ಅಳಂದ ಅ26. ಅಳಂದ ತಾಲ್ಲೂಕಿನ ಕಡಗಂಚಿ ಹೋಬಳಿಯ 10 ಜನ ಕ್ಷಯರೋಗಿಗಳಿಗೆ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಸನ್ನಿಧಿ ಸೇವಾ ಸಂಸ್ಥೆಯ ಮುಕಾಂತರ ಉಚಿತ ಪೌಷ್ಟಿಕಾಂಶ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಷಯರೋಗಿಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಒಂದು ಟ್ರೇ ಮೊಟ್ಟೆ, ಹೆಸರು ಕಾಳು, ಪೌಷ್ಟಿಕಾಂಶ ಪೌಡರ್ ನೀಡಲಾಯಿತು.
ಈ ತರಹದ ಪೌಷ್ಟಿಕಾಂಶ ಆಹಾರವನ್ನು ಆರು ತಿಂಗಳು ನೀಡಲಾಗುವುದು. ಇನ್ನೊಂದು ತಿಂಗಳ ನಂತರ ತಾಲ್ಲೂಕಿನ 99 ಕ್ಷಯರೋಗಿಗಳಿಗೆ ಪೌಷ್ಟಿಕಾಂಶ ಆಹಾರವನ್ನು ನೀಡಿ ಅಳಂದ್ ತಾಲ್ಲೂಕು ಕ್ಷಯ ರೋಗ ಮುಕ್ತ ತಾಲ್ಲೂಕು ಮಾಡಲು ಪ್ರಯತ್ನವನ್ನು ಮಾಡಲಾಗುವುದು ಎಂದು ಕಾರ್ಮೆಲ್ ಜ್ಯೋತಿ ಟ್ರಸ್ಟ್ ನ ಕಾರ್ಯದರ್ಶಿ ಫಾದರ್ . ವಿಲಿಯಂ ಮಿರಾಂದ ಹೇಳಿದರು.
ವೇದಿಕೆ ಮೇಲೆ ಪ್ರಮುಖಾರದ , ಕಾರ್ಮೆಲ್ ಸಂಸ್ಥೆಯ ಮುಖ್ಯ ಅಧಿಕಾರಿ ಫಾದರ್. ಸಿಲ್ವೆಸ್ಟರ್ ಡಿಸೋಜ, ಸನ್ನಿಧಿ ಸಂಸ್ಥೆಯ ಸುಪೀರಿಯರ್ ಹಾಗೂ ಮೌಂಟ್ ಕಾರ್ಮೆಲ್ ಶಾಲೆಯ ವ್ಯವಸ್ಥಾಪಕ ಫಾದರ್ ದೀಪಕ್ ಥೋಮಸ್, ಕಾರ್ಮೆಲ್ ಜ್ಯೋತಿ ಟ್ರಸ್ಟ್ ನ ಕಾರ್ಯದರ್ಶಿ ಫಾದರ್ ವಿಲಿಯಂ ಮಿರಾಂದ, ಹಿರಿಯ ಕ್ಷಯರೋಗದ ಮೇಲ್ವಚಾರಕ ಡಾ. ವಿಶಾಲ್ ಸಜ್ಜನ್ ಹಾಗೂ ಆಶಾ ಕಾರ್ಯಕರ್ತೆಯರು. ಕ್ಷಯರೋಗಿಗಳು, ಇನ್ನಿತರಾರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.