ಕಲಬುರಗಿ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಲಬುರಗಿ ಜಿಲ್ಲಾಧ್ಯಕ್ಷರನ್ನಾಗಿ ವಾಲ್ಮಿಕಿ ಸಮುದಾಯದ ಯುವ ಮುಖಂಡ, ನ್ಯಾಯವಾದಿ ಯಲ್ಲಾಲಿಂಗ ದೊರೆ ಅವರನ್ನು ನೇಮಕ ಮಾಡಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ.ಟಿ ಆರ್ ತುಳಸಿರಾಮ್ ಅವರು ಆದೇಶಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ ಅವರು, ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ನಾಯಕರನ್ನು ವಿಶ್ವಾಸ ತೆಗೆದುಕೊಂಡು ಸಮುದಾಯದ ಏಳಿಗೆಗಾಗಿ ಸಮರ್ಪಣ ಭಾವದಿಂದ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ.