ಒಳ ಮೀಸಲಾತಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸದಿರಲು ಮನವಿ

0
59

ಕಲಬುರಗಿ: .28 ರಂದು ರಾಜ್ಯ ಸರ್ಕಾರವು ‘ಒಳ ಮೀಸಲಾತಿ’ ಕುರಿತು ‘ಸಚಿವ ಸಂಪುಟ ಸಭೆಯಲ್ಲಿ’ ನಿಧ9ರಿಸಬೇಕೆಂದು “ಗೋರಸೇನಾ” ರಾಷ್ಟ್ರೀಯ ಸಂಘಟನೆ ವತಿಯಿಂದ ಸಂಸದರು, ಸಚಿವರು, ಶಾಸಕರು, ಎಂಎಲ್‍ಸಿ ಅವರಿಗೆ ಜಿಲ್ಲಾ ಅಧ್ಯಕ್ಷ ಮಾನಸಿಂಗ್ ಆರ್. ಚವ್ಹಾಣ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯದ ಲಂಬಾಣಿ ಬಂಜಾರಾ ಸಮುದಾಯಕ್ಕೆ ಮಾರಕವಾಗಿ ಕಾಡುತ್ತಿರುವ ಒಳಮೀಸಲಾತಿ ಮತ್ತು ವರ್ಗೀಕರಣ ವನ್ನ “ಗೋರಸೇನಾ” ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕ ತೀವ್ರವಾಗಿ ವಿರೋಧಿಸುತ್ತದೆ. ಈ ವಿಚಾರವಾಗಿ ರಾಜ್ಯ ಸರ್ಕಾರವು ‘ಒಳ ಮೀಸಲಾತಿ’ ಕುರಿತು ದಿ.28-10-2024 ರಂದು ‘ಸಚಿವ ಸಂಪುಟ ಸಭೆಯಲ್ಲಿ’ ನಿರ್ಧರಿಸಲು ತಯಾರಿ ನಡೆಸಿರುವುದನ್ನು ಖಂಡಿಸಿದ್ದು, ರಾಜ್ಯದ ಲಂಬಾಣಿ, ಕೋರಚ, ಕೋರಮ ಮತ್ತು ಭೋವಿ ಸಮುದಾಯಗಳನ್ನು ಒಂದು ಗುಂಪಿನಲ್ಲಿ ಸೇರಿಸಿ, ಈ ಸಮುದಾಯಗಳನ್ನ ಸಮಾಜದ ಮುಖ್ಯವಾಹಿನಿಯಿಂದ ಹಿಂದ್ದಿಕ್ಕ ಬೇಕೆಂಬ ಹುನ್ನಾರವನ್ನ ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Contact Your\'s Advertisement; 9902492681

‘ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್’ ರವರು ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು, ಅಸಂವಿಧಾನಾತ್ಮಕ ಮತ್ತು ಅವೈಜ್ಞಾನಿಕ ವಾಗಿ ವರ್ಗೀಕರಣ ಸರ್ಕಾರ ಮಾಡಕೂಡದು. ಮೀಸಲಾತಿ ವರ್ಗೀಕರಣ, ರಾಜ್ಯದಲ್ಲಿ ಇರುವ ಎಲ್ಲ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೆ ಮತ್ತು ವೈಜ್ಞಾನಿಕವಾಗಿ ದತ್ತಾಂಶವನ್ನು ಸಂಗ್ರಹಿಸದೆ ತರಾತುರಿಯಲ್ಲಿ ಮಾಡಕೂಡದು ಎಂದು ಅವರು ಒತ್ತಾಯಿಸಿದ್ದಾರೆ.

ಪರಿಶಿಷ್ಟರ ಜಾತಿಪಟ್ಟಿ ಯಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಿ, ರಾಜಕೀಯ ಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸದೆ ಒಳಮೀಸಲು ಹಂಚಿಕೆ ನಿರ್ಧಾರ ಸಮಂಜಸವಾದ ನಡೆಯಲ್ಲ.ರಾಜ್ಯ ಸರ್ಕಾರವು’ ಸರಿಯಾದ ಅಧ್ಯಯನ ಇಲ್ಲದೆ ಪರಿಶಿಷ್ಟರ ಮೀಸಲಾತಿಯನ್ನು ವರ್ಗೀಕರಿಸಬಾರದೆಂದು ಒತ್ತಾಯಿಸಿ “ಗೋರಸೇನಾ” ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕ, ದಿನಾಂಕ 02 ಅಕ್ಟೋಬರ್ 2024 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನೆರವೇರಿದ ಸತ್ಯಾಗ್ರಹದಲ್ಲಿ ಭಾಗವಹಿಸಿದ ಸುಮಾರು 500 ಕ್ಕೂ ಹೆಚ್ಚು ಸತ್ಯಾಗ್ರಹಿಗಳನ್ನ ಸಾಕ್ಷಿಯಾಗಿಸಿ, ಅವರೆಲ್ಲರ ಸಮಕ್ಷಮ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುತ್ತದೆ ಎಂದು ತಿಳಿಸಿದರು.

‘ಒಳ ಮೀಸಲಾತಿ’ ಸಚಿವ ಸಂಪುಟ ಸಭೆಯನ್ನು’ ವಿರೋಧಿಸಿ, ರಾಜ್ಯದ ಎಲ್ಲ ಲಂಬಾಣಿ, ಕೋರಚ, ಕೋರಮ ಮತ್ತು ಭೋವಿ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಕೂಡದು ಬಿಜೆಪಿ ಹಠಾವೋ ತಾಂಡಾ ಬಚಾವೋ ಎಂಬ ಘೋಷಣೆಯಂತೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಹಠಾವೋ ಎಂಬ ಘೋಷಣೆಗೆ ಬದಲಾಗದಂತೆ ನಿಗಾವಹಿಸಲು ಎಚ್ಚರಿಕೆ ವಹಿಸಬೇಕೆಂದು ರಾಜ್ಯ ಘಟಕದ ಪದಾಧಿಕಾರಿಗಳು ಸಂಸದರು, ಸಚಿವರು ಹಾಗೂ ಎಲ್ಲಾ ಶಾಸಕರುಗಳಿಗೆ ಮತ್ತು ಸಂಸದರಿಗೆ ಮನವಿ ಪತ್ರವನ್ನು ಸಲ್ಲಿಸಿ ಅಗ್ರಹಿಸಿದೆ.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಾನಸಿಂಗ್ ಆರ್. ಚವ್ಹಾಣ, ಗೋರ ಸೇನಾ ರಾಜ್ಯ ಉಪಾಧ್ಯಕ್ಷ ರವಿ ಕಾರಭಾರಿ, ರಾಜ್ಯ ಕಾರ್ಯದರ್ಶಿ ಶ್ರೀಧರ ಚವ್ಹಾಣ, ರಾಜ್ಯ ಮಾಧ್ಯಮ ವಕ್ತಾರ ನೇಹರು ಜಾಟೋತ್, ಜಿಲ್ಲಾ ಉಪಾಧ್ಯಕ್ಷ ಯಮರಾಜ ರಾಠೋಡ್, ಕಲಬುರ್ಗಿ ನಗರ ಅಧ್ಯಕ್ಷ ವಿನೋದ್ ರಾಠೋಡ್, ಚೀತ್ತಾಪೂರ ತಾಲ್ಲೂಕು ಅಧ್ಯಕ್ಷ ಮನೋಜ ರಾಠೋಡ್, ಚಿಂಚೋಳಿ ತಾಲೂಕಿನ ಅಧ್ಯಕ್ಷ ಸಿಕಿಂದರ, ಸೇಡಂ ತಾಲ್ಲೂಕಿನ ಅಧ್ಯಕ್ಷ ತುಕಾರಾಮ ಸಭಾವಟ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here