ಕಲಬುರಗಿ: ಇಂದಿನ ವರ್ತಮಾನದ ಗಾಯಗಳಿಗೆ ಮದ್ದು ವಚನ ಸಾಹಿತ್ಯದಲ್ಲಿದೆ ಎಂದು ಧಾರವಾಡದ ವಿನಯಾ ಒಕ್ಕುಂದ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೈಭವಾನಿ ಕನ್ವೆನ್ಷನ್ ಹಾಲ್ ನಲ್ಲಿ ಶನಿವಾರದಿಂದ ನಡಡಯುತ್ತಿರುವ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಮೊದಲ ಗೋಷ್ಠಿಯಲ್ಲಿ ಒಳಗೆ ಸುಳಿವ ಆತ್ಮ ವಿಷಯ ಕುರಿತು ಮಾತನಾಡಿದ ಅವರು, ವಚನ ಸಾಹಿತ್ಯವನ್ನು ಈವರೆಗೆ ಸಾಂಪ್ರದಾಯಿಕ ಓದು, ಪ್ರಗತಿಪರ ಓದು, ನಿರಾಕರಣೆಯ ಓದು ನಿಟ್ಟಿನಲ್ಲಿ ಅಧ್ಯಯನ ಮಾಡುತ್ತ ಬರಲಾಗಿದೆ. ಸ್ತ್ರೀ-ಪುರುಷ ಸಮಾನತೆಯನ್ನು ಆದ್ಯತೆಯ ಪ್ರಶ್ನೆಯಾಗಿ ಸ್ವೀಕಾರ ಮಾಡಬೇಕು ಎಂದು ತಿಳಿಸಿದರು.
ಒಳಗೆ ಸುಳಿವಾತ್ಮ ಹೆಣ್ಣು ಅಲ್ಲ. ಗಂಡು ಅಲ್ಲ. ಶರಣ ಚಳವಳಿ
ಚಳವಳಿ. ಹೆಣ್ಣಿನ ಸಮಸ್ಯೆ ಅಷ್ಟು ಸುಲಭವಾಗಿ ಅರ್ಥೈಸುವುದು ಕಷ್ಟ ಸಾಧ್ಯದ ಕೆಲಸ ಎಂದರು.
ಶರಣ ಕ್ರಾಂತಿಯ ದೀವಿಗೆಗೆ ಎಣ್ಣೆ ಯಾದವರು, ಬತ್ತಿಯಾದವರು, ಬೆಳಕಾದವರು ಶಿವಶರಣೆಯರು. ಸತ್ಯಕ್ಕೆ ಮುಖಾಮುಖಿಯಾಗುವ ಧೈರ್ಯ ನಮಗಿಲ್ಲ. ಅಕ್ಕಮಹಾದೇವಿ ಶರಣ ಸಂದರ್ಭದ ಬಹಳ ದೊಡ್ಡ ವ್ಯಕ್ತಿತ್ವ. ಅವರೊಳಗೆ ಅಧ್ಯಾತ್ಮಶಕ್ತಿ ಇತ್ತು ಎಂದು ಹೇಳಿದರು.
‘ಮಡದಿ ಎಂಬ ಶಬ್ದ ನಿಶ್ಯಬ್ದವಾದೊಡೆ’ ಎಂಬ ವಿಷಯ ಕುರಿತು ಬೆಂಗಳೂರಿನ ಡಾ.ಬಸವರಾಜ ಸಾದರ ಮಾತನಾಡಿದರು.
ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಅಧ್ಯಕ್ಷತೆ ವಹಿಸಿದ್ದರು.
ಅಕ್ಕಮಹಾದೇವಿ ಆಶ್ರಮದ ಡಾ. ಪ್ರಭುಶ್ರೀ ತಾಯಿ, ಡಾ. ಚಂದ್ರಕಲಾ ಬಿದರಿ, ಉಮಾ ಬಸವರಾಜ ಗಾದಗೆ, ಬಸವರಾಜ ಚಾಂದಕವಟೆ, ಡಾ. ಉಷಾದೇವಿ ಹಿರೇಮಠ, ವಿಶಾಲಾಕ್ಷಿ ಕರಡ್ಡಿ ಇತರರು ವೇದಿಕೆಯಲ್ಲಿದ್ದರು.
ಡಾ.ಕರುಣಾ ಜಮುದ್ರಖಾನಿ ನಿರೂಪಿಸಿದರು. ಡಾ. ಶಾಂತಾಮಠ ಸ್ವಾಗತಿಸಿದರು. ಡಾ. ಸಾವಿತ್ರಿ ಪಟ್ಟಣ ವಂದಿಸಿದರು.