೆ ಮೂಡನಂಬಿಕೆಗಳ ವಿರುದ್ಧ ಸಮರ ಸಾರುತ್ತಿದ್ದರು ಅವರು ಯಜ್ಞ ಯುಗಾದಿಗಳ ಖಂಡಿಸಿ ತಿಥಿ ನಕ್ಷತ್ರ ಯೋಗ ಕರಣ ಹೀಗೆ ಇವುಗಳ ಹೆಸರಲ್ಲಿ ಶೋಷಿಸುವ ವಿರುದ್ಧ ಸಿಡಿದೆದ್ದು ನಿಂತಿದ್ದರು.
ಶರಣರು ಬದುಕಿನಿಂದ ಎಂದು ವಿಮುಖರಾದವರಲ್ಲ ಪಲಾಯನವಾದಿಗಲಾಗಿರಲಿಲ್ಲ ಇಹಪರಗಳ ಸಮನ್ವಯದ ಸೂತ್ರವನ್ನು ಬದುಕಿನಲ್ಲಿ ಆವಿಷ್ಕಾರಗಳಿಸಿಕೊಂಡರು.
ಲೌಕಿಕ ಬದುಕಿನಲ್ಲಿ ಯಾರು ಪ್ರಮಾಣಕರಾಗಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿ ಸಹ ಮಾನವರಿಂದ ಮೆಚ್ಚುಗೆ ಹಾಗು ಪ್ರೀತಿಯನ್ನು ಗಳಿಸಿಕೊಳ್ಳುತ್ತಾರೋ ಅವರು ಇಲ್ಲಿಯೂ ಸಲ್ಲುತ್ತಾರೆ ಅಲ್ಲಿಯೂ ಸಲ್ಲುತ್ತಾರೆ ಎಂಬ ಶರಣರ ದೃಷ್ಟಿಯಲ್ಲಿ ಸ್ವರ್ಗ ನರಕಗಳ ಕಲ್ಪನೆ ಕೇವಲ ಕಾಲ್ಪನಿಕ ಎಂದು
“ಲೋಕವೆಂಬುದು ಕರ್ತಾರನ ಕಮ್ಮಟವಯ್ಯ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ಕೂಡಲಸಂಗಮದೇವ ”
ಎಂದು ಹೇಳುವದರ ಮುಖಾಂತರ ಬದುಕಿನಲ್ಲಿ ಸಂದೇಶವನ್ನು ಸಾರಿದರು ಶರಣರ ವಿಚಾರಧಾರೆಗಳು ಅನಾನ್ಯವಾಗಿದ್ದವು ಯಾವುದೋ ಕಾಲ್ಪನಿಕ ಸ್ವರ್ಗದ ಬಗ್ಗೆ ಚಿಂತಿಸುತ್ತಾ ಇಹದ ಬದುಕನ್ನ ಅನುಭವಿಸದೆ ಇರುವವರಿಗೆ ಶರಣರ ಈ ಸಂದೇಶ ಇಹದ ಬದುಕಿಗೆ ಇರುವ ಮಹತ್ವದ ವನ್ನು ಎತ್ತಿ ತೋರಿಸುತ್ತೆ.
ಸಂಸ್ಕೃತಿಯ ಮೂಲ ಆಶಯ ಸಮಾನತೆಯ ಸುಂದರ ಕಲ್ಯಾಣ ನಿರ್ಮಾಣ, ಅಲ್ಲಿ ವರ್ಗಭೇದವಿಲ್ಲ ವರ್ಣಭೇದವಿಲ್ಲ ಜಾತಿಭೇದವಿಲ್ಲ, ದಯೆ ಧರ್ಮದ ಮೂಲವಾಗಿ ಧರ್ಮಗಳಲ್ಲಿ ಭೇದಗಲಿಲ್ಲದೇ ಮಾನವ ಸಮುದಾಯವನ್ನು ಎಲ್ಲಾ ಅನಿಷ್ಟಗಳಿಂದ ಮುಕ್ತಗೊಳಿಸಿ ಪರಿಪೂರ್ಣತೆಯ ಕಡೆಗೆ ಕಂಡವುದೆ ಶರಣರ ಮುಖ್ಯ ಉದ್ದೇಶವಾಗಿತ್ತು
“ಕಳಬೇಡ ಕೊಲೇಬೇಡ ಹುಸಿಯ ನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದ್ದೀರ ಅಳಿಯಲು ಬೇಡ ಇದೆ ಅಂತರಂಗ ಶುದ್ದಿ ಇದೆ ಬಹಿರಂಗ ಶುದ್ದಿ, ಇದೇ ನಮ್ಮ ಕೂಡಲಸಂಗಮದೇವ ನುಡಿಸುವ ಪರಿ”ಎಂಬ ಬಸವಣ್ಣನವರ ವಚನ ವಿಶ್ವಸಮುದಾಯಕ್ಕೆ ನೀಡಿದ ಬಹುದೊಡ್ಡ ನೀತಿ ಸಂಹಿತೆಯಾಗಿದೆ.
