ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

0
135

ಸುರಪುರ: ಹುಣಸಗಿ ತಾಲ್ಲೂಕಿನ ರಾಜಕೊಳೂರ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಕಿಡಿಗೇಡಿಗಳು ಕೆಸರು ಎರಚಿ ಅಪಮಾನಿಸಿದ ಘಟನೆ ಗುರುವಾರ ರಾತ್ರಿ ನಡೆದಿದ್ದು.ವಿಷಯ ತಿಳಿದ ತಾಲ್ಲೂಕಿನ ವಾಲ್ಮೀಕಿ ಸಮಾಜ ಹಾಗು ಮಹರ್ಷಿ ವಾಲ್ಮೀಕಿ ಅಭಿಮಾನಿಗಳು ರಾಜನಕೊಳೂರ ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದರು.

ಈ ಸಂಸರ್ಭದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಅನೇಕ ಮುಖಂಡರು ಮಾತನಾಡಿ,ಈ ಜಗತ್ತಿಗೆ ರಾಮಾಯಣ ದಂತಹ ಮಹಾನ್ ಕೃತಿಯನ್ನು ಕೊಟ್ಟ ಮಹಾನ್ ಪುರುಷ ಮಹರ್ಷಿ ವಾಲ್ಮೀಕಿಯನ್ನು ಅಪಮಾನಿಸುವುದು ಎಂದರೆ ಅದು ಭಾರತದ ಸಂಸ್ಕೃತಿಯನ್ನು ಅಪಮಾನಿಸಿದಂತೆ.ವಾಲ್ಮೀಕಿ ನಮ್ಮ ಸಮಾಜದ ಗುರು,ಆದರ್ಶ ವ್ಯಕ್ತಿ ಅಂತವರ ಭಾವಚಿತ್ರಕ್ಕೆ ಅಪಮಾನಿಸಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತ ಘಟನೆಯಾಗಿದೆ.ಆದ್ದರಿಂದ ಪೊಲೀಸ್ ಇಲಾಖೆ ಇಪ್ಪತ್ನಾಲ್ಕು ಗಂಟೆಯೊಳಗೆ ಕಿಡಿಗೇಡಿಗಳ ಬಂಧಿಸಬೇಕು.ಇಲ್ಲದಿದ್ದಲ್ಲಿ ಹುಣಸಗಿ,ಸುರಪುರ,ಕಕ್ಕೇರಾ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.ನಂತರ ವಾಲ್ಮೀಕಿ ಭಾವಚಿತ್ರವನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಯಿತು.

Contact Your\'s Advertisement; 9902492681

ಪ್ರತಿಭಟನಾ ಸ್ಥಳಕ್ಕೆ ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಆಗಮಿಸಿ ಘಟನೆಗೆ ಕಾರಣರಾದವರನ್ನು ಶೀಘ್ರದಲ್ಲೆ ಬಂಧಿಸಲಾಗುವುದು ಎಂದು ತಿಳಿಸಿದ ನಂತರ ಹುಣಸಗಿ ಕಂದಾಯ ನಿರೀಕ್ಷಕ ಬಸವರಾಜ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಲಾಯಿತು.ಹುಣಸಗಿ ಪೊಲೀಸ್ ಇನ್ಸ್ಪೇಕ್ಟರ್ ವೀರಭದ್ರಯ್ಯ ಹಿರೇಮಠ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಕೊಡೇಕಲ್ ಪಿಎಸ್‌ಐ ಬಾಷುಮೀಯಾ ಇದ್ದರು.

ಪ್ರತಿಭಟನೆಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಭೀಮನಗೌಡ ಅಗತೀರ್ಥ,ವಾಲ್ಮೀಕಿ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಸಿದ್ದನಗೌಡ ಪಾಟೀಲ ಕರಿಬಾವಿ,ಅಧ್ಯಕ್ಷ ಗಂಗಾಧರ ನಾಯಕ,ವೆಂಕಟೇಶ ಬೇಟೆಗಾರ,ರಮೇಶ ದೊರೆ ಆಲ್ದಾಳ,ತಿರುಪತಿ ನಾಯಕ,ಯಮನಪ್ಪ ದೊರೆ,ಬಾಪುಗೌಡ ತೀರ್ಥ,ರಮೇಶ ಬಿರೆದಾರ,ಪರಮಣ್ಣ ಮಡಿಕೇರಿ,ಬಸವರಾಜ ಹವಲ್ದಾರ,ದ್ಯಾವಣ್ಣ ತೋಳದಿನ್ನಿ,ಶೇಖರ್ ತೋಳದಿನ್ನಿ,ಗುಂಡಪ್ಪ ಬೈಲಕುಂಟಿ,ಬಿ.ಎಂ.ಹಳ್ಳಿಕೋಟಿ,ಬಸವರಾಜ ತೆಳಗಿಮನಿ,ಯಮನಪ್ಪ ಬಳಸುತ್ತಿ ಸೇರಿದಂತೆ ನೂರಾರು ಜನರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here