ಕಲಬುರಗಿ: ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಮೀಸಲಿರುವ ಕೇಂದ್ರ ಸರ್ಕಾರದ ‘ಮಿಷನ್ ವಾತ್ಸಲ್ಯ’ ಯೋಜನೆಯ ಕುರಿತಾಗಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನತಾ ಪರಿವಾರ ಸಂಘಟನೆ ಕರ್ನಾಟಕ ಆಗ್ರಹಿಸಿದೆ.
2009ರಿಂದ ಚಾಲ್ತಿಯಲ್ಲಿರುವ ಈ ಯೋಜನೆಯು ತಂದೆಯಿಲ್ಲದ 10 ರಿಂದ 18 ವಯಸ್ಸಿನೊಳಗಿನ ಮಕ್ಕಳಿಗೆ ಸೀಮಿತವಾಗಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಈ ಯೋಜನೆಯ ಕಾಯ್ದೆಯನ್ನು ತೆಗೆದು ನೋಡಿದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಡೆಡ್ ಲೈನ್ ಇರುವುದಿಲ್ಲ, ಅರ್ಹ ಓದುವ ಅನಾಥರು ಯಾವಾಗ ಬೇಕಾದರೂ ಇದಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.
ಜಿಲ್ಲಾಡಳಿತವು ಇದರ ಬಗ್ಗೆ ಪ್ರಚಾರ ಮಾಡದೆ ಇರುವುದರಿಂದ ಈ ಯೋಜನೆಯ ಬಗ್ಗೆ ಅರ್ಹರಿಗೆ ಮಾಹಿತಿಯೇ ಇಲ್ಲ, ಹಾಗಾಗಿ ಈ ಕೂಡಲೇ ಜಿಲ್ಲಾಧಿಕಾರಿಗಳು ಇಂತಹ ಯೋಜನೆಗಳ ಬಗ್ಗೆ ಪ್ರಚಾರ ಮಾಡಬೇಕೆಂದು ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಸಿರಾಜ್ ಶಾಬ್ದಿ, ಖಾಲೀದ್ ಅಬ್ರಾರ್,ಅಜರ್ ಮುಬಾರಕ್, ಮುಬೀನ್ ಪೆಹಲವಾನ್ ಸೇರಿದಂತೆ ಮತ್ತಿತರರು ಇದ್ದರು.