ಶರಣರು ತಮ್ಮ ವಚನಗಳ ಮೂಲಕ ಸ್ವಸ್ಥ ಸಮಾಜಕ್ಕೆ ಅಗತ್ಯವಾದ ನೀತಿ ಸೂತ್ರಗಳ ಸಂದೇಶ ನೀಡಿದ್ದಾರೆ, ಶರಣರ ವಚನಗಳು, ಮಾನವ ಸಮುದಾಯಕ್ಕೆ ನೀಡಿದ ಸಂವಿಧಾನವಿದ್ದಂತೆ , ಭಾರತದ ಸಂವಿಧಾನವನ್ನು ಅಧ್ಯಯನ ಮಾಡಿದಾಗ ಬಸವಣ್ಣನವರು ಪ್ರತಿಪಾದಿಸಿದ ಸಮಾಜದ ಆರ್ಥಿಕ ನೈತಿಕ ಸೂತ್ರಗಳನ್ನು ಸ್ಪಷ್ಟವಾಗಿ ನಾವು ಕಾಣಬಹುದು .
ಶಿವಶರಣರ ಬದುಕು ಇಡಿ ವಿಶ್ವಕ್ಕೆ ಆದರ್ಶಪ್ರಿಯ ಒಾಗಿ ಇಡೀ ಜಗತ್ತಿನ ಒಳಿತಿಗಾಗಿ ಸದಾ ಕಾಲ ನಡೆಯುವಂತಹ ಅವರ ಮನಸ್ಸು ಮನಸ್ಸಿನಂತೆ ಅವರ ವಚನಗಳು ಎಲ್ಲಾ ಕಾಲಕ್ಕೂ ಸಂಜೀವಿನಿಯಾಗಿ ಕೆಲಸ ಮಾಡುತ್ತಿವೆ.
ವಿಶ್ವಬಂದುತ್ವ ನಾಗರಿಕ ಪ್ರಜ್ಞೆಯನ್ನು ಸೃಷ್ಟಸಬಲ್ಲ ಸಾಮರ್ಥ್ಯ ನಮ್ಮ ಶರಣರ ವಚನಗಳಿಗಿದೆ, ಈ ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದೆ ಹೋಗಿದ್ದರು ಅದಕ್ಕೆ ಪೂರಕವಾಗಿರುವ ಮೌಲ್ಯಗಳ ವೈಜ್ಞಾನಿಕ ಸೂತ್ರ ಸತ್ಯಗಳು ಬಸವಾದಿ ಶರಣರು ಕೊಟ್ಟ ಸಮ ಸಮಾಜದಲ್ಲಿದೆ
ಮನುಷ್ಯತ್ವವನ್ನು ತಟ್ಟಿ ಎಚ್ಚರಿಸುವ ಅಂತಹ ಮನುಷ್ಯನ ಜೀವನದ ಜೀವಂತಿಕೆಯ ಕಾಪಾಡುತ್ತವೆ ಶರಣರ ಮೌಲ್ಯಗಳು ಮಾತಿನ ಪ್ರತಿಮೆಗಳು ಅವುಗಳಲ್ಲಿ ಜೀವನದ ಪರಮಾ ಸತ್ಯ ಬಿಂಬಿತವಾಗಿದೆ ಮನುಷ್ಯ ಕಳೆದುಕೊಂಡಿರುವ ಸಹಜ ಮುಗ್ಧತೆಯನ್ನು ಶರಣರ ಮೌಲ್ಯಗಳು ನಮ್ಮನ್ನು ಹುಡುಕಿ ಕೊಡುತ್ತವೆ ,
ಸಹಜವಾಗಿ ಸರಳವಾಗಿ ನಿರಾಳವಾಗಿ ಬದುಕುತ್ತೇವೆ ಎಂಬುವ ಧೈರ್ಯವಿದ್ದರೆ ಆ ಶರಣರ ಮೌಲ್ಯ ತತ್ವಗಳಾಗಿವೆ. ನಮ್ಮ ಅಂತರಂಗ ಬಹಿರಂಗಗಳೆರಡು ತೆರೆದು ತೋರಿಸುವ ಶರಣರ ಬದುಕು ಸ್ಪಟಿಕದಂತಹ ಪಾರದರ್ಶಕವಾಗಿದೆ.
