ಸುರಪುರ: ವನವಾಸಿ ಕಲ್ಯಾಣ ಕರ್ನಾಟಕ ಸಂಘಟನೆಯಿಂದ ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಮತ್ತು ಬಿಲ್ವಿದ್ಯೆ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.ಪಂದ್ಯಾವಳಿಯನ್ನು ಸ್ಥಳಿಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ದೇವಿಂದ್ರಪ್ಪ ಮೇಟಿಗೌಡ ಉದ್ಘಾಟಿಸಿದರು.
ಕಾರ್ಯಕ್ರಮದ ವಕ್ತಾರರಾಗಿದ್ದ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗಂಗಾಧರ ನಾಯಕ ಮಾತನಾಡಿ,ವನವಾಸಿ ಕಲ್ಯಾಣ ಸಂಘಟನೆಯು ಎಲ್ಲಾ ಪರಿಶಿಷ್ಟ ಪಂಗಡದ ಜನರ ಅಭಿವೃಧ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ.ಅಲ್ಲದೆ ಸಮಾಜದ ಆರ್ಥಿ,ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃಧ್ಧಿಗೊಳಿಸಲು ಜೊತೆಗೆ ವನಸಿ ಕಲ್ಯಾಣ ಜನರಲ್ಲಿ ಕ್ರೀಡಾ ಮನೋಭಾವನೆಯನ್ನು ಬೆಳೆಸಲು ಇಂತಹ ಪಂದ್ಯಾವಳಿಗಳನ್ನು ಏರ್ಪಡಿಸುವ ಮೂಲಕ ಉತ್ತೇಜನ ನೀಡಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೈಹಿಕ ಶಿಕ್ಷಕ ಲಕ್ಷ್ಮಣ ನಾಯಕ ಬಿರಾದಾರ ಮಾತನಾಡಿ,ದೇಶದಲ್ಲಿರುವ ವನವಾಸಿಗಳನ್ನು ಹಾಗು ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುವ ಮೂಲಕ ವನವಾಸಿ ಕಲ್ಯಾಣ ಸಂಘಟನೆಯು ಇತರೆ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.ರಮೇಶ ದೊರೆ ಆಲ್ದಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಸಾಹುಕಾರ,ವೆಂಕಟೇಶ ಬೇಟೆಗಾರ,ದೈಹಿಕರಾದ ಶಿಕ್ಷಕ ದೇವಿಂದ್ರಪ್ಪ ನಾಯಕ,ನಿಂಗಣ್ಣ,ಲಕ್ಷ್ಮಣ ,ವೆಂಕಟೇಶ ನಾಯಕ ಚಿಂತಲಕುಂಟ,ಕಾಸಪ್ಪ ದೊರೆ,ಮಾನಪ್ಪ,ಗುಂಡಪ್ಪ ಬೈಲಕುಂಟಿ,ಪರಶುರಾಮ ಮಲ್ಲಿಬಾವಿ,ಬಸವಲಿಂಗಪ್ಪ ಯಾದಗಿರಿ ವೇದಿಕೆ ಮೇಲಿದ್ದರು.ಸಿದ್ದಪ್ಪ ರಾಮಸಮುದ್ರ ಸ್ವಾಗತಿಸಿದರು,ರಂಗಪ್ಪ ನಾಯಕ ಬುಂಕಲದೊಡ್ಡಿ ನಿರೂಪಿಸಿದರು,ವೆಂಕಟೇಶ ಶಿವಪುರ ವಂದಿಸಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸುರಪುರ ಶಹಾಪುರ ಮತ್ತು ಯಾದಗಿರಿ ತಾಲ್ಲೂಕಿನ ಕಬ್ಬಡ್ಡಿ ತಂಡಗಳಲ್ಲಿ ಜಿಲ್ಲಾ ಮಟ್ಟದ ಜೂನಿಯರ್ ಕಬಡ್ಡಿಯನ್ನು ಸುರಪುರ ತಾಲ್ಲೂಕಿನ ಲಕ್ಷ್ಮೀಪುರ ತಂಡ ಪ್ರಥಮ ಬಹುಮಾನ ಪಡೆಯಿತು ಹಾಗು ಸಬ್ ಜೂನಿಯರ್ ವಿಭಾಗದಲ್ಲಿ ತೋಳದಿನ್ನಿ ಗ್ರಾಮದ ತಂಡ ಪ್ರಥಮ ಬಹುಮಾನ ಪಡೆಯಿತು.ಇದೇ ಸಂದರ್ಭದಲ್ಲಿ ಬಿಲ್ವಿದ್ಯೆ ಸ್ಪರ್ಧೆಯನ್ನು ನಡೆಸಲಾಯಿತು.