ಇಂದಿನ ಬದುಕಿಗೆ ಅವರ ಮೌಲ್ಯಗಳಲ್ಲಿ ಸಮ ಸೃಷ್ಟಿ, ಆರ್ಥಿಕ ಚಿಂತನೆ ಇರಬಹುದು ಸಮಾಜದ ಚಿಂತನೆ ಇರಬಹುದು ,ಮನುಕುಲದ ಸರ್ವಾಂಗೀಕರಣ ಉನ್ನತಿ ಇರಬಹುದು ,ಈ ಎಲ್ಲವೂ ಸಮ ಸಮಾಜಕ್ಕಾಗಿಯೇ ಶರಣರ ಬದುಕಿನ ಸಂಕಲ್ಪವಾಗಿತ್ತು.
ಸಮಾಜದ ಕ್ರಾಂತಿಯಾಗದೆ ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳು ಶುದ್ಧವಾಗಲಾರವು ಎಂದು ಬಸವದಿ ಪ್ರಮಥರ ಪ್ರಮಾಣಕವಾಗಿ ನಂಬಿದ್ದರು. ತಮ್ಮ ಅಧ್ಯಾಯ ಸಾಧನೆಗಾಗಿ ಅನೇಕ ಮಾರ್ಗಗಳನ್ನ ರೂಡಿಸಿಕೊಂಡಿದ್ದ ಶರಣರು ಜಾತಿ ನಿರ್ಮೂಲನೆ ಜಾಗದ ಸಮಾಜದಲ್ಲಿ ಐಕ್ಯ ಉಂಟಾಗದು ಐಕ್ಯದಿಂದ ಅಲ್ಲದೆ ಕ್ಷೇಮ ಶಾಂತಿಗಳಾಗಲಿ ಸಂಪತ್ತಾಗಲಿ ಕೈಗೂಡದು. ಬಾಹ್ಯ ಶಾಂತಿ ಇಲ್ಲದೆ ಆಂತರಿಕ ಶಾಂತಿ ದೊರಕದು ಹಾಗಾಗಿ ಪ್ರಜಾಪ್ರಭುತ್ವದ ಮೂಲಗಳಿಂದ ಸಮಾನತೆ ಸ್ವತಂತ್ರತೆ ಐಕ್ಯದಿಂದ ಮಾತ್ರ ಸಾಧ್ಯ ,
ಅದಕ್ಕಾಗಿ ಇವೆಲ್ಲ ನಾವು ಅನುಸರಿಸಬೇಕಾಗಿದೆ.
ನಡೆ-ನುಡಿಗಳ ಹೊಂದಾಣಿಕೆಯೆ ನೀತಿಯ ಪ್ರಥಮ ಸೋಪಾನ ಎಂದು ಹೇಳಿದ ಶರಣರು ಸ್ಪಷ್ಟವಾಗಿ ನುಡಿದಂತೆ ನಡೆಯುವ ಜನ ಸಾವಿರ ಕೊಬ್ಬ ಯುಗ ಕೊಬ್ಬ ಸಿಕ್ಕರೆ ಹೆಚ್ಚು ಎಂದರು.
“ಡಿಟವ ನುಡಿಯುವುದು ನುಡಿದಂತೆ ನಡೆಯುವುದು ನಡೆದು ತಪ್ಪುವ ಪ್ರಪಂಚವನಲ್ಲ ನಮ್ಮ ಕೂಡಲಸಂಗಮ”ಹೀಗೆ ಅನೇಕ ವಚನಗಳಲ್ಲಿ ಜೀವನದ ಮೌಲ್ಯಗಳನ್ನ ವಿವರಿಸುತ್ತಾ ವೈಚಾರಿಕತೆ ಮೂಲಕ ಮೂಢ ನಂಬಿಕೆ ತೆಗೆದು ಹಾಕಿದರು.
ವರ್ಣಾಶ್ರಮ ವಿರೋಧ ಮತ್ತು ಅಸ್ಪೃಶ್ಯತಾ ನಿರ್ಮೂಲನೆಗಳಿಂದ ಜಾತಿ ವಿನಾಶಕ್ಕೆ ಮಾರ್ಗ ಹುಡುಕಿದರು, ಶೋಷಣೆಗಳನ್ನ ತಡೆಗಟ್ಟಲು ಕಂಕಣ ಬದ್ಧರಾಗಿ ನಿಂತರು ,
ದಲಿತ ಚಳುವಳಿ ಸ್ತ್ರೀ ಚಳುವಳಿ ದೀನದಲಿತರ ಉದ್ಧಾರ ಹೀಗೆ ಸ್ವರ್ಗ ನರಕಗಳ ಎಂಬ ಕಾಲ್ಪನಿಕ ಲೋಕಗಳ ಬಗ್ಗೆ ಮೌಡ್ಯ ಅಂಧಕಾರದಲ್ಲಿದ್ದ ಜನರನ್ನ ಗಟ್ಟಿ ನೆಲದ ಮೇಲೆ ಸತ್ಯದ ಬೆಳಕಲ್ಲಿ ಕೊಂಡೊಯ್ದರು.
21ನೇ ಶತಮಾನದ ಸಮಾಜದ ಆರ್ಥಿಕ ಅಗತ್ಯಗಳನ್ನ 9 ಶತಮಾನಗಳ ಹಿಂದೆ ಕಲ್ಪಿಸಿಕೊಂಡಿದ್ದ ಬಸವಣ್ಣನವರು ಮಹಾನ್ ದಾರ್ಶನಿಕ ಇಂದಿಗೂ ಬಸವಣ್ಣನವರ ಪ್ರತಿಪಾದಿಸಿದ ಶರಣ ಸಂಸ್ಕೃತಿ ಇಡೀ ವಿಶ್ವಕ್ಕೆ ನೀಡಿದ ಆದರ್ಶ ಮಾನವ ಸಂಸ್ಕೃತಿಯಾಗಿದೆ, ಅವರ ವಚನಗಳು ಸರ್ವಕಾಲಿಕ ಪ್ರಸ್ತುತ ಹೊಂದಿದೆ.
ಬಸವಣ್ಣನವರು ಕಟ್ಟವಹಿಸಿದ ಸಮಾಜದ ಆರ್ಥಿಕ ಧಾರ್ಮಿಕ ಸಮಾನತೆಯನ್ನು ಸಾರುವಂತ ಆದರ್ಶ ಸಮಾಜ ವರ್ಣರಹಿತ ವರ್ಗ ರಹಿತ ಜಾತಿ ರಹಿತ ಸುಂದರ ಸಮಾಜದ ಕಲ್ಪನೆ 12ನೇ ಶತಮಾನದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬಂದದ್ದು ಅವರ ದೂರದೃಷ್ಟಿಯೇ ಪ್ರತಿಬಿಂಬ ಮಾನವೀಯತೆಯ ಸಂಕೇತ ಸಮಾಜಕ ಧಾರ್ಮಿಕ ಆರ್ಥಿಕ ಚಿಂತನೆಗೆ ಸಾಧನವಾದುದ್ದು ಅವರು ರಚಿಸಿದ ಸಾಹಿತ್ಯ ಶರಣ ಸಾಹಿತ್ಯ ವಚನ ಚಳುವಳಿ ವಚನ ಸಾಹಿತ್ಯ ವಿಶ್ವದ ಸಾಹಿತ್ಯದ ಸಾಲಿನಲ್ಲಿ ಸರ್ವಕಾಲಿಕವಾಗಿ ಅತ್ಯಂತ ಗಟ್ಟಿಯಾಗಿ ನಿಲ್ಲುವಂತಹ ಪ್ರಜಾ ಸಾಹಿತ್ಯವಾಗಿದೆ.
ಬಸವಣ್ಣನವರು ಕಂಡ ವರ್ಣರಹಿತ ಜಾತಿರಹಿತ ಧಾರ್ಮಿಕ ಸಮಾನತೆಯ ಸಮಾಜ ನಮ್ಮೆಲ್ಲರ ಇಂದಿನ ಆಶಯವೇವಾಗಬೇಕಾಗಿದೆ.ಹಾಗಾಗಿ ಈ ಆಶಯದೊಂದಿಗೆ ನಮ್ಮೆಲ್ಲರ ಪ್ರಯತ್ನವಿರಲಿ.
–ಮೇನಕಾ ಪಾಟೀಲ್ ಬೀದರ್
9731